ಇಡ್ಲಿ 'ಬೋರ್' ಎಂದವನಿಗೆ ಟ್ವಿಟ್ಟರ್ ನಲ್ಲಿ ಕ್ಲಾಸ್ ತೆಗೊಂಡ ದಕ್ಷಿಣ ಭಾರತೀಯರು!!

09-10-20 04:59 pm       Headline Karnataka News Network   ದೇಶ - ವಿದೇಶ

ಬ್ರಿಟನ್‌ ಅಧ್ಯಯನ ತಜ್ಞ ಎಡ್ವರ್ಡ್ ಆಂಡರ್ಸನ್‌, ಜಗತ್ತಿನಲ್ಲೇ ಅತ್ಯಂತ ಬೋರಿಂಗ್ ತಿನಿಸೆಂದರೆ ಅದು ಇಡ್ಲಿ ಎಂದಿದ್ದಾರೆ. ಈ ವಿಚಾರ ದಕ್ಷಿಣ ಭಾರತೀಯರಿಗೆಲ್ಲಾ ಭಾರೀ ಅಸಹನೆ ತಂದಿದೆ.

ನವದೆಹಲಿ, ಅಕ್ಟೋಬರ್.09 : ಬ್ರಿಟಿಷ್ ಪ್ರಾಧ್ಯಾಪಕರೊಬ್ಬರು ಇಡ್ಲಿ ಬಲೇ ಬೋರ್‌ ಹೊಡೆಸುವ ತಿನಿಸು ಎಂದು ಟ್ವೀಟ್ ಮಾಡಿದ್ದು ದಕ್ಷಿಣ ಭಾರತೀಯನ್ನರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ. 

ಆನ್ಲೈನ್ ಫುಡ್ ಡೆಲಿವರಿ ಝೊಮ್ಯಾಟೋ ಇತ್ತೀಚೆಗೆ ತನ್ನ ಟ್ವಿಟ್ಟರ್ನಲ್ಲಿ, "ಯಾವ ತಿನಿಸನ್ನು ಜನ ಏಕೆ  ಇಷ್ಟ ಪಡುತ್ತಾರೆ" ಎಂದು ಪ್ರಶ್ನೆ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಬ್ರಿಟಿಷ್‌ ಮೂಲದ ಇತಿಹಾಸ ಪ್ರಾಧ್ಯಾಪಕ ಹಾಗೂ ಭಾರತ- ಬ್ರಿಟನ್‌ ಅಧ್ಯಯನ ತಜ್ಞ ಎಡ್ವರ್ಡ್ ಆಂಡರ್ಸನ್‌, ಜಗತ್ತಿನಲ್ಲೇ ಅತ್ಯಂತ ಬೋರಿಂಗ್ ತಿನಿಸೆಂದರೆ ಅದು ಇಡ್ಲಿ ಎಂದಿದ್ದಾರೆ. ಈ ವಿಚಾರ  ದಕ್ಷಿಣ ಭಾರತೀಯರಿಗೆಲ್ಲಾ ಭಾರೀ ಅಸಹನೆ ತಂದಿದ್ದು, ಟ್ವಿಟ್ಟರ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ತನ್ನ ಟ್ವೀಟ್ ಗೆ ಭಾರೀ ಸಂಖ್ಯೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ  ಎಡ್ವರ್ಡ್ ಕೂಡಲೇ ತಮ್ಮ ಮಾತಿಗೆ ಇನ್ನಷ್ಟು ಸ್ಪಷ್ಟನೆ ಕೊಟ್ಟಿದ್ದಾರೆ. ದಕ್ಷಿಣ ಭಾರತೀಯರೆಲ್ಲಾ ನನ್ನ ಮೇಲೆ ದಾಳಿ ಮಾಡುವ ಮುನ್ನ ದಯವಿಟ್ಟು ಈ ವಿಷಯ ತಿಳಿಯಿರಿ, ದೋಸೆ ಮತ್ತು ಅಪ್ಪಂ ಎಂದರೆ ನನಗೆ ಇಷ್ಟವಾಗುತ್ತದೆ. ಆದರೆ ಇಡ್ಲಿ ಹಾಗೂ ಪುಟ್ಟು ಎಂದರೆ ಸಹಿಸುವುದು ಕಷ್ಟ" ಎಂದಿದ್ದಾರೆ.

A British professor who called idlis "boring" has provoked desi Twitter to unite against him.