ಭಾರತದ ಆರೋಗ್ಯ ಸೇತು ಆ್ಯಪ್ ಬೆನ್ನುತಟ್ಟಿದ ವಿಶ್ವ ಆರೋಗ್ಯ ಸಂಸ್ಥೆ !!

13-10-20 04:59 pm       Headline Karnataka News Network   ದೇಶ - ವಿದೇಶ

ಭಾರತದಲ್ಲಿ ಸರ್ಕಾರ ಅಭಿವೃದ್ಧಿಪಡಿಸಿದ ಆರೋಗ್ಯ ಸೇತು ಆ್ಯಪ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.  

ನವದೆಹಲಿ, ಅಕ್ಟೋಬರ್ 13: ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಅಭಿವೃದ್ಧಿಪಡಿಸಿದ ಆರೋಗ್ಯ ಸೇತು ಆ್ಯಪ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.  

ಭಾರತದ ಆರೋಗ್ಯ ಸೇತು ಅಪ್ಲಿಕೇಶನ್​ ಅನ್ನು 15 ಕೋಟಿ ಜನರು ಡೌನ್​ಲೋಡ್ ಮಾಡಿಕೊಂಡಿದ್ದು, ಇದರ ಸಹಾಯದಿಂದ ಎಲ್ಲೆಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದೆ ಅನ್ನೋದನ್ನು ತಿಳಿದುಕೊಳ್ಳಲು ಆರೋಗ್ಯ ಇಲಾಖೆಗೆ ನೆರವಾಗಿದೆ. ಜೊತೆಗೆ ಆ ಪ್ರದೇಶಗಳಲ್ಲಿ ಹೆಚ್ಚೆಚ್ಚು ಕೊರೋನಾ ಪರೀಕ್ಷೆಗಳನ್ನ ನಡೆಸಲು ಸಾಧ್ಯವಾಗಿದೆ' ಎಂದು   ಡಬ್ಲ್ಯುಎಚ್‌ಒ  ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಶ್ಲಾಘಿಸಿದ್ದಾರೆ.

ಬಿಡುಗಡೆಯಾದ ಕೂಡಲೇ, ಆರೋಗ್ಯ ಸೇತು ಶೀಘ್ರವಾಗಿ ವಿಶ್ವದಲ್ಲೇ ಹೆಚ್ಚು ಡೌನ್‌ಲೋಡ್ ಮಾಡಲಾದ ಕೋವಿಡ್ -19 ಟ್ರ್ಯಾಕಿಂಗ್ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ. ಡಬ್ಲ್ಯುಎಚ್‌ಒ ಮುಖ್ಯಸ್ಥ  ಮಂಗಳವಾರ ತಮ್ಮ ಮಾಧ್ಯಮಗೋಷ್ಠಿಯಲ್ಲಿ ಜರ್ಮನಿ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ಇದೇ ರೀತಿಯ ಅಪ್ಲಿಕೇಶನ್‌ಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.

World Health Organization (WHO) is preparing to launch an app such as Arogya Setu soon, which will have all the technical features present in Arogya Setu.