ಅರ್ಧ ಸತ್ಯ, ಅಪಪ್ರಚಾರದ ಸುದ್ದಿಗಳನ್ನು ಪ್ರಕಟಿಸದಿರಿ ; ಖಾಸಗಿ ಟಿವಿ ವಾಹಿನಿಗಳಿಗೆ ಕೇಂದ್ರ ಸೂಚನೆ

09-10-20 10:47 pm       Headline Karnataka News Network   ದೇಶ - ವಿದೇಶ

ವ್ಯಕ್ತಿ, ಗುಂಪು ಅಥವಾ ಸಂಸ್ಥೆಗೆ ಸಂಬಂಧಿಸಿ ಅಪಪ್ರಚಾರ, ಅವಹೇಳನಕಾರಿ, ಅವಮಾನಿಸುವ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿವಿ ವಾಹಿನಿಗಳಿಗೆ ಸೂಚನೆ ನೀಡಿದೆ. 

ನವದೆಹಲಿ, ಅಕ್ಟೋಬರ್ 9: ಖಾಸಗಿ ಟಿವಿ ವಾಹಿನಿಗಳು ಸುದ್ದಿ ಸಂಹಿತೆಗೆ ಬದ್ಧರಾಗಿರಬೇಕು. ವ್ಯಕ್ತಿ, ಗುಂಪು ಅಥವಾ ಸಂಸ್ಥೆಗೆ ಸಂಬಂಧಿಸಿ ಅಪಪ್ರಚಾರ, ಅವಹೇಳನಕಾರಿ, ಅವಮಾನಿಸುವ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿವಿ ವಾಹಿನಿಗಳಿಗೆ ಸೂಚನೆ ನೀಡಿದೆ. 

ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್ ಲಿಂಕ್ ಕುರಿತ ಸುದ್ದಿಗಳನ್ನು ಪ್ರಸಾರ ಮಾಡುವಾಗ ನಟಿ ರಕುಲ್ ಪ್ರೀತ್ ಸಿಂಗ್ ತನ್ನ ಹೆಸರು ಬಳಸಿದ ಟಿವಿ ವಾಹಿನಿಗಳ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಮಾನಹಾನಿಕರವಾಗಿ ಕಾರ್ಯಕ್ರಮ ಪ್ರಸಾರ ಮಾಡದಂತೆ ಟಿವಿ ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದರು. 

ವಿಚಾರಣೆ ಸಂದರ್ಭದಲ್ಲಿ ಕೋರ್ಟ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಭಿಪ್ರಾಯ ಕೇಳಿತ್ತು. ಇದರ ಬೆನ್ನಲ್ಲೇ, ಸಚಿವಾಲಯ ಈ ಆದೇಶ ಮಾಡಿದ್ದು ಟಿವಿ ವಾಹಿನಿಗಳಿಗೆ ಈ ಹಿಂದೆಯೂ ಇದೇ ರೀತಿಯ ಸೂಚನೆ ನೀಡಲಾಗಿತ್ತು. ಟಿವಿ ವಾಹಿನಿಗಳು 1995ರ ಕೇಬಲ್ ಟಿವಿ ಸಂಪರ್ಕ ಕಾಯ್ದೆಯನ್ನು ಉಲ್ಲಂಘಿಸಬಾರದು. ಅರ್ಧ ಸತ್ಯ, ಸುಳ್ಳು ವರದಿಗಳು, ಮಾನಹಾನಿಕರ ಆಗುವ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡಬಾರದೆಂದು ಕಾಯ್ದೆ ಹೇಳುತ್ತದೆ. ಅದನ್ನು ಯಥಾವತ್ ಪಾಲನೆ ಮಾಡಬೇಕು. ಗುಂಪು ಅಥವಾ ವ್ಯಕ್ತಿಯನ್ನು ಅಪಪ್ರಚಾರ, ಮಾನಹಾನಿ ಆಗುವ ರೀತಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಸಚಿವಾಲಯ ತನ್ನ ಆದೇಶದಲ್ಲಿ ನಿರ್ದೇಶನ ನೀಡಿದೆ.

The notice from the ministry also said that channels should not broadcast anything that could “encourage or incite violence or anything against maintenance of law and order