ಹೆರಿಗೆಯಾದ 14 ದಿನಕ್ಕೆ ಡ್ಯೂಟಿಗೆ ಎಂಟ್ರಿ ಕೊಟ್ಟ ಖಡಕ್ ಐಎಎಸ್ ಅಧಿಕಾರಿ

13-10-20 12:40 pm       Headline Karnataka News Network   ದೇಶ - ವಿದೇಶ

ಐಎಎಸ್​​ ಅಧಿಕಾರಿಯೊಬ್ಬರು ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳಲ್ಲೇ ಕೆಲಸಕ್ಕೆ ವಾಪಸ್ಸಾಗಿ ಕರ್ತವ್ಯನಿಷ್ಠೆ ಮೆರೆದು, ಇತರರಿಗೆ ಮಾದರಿಯಾಗಿದ್ದಾರೆ.

ಉತ್ತರ ಪ್ರದೇಶ, ಅಕ್ಟೋಬರ್.13 : ಉತ್ತರ ಪ್ರದೇಶದ ಸರ್ಕಾರಿ ಮಹಿಳಾ ಅಧಿಕಾರಿ ಹೆರಿಗೆಯಾದ ಮೂರೇ ವಾರದಲ್ಲಿ ಕಚೇರಿಗೆ ಹಾಜರಾಗಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಉತ್ತರಪ್ರದೇಶದ ಘಾಜಿಯಾಬಾದ್​ ಜಿಲ್ಲೆಯ ಮೋದಿನಗರದ ಸಬ್‌ -ಡಿವಿಷನಲ್‌ ಮ್ಯಾಜಿಸ್ಟ್ರೇಟ್‌  ಆಗಿರುವ ಸೌಮ್ಯ ಅವರು ಜುಲೈನಿಂದ ಕೋವಿಡ್‌ ಕಾರ್ಯಗಳಲ್ಲಿ ತೊಡಗಿದ್ದು, ಹೆರಿಗೆಯಾದ  14 ದಿನಗಳಲ್ಲೇ ತಮ್ಮ ಹೆಣ್ಣು ಮಗುವಿನ ಜೊತೆಗೆ ಕರ್ತವ್ಯಕ್ಕೆ ಹಾಜರಾಗಿರುವುದು ಗಮನ ಸೆಳೆದಿದೆ. ಅವರ ಕರ್ತವ್ಯ ಬದ್ಧತೆ ಮತ್ತು ಕಾಳಜಿಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸೌಮ್ಯ, ನಾನು ಐಎಎಸ್​ ಅಧಿಕಾರಿ, ಹೀಗಾಗಿ ನನ್ನ ಕರ್ತವ್ಯದ ಬಗ್ಗೆ ಗಮನಹರಿಸಬೇಕು. ಕೊರೊನಾ ಸಾಂಕ್ರಾಮಿಕದಿಂದಾಗಿ ಎಲ್ಲರ ಮೇಲೂ ಜವಾಬ್ದಾರಿ ಇದೆ. ಮಗುವಿಗೆ ಜನ್ಮ ನೀಡಿ, ಅದರ ಆರೈಕೆ ಮಾಡುವ ಶಕ್ತಿಯನ್ನ ಮಹಿಳೆಗೆ ದೇವರು ನೀಡಿದ್ದಾನೆ.

ಗ್ರಾಮೀಣ ಭಾರತದಲ್ಲಿ ಮಹಿಳೆಯರು ಗರ್ಭಿಣಿಯಾಗಿದ್ದಾಗ ಹಾಗೂ ಡೆಲಿವರಿ ನಂತರವೂ ಮನೆಯ ಕೆಲಸದ ಜೊತೆ ತಮ್ಮ ಜೀವನೋಪಾಯಕ್ಕೂ ಕೆಲಸ ಮಾಡ್ತಾರೆ. ಅದೇ ರೀತಿ ನಾನು ದೇವರ ದಯದಿಂದ ಮೂರು ವಾರಗಳ ಮುಗುವಿನೊಂದಿಗೆ ಆಡಳಿತಾತ್ಮಕ ಕೆಲಸವನ್ನ ಮಾಡುವಲ್ಲಿ ಶಕ್ತಳಾಗಿದ್ದೇನೆ ಎಂದಿದ್ದಾರೆ.