ಬ್ರೇಕಿಂಗ್ ನ್ಯೂಸ್
11-11-22 02:57 pm HK News Desk ದೇಶ - ವಿದೇಶ
ಕಾಸರಗೋಡು, ನ.11 : ಬದಿಯಡ್ಕದ ದಂತ ವೈದ್ಯ ಡಾ.ಕೃಷ್ಣಮೂರ್ತಿ ಸಾವಿನ ಪ್ರಕರಣದಲ್ಲಿ ವೈದ್ಯರಿಗೆ ಬೆದರಿಕೆ ಒಡ್ಡಿದ್ದರು ಎನ್ನಲಾದ ಐದು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತ್ ಕಾರ್ಯದರ್ಶಿ ಅಲಿ ತುಪ್ಪೆಕಲ್ಲು, ಮುಸ್ಲಿಂ ಲೀಗ್ ಮುಖಂಡ ಮುಹಮ್ಮದ್ ಹನೀಫ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್, ಮುಹಮ್ಮದ್ ಶಿಯಾಬುದ್ದೀನ್, ಮುನಿಯೂರು ನಿವಾಸಿ ಉಮರುಲ್ ಫಾರೂಕ್ ಬಂಧಿತರು.
ಮಹಿಳೆಯ ಚಿಕಿತ್ಸೆ ವಿಚಾರದಲ್ಲಿ ಅಲಿ ಹಾಗೂ ಅನ್ವರ್ ನೇತೃತ್ವದಲ್ಲಿ ಕ್ಲಿನಿಕ್ ಗೆ ಆಗಮಿಸಿದ್ದ ಗುಂಪು ವೈದ್ಯರಿಗೆ ಕೊಲೆ ಬೆದರಿಕೆ ಒಡ್ಡಿತ್ತು. ಇದರಿಂದ ಬೆದರಿದ ಡಾ.ಕೃಷ್ಣಮೂರ್ತಿ, ನನ್ನನ್ನು ಬದುಕಲು ಬಿಡಲ್ಲ ಎಂದು ಹೇಳಿಕೊಂಡು ಕ್ಲಿನಿಕ್ ಬಿಟ್ಟು ಹೊರಗೆ ಹೋಗಿದ್ದರು. ಆನಂತರ, ಯಾರಿಗೂ ಕಾಣಲು ಸಿಕ್ಕಿರಲಿಲ್ಲ. ಗುರುವಾರ ಸಂಜೆ ಅವರ ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಕುಂದಾಪುರ ಬಳಿಯ ಹಟ್ಟಿಯಂಗಡಿ ಸಮೀಪದ ರೈಲು ಹಳಿಯಲ್ಲಿ ಪತ್ತೆಯಾಗಿತ್ತು.
ಮೇಲ್ನೋಟಕ್ಕೆ ಆತ್ಮಹತ್ಯೆ ಎನ್ನಲಾಗುತ್ತಿದ್ದರೂ, ಸಾವಿನ ವಿಚಾರದಲ್ಲಿ ಹಲವು ಅನುಮಾನ ಕೇಳಿಬಂದಿದೆ. ಮನೆಯವರು ಹೇಳುವ ಪ್ರಕಾರ ಜಾಗದ ವಿಚಾರದಲ್ಲಿ ತಕರಾರು ಇತ್ತು ಎನ್ನಲಾಗಿದೆ. ಕೃಷ್ಣಮೂರ್ತಿ ಅವರಿಗೆ ಸೇರಿದ ಜಾಗವನ್ನು ಮಾರಾಟ ಮಾಡುವಂತೆ ತಂಡವೊಂದು ಒತ್ತಡ ಹೇರುತ್ತಿದ್ದ ಬಗ್ಗೆ ಮಾಹಿತಿಗಳಿವೆ. ಆದರೆ ಕೃಷ್ಣಮೂರ್ತಿ ಅವರು ತಮ್ಮ ಜಾಗವನ್ನು ಮಾರಾಟ ಮಾಡುವುದಿಲ್ಲ. ಅಲ್ಲಿ ಆಸ್ಪತ್ರೆ ಕಟ್ಟಬೇಕೆಂಬ ಕನಸಿದೆ ಎಂದು ತನ್ನ ಆಪ್ತರಲ್ಲಿ ಹೇಳಿಕೊಂಡಿದ್ದರು. ಹಾಗಿದ್ದರೂ, ಆರು ತಿಂಗಳಿನಿಂದ ಜಾಗದ ವಿಚಾರದಲ್ಲಿ ಕಿರುಕುಳ, ಬೆದರಿಕೆ ಅನುಭವಿಸಿದ್ದರು.
ಮೃತದೇಹವನ್ನು ಪತ್ತೆ ಮಾಡಿದ ಕುಟುಂಬಸ್ಥರು ಹೇಳುವ ಪ್ರಕಾರ, ಅವರು ಹಾಕ್ಕೊಂಡಿದ್ದ ಧಿರಿಸು ಬದಲಾಗಿತ್ತು. ನಾಪತ್ತೆಯಾದ ದಿನ ಹಾಕಿದ್ದ ಅಂಗಿ ಇರಲಿಲ್ಲ. ಜೊತೆಗೆ, ಬೆಲ್ಟ್, ವಾಚ್, ಪರ್ಸ್ ಇತ್ಯಾದಿಯೂ ಸ್ಥಳದಲ್ಲಿ ಸಿಕ್ಕಿಲ್ಲ. ಒಳ ಉಡುಪು ಕೂಡ ಕಾಣೆಯಾಗಿದೆ. ಇದಲ್ಲದೆ, ಅವರ ಬೈಕ್ ಕುಂಬಳೆ ಬಳಿ ಪತ್ತೆಯಾಗಿದ್ದು ಅದನ್ನು ಅವರೇ ತಂದಿಟ್ಟಿದ್ದರೇ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಹೀಗಾಗಿ ಕೃಷ್ಣಮೂರ್ತಿ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಕೊಲೆ ಮಾಡಿ ಬಿಸಾಕಿದ್ದಾರೆಯೇ ಎನ್ನುವ ಶಂಕೆಯೂ ಎದುರಾಗಿದೆ.
ಕಾಣೆಯಾಗಿದ್ದ ಬದಿಯಡ್ಕದ ದಂತವೈದ್ಯರ ಶವ ಹಟ್ಟಿಯಂಗಡಿ ಬಳಿ ಪತ್ತೆ ; ಆತ್ಮಹತ್ಯೆ ಶಂಕೆ
The mangled body of the Badiadka based dentist Dr Krishnamurthy who was reported missing was found beside the railway tracks at Ajji Mane, Hittiangadi village. His shredded body was found about 50 meters away from the head. Dr Krishnamurthy who was running a clinic in Badiadka had been practicing for the past 30 years. He was reported missing after Tuesday morning. His wife had lodged a missing complaint at the Badiadka police station. The police department which began the search operations found his mobile phone in his clinic. However his motorcycle was found parked at Kumble.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 06:02 pm
Bangalore Correspondent
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm