ಸೊಮಾಲಿಯಾದಲ್ಲಿ ಬಾಂಬ್ ಸ್ಫೋಟ: 19 ಮಂದಿ ಸಾವು ; ಸೈನಿಕರು, ಪತ್ರಕರ್ತರು ಸೇರಿದಂತೆ 52ಕ್ಕೂ ಹೆಚ್ಚು ಮಂದಿಗೆ ಗಾಯ ! 

04-01-23 09:17 pm       HK News Desk   ದೇಶ - ವಿದೇಶ

ಅಲ್-ಶಬಾಬ್ ಉಗ್ರರ ವಿರುದ್ಧ ದಾಳಿ ನಡೆಸಿದ ಮಿಲಿಟರಿ ಪ್ರದೇಶವನ್ನು ಗುರಿಯಾಗಿಸಿ ಬುಧವಾರ ಮುಂಜಾನೆ ಕಾರಿನಲ್ಲಿ ನಡೆಸಿದ ಆತ್ಮಾಹುತಿ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 19 ಜನ ಸಾವನ್ನಪ್ಪಿದ್ದಾರೆ ಎಂದು ಸೊಮಾಲಿಯಾ ಪೊಲೀಸರು ತಿಳಿಸಿದ್ದಾರೆ.

ಸೊಮಾಲಿಯಾ, ಜ.4  : ಅಲ್-ಶಬಾಬ್ ಉಗ್ರರ ವಿರುದ್ಧ ದಾಳಿ ನಡೆಸಿದ ಮಿಲಿಟರಿ ಪ್ರದೇಶವನ್ನು ಗುರಿಯಾಗಿಸಿ ಬುಧವಾರ ಮುಂಜಾನೆ ಕಾರಿನಲ್ಲಿ ನಡೆಸಿದ ಆತ್ಮಾಹುತಿ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 19 ಜನ ಸಾವನ್ನಪ್ಪಿದ್ದಾರೆ ಎಂದು ಸೊಮಾಲಿಯಾ ಪೊಲೀಸರು ತಿಳಿಸಿದ್ದಾರೆ.

ಬುಧವಾರ ಬೆಳಿಗ್ಗೆ ಪ್ರಾರ್ಥನೆಯ ನಂತರ ಮಹಾಸ್‌ನಲ್ಲಿ ದಾಳಿ ನಡೆದಿದ್ದು, ಮೃತರಲ್ಲಿ ಸ್ಥಳಿಯರ ಸಂಖ್ಯೆ ಹೆಚ್ಚಿದೆ. ಸೈನಿಕರು, ಪತ್ರಕರ್ತರು ಹಾಗೂ ಸ್ಥಳೀಯರು ಸೇರಿದಂತೆ 52ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಮೊಗದಿಶುಗೆ ಕೊಂಡೊಯ್ಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ಅಲ್-ಶಬಾಬ್ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಜನಸಂದಣಿ ಇರುವ ಸ್ಥಳದಲ್ಲೇ ವಾಹನಗಳು ಸ್ಫೋಟಗೊಂಡಿದ್ದು, ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

At least 19 people were killed when a Somali military facility was targeted by two simultaneous suicide car bombers early Wednesday, the Police said. The facility in question is located in the Mahaas district of the Hiran region, at the heart of the government’s offensive against al-Shabab terrorists.