ಸೇಲಂ ; ಫ್ರೀಜರ್ ನಲ್ಲಿಟ್ಟು ಸಾಯಿಸಲು ಯತ್ನಿಸಿದ್ರೂ ಬಚಾವಾದ ವೃದ್ಧ !

14-10-20 06:22 pm       Headline Karnataka News Network   ದೇಶ - ವಿದೇಶ

ಆಸ್ಪತ್ರೆಯಿಂದ ಚಿಂತಾಜನಕ ಸ್ಥಿತಿಯಲ್ಲಿ ಡಿಸ್ಚಾರ್ಜ್ ಮಾಡಿಕೊಂಡು ತಂದಿದ್ದ 74 ವರ್ಷದ ವೃದ್ಧರೊಬ್ಬರನ್ನು ಫ್ರೀಜರ್​ನಲ್ಲಿಟ್ಟು ಸಾಯಿಸಲು ಯತ್ನಿಸಿದ ಪ್ರಕರಣ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.

ಚೆನ್ನೈ, ಅಕ್ಟೋಬರ್ 14 : ಆಸ್ಪತ್ರೆಯಿಂದ ಚಿಂತಾಜನಕ ಸ್ಥಿತಿಯಲ್ಲಿ ಡಿಸ್ಚಾರ್ಜ್ ಮಾಡಿಕೊಂಡು ತಂದಿದ್ದ 74 ವರ್ಷದ ವೃದ್ಧರೊಬ್ಬರನ್ನು ಫ್ರೀಜರ್​ನಲ್ಲಿಟ್ಟು ಸಾಯಿಸಲು ಯತ್ನಿಸಿದ ಪ್ರಕರಣ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ವೃದ್ಧ ವ್ಯಕ್ತಿಯನ್ನು ಬಾಲಸುಬ್ರಹ್ಮಣ್ಯ ಕುಮಾರ್​ ಎಂದು ಗುರುತಿಸಲಾಗಿದ್ದು ಫ್ರೀಜರ್​ನಿಂದ ರಕ್ಷಿಸಿದ ಬಳಿಕ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಕೆಲ ದಿನಗಳ ಹಿಂದಷ್ಟೆ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಬಾಲಸುಬ್ರಹ್ಮಣ್ಯಂ ಅವರನ್ನು ಸಹೋದರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದು, ಇದೇ ವೇಳೆ ಆತ ಏಜನ್ಸಿಯಿಂದ ಫ್ರೀಜರ್​ ಬಾಕ್ಸ್​ನ್ನು ಕೂಡ ಕೇಳಿ ಪಡೆದಿದ್ದ ಎನ್ನಲಾಗಿದೆ. ಹೀಗಾಗಿ ವೃದ್ಧನ ಮನೆಯವರು ಅವರ ಸಾವಿಗೆ ಕಾಯುತ್ತಿದ್ದರೇನೋ ಎಂಬ ಅನುಮಾನ ಹುಟ್ಟುಹಾಕಿದೆ.

ಏಜೆನ್ಸಿ ಒಂದರಿಂದ ಫ್ರೀಜರ್​ ಬಾಕ್ಸ್ ಪಡೆದಿದ್ದ ಸಹೋದರ ಉದ್ದೇಶಪೂರ್ವಕವಾಗಿ ವೃದ್ಧನನ್ನೂ ಫ್ರೀಜರ್​ ಒಳಗೆ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಏಜನ್ಸಿ ಸಿಬ್ಬಂದಿ ಫ್ರೀಜರ್ ವಾಪಸ್​ ತೆಗೆದುಕೊಂಡು ಹೋಗಲು ಮನೆಗೆ ಬಂದ ವೇಳೆ ಪೆಟ್ಟಿಗೆಯೊಳಗೆ ವೃದ್ಧ ಉಸಿರಾಡುತ್ತಾ ಇರುವುದನ್ನು ಕಂಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಕುಟುಂಬಸ್ಥರ ವಿರುದ್ಧ ಪೊಲೀಸರು ನಿರ್ಲಕ್ಷ್ಯದ ನಡುವಳಿಕೆ ಹಾಗೂ ಜೀವಕ್ಕೆ ಅಪಾಯ ತಂದೊಡ್ಡಿದ ಕಾರಣದಡಿ ದೂರು  ದಾಖಲಿಸಿದ್ದಾರೆ.

In a shocking incident that has sparked outrage, a 74-year-old critically ill man in Tamil Nadu's Salem district was rescued on Tuesday from a freezer box. His family allegedly was waiting for him to die after he was discharged from a hospital.