ಬ್ರೇಕಿಂಗ್ ನ್ಯೂಸ್
20-03-23 03:37 pm HK News Desk ದೇಶ - ವಿದೇಶ
ಚೆನ್ನೈ, ಮಾ.20: ಕನ್ಯಾಕುಮಾರಿ ಜಿಲ್ಲೆಯ ಕೆಥೋಲಿಕ್ ಚರ್ಚ್ ಒಂದರ ಪಾದ್ರಿಯೊಬ್ಬ ಯುವತಿಯೊಂದಿಗೆ ಕಳೆದಿದ್ದ ಖಾಸಗಿ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು, ಇದರ ಬೆನ್ನಲ್ಲೇ ಸಂತ್ರಸ್ತ ಯುವತಿ ಪಾದ್ರಿ ಮತ್ತಿತರ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಳು. ದೂರಿನ ಹಿನ್ನೆಲೆಯಲ್ಲಿ ನಾಪತ್ತೆಯಾಗಿದ್ದ ಪಾದ್ರಿ ಬೆನೆಡಿಕ್ಟ್ ಆಂಟೋನನ್ನು ತಮಿಳುನಾಡು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಕನ್ಯಾಕುಮಾರಿ ಜಿಲ್ಲೆಯ ಸೀರೋ ಮಲಂಕರ ಕೆಥೋಲಿಕ್ ಚರ್ಚ್ ನಲ್ಲಿ ಪಾದ್ರಿಯಾಗಿದ್ದ ಬೆನೆಡಿಕ್ಟ್ ಆಂಟೋ ಜೊತೆಗೆ ಕ್ಲೋಸ್ ಆಗಿದ್ದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ತನ್ನ ಜೊತೆಗೆ ಕಳೆದಿದ್ದ ಖಾಸಗಿ ವಿಡಿಯೋ ಲೀಕ್ ಆಗಿದ್ದರಿಂದ ಪೊಲೀಸ್ ದೂರು ಕೊಟ್ಟಿದ್ದಳು. ಪೊಲೀಸರ ಮಾಹಿತಿ ಪ್ರಕಾರ, ಪಾದ್ರಿ ಜೊತೆಗೆ ಹತ್ತಿರವಿದ್ದ ಯುವಕನೇ ಆತನ ಲ್ಯಾಪ್ಟಾಪ್ ನಲ್ಲಿದ್ದ ವಿಡಿಯೋಗಳನ್ನು ಕದ್ದು ಅದನ್ನು ಲೀಕ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿ ಈಗಾಗಲೇ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ನಾಪತ್ತೆಯಾಗಿದ್ದ 30 ವರ್ಷದ ಬೆನೆಡಿಕ್ಟ್ ಆಂಟೋನನ್ನು ಕನ್ಯಾಕುಮಾರಿ ಪೊಲೀಸರು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದಾರೆ. ಇದೇ ವೇಳೆ, ಬೆನೆಡಿಕ್ಟ್ ಆಂಟೋ ಹಲವು ಹುಡುಗಿಯರ ಜೊತೆಗೆ ಹತ್ತಿರದ ಸಂಬಂಧ ಇರಿಸಿಕೊಂಡಿದ್ದು ಬೆಳಕಿಗೆ ಬಂದಿದೆ. ಆತನ ಲ್ಯಾಪ್ಟಾಪ್ ನಲ್ಲಿ ಹಲವು ಯುವತಿಯರ ಜೊತೆಗಿದ್ದ ವಿಡಿಯೋಗಳಿದ್ದು, ಅವನ್ನು ಮೊಬೈಲ್ ಮೂಲಕ ಜಾಲತಾಣದಲ್ಲಿ ಲೀಕ್ ಮಾಡಲಾಗಿತ್ತು.
ನರ್ಸಿಂಗ್ ವಿದ್ಯಾರ್ಥಿನಿ ನೀಡಿರುವ ದೂರಿನಲ್ಲಿ, ತನ್ನ ಜೊತೆಗೆ ಕ್ಲೋಸ್ ಆಗಿರುವಂತೆ ಪಾದ್ರಿ ಒತ್ತಾಯ ಪಡಿಸುತ್ತಿದ್ದರು. ಆನಂತರ, ತಾಯಿ ಮೂಲಕ ನನ್ನ ನಂಬರ್ ಪಡೆದು ವಾಟ್ಸಪ್ ಕರೆ ಮಾಡುತ್ತಿದ್ದರು. ಖಾಸಗಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ದೂರಿನಲ್ಲಿ ಬೆನೆಡಿಕ್ಟ್ ಆಂಟೋ, ಪೌಲ್ ರಾಜ್ ಇನ್ನೂ ಹಲವರ ಹೆಸರುಗಳನ್ನು ತಿಳಿಸಿದ್ದಾರೆ.
ಈ ಹಿಂದೆಯೂ ಬೆನೆಡಿಕ್ಟ್ ಆಂಟೋ ಕಿರುಕುಳ ಕೊಟ್ಟಿರುವ ಬಗ್ಗೆ ಹಲವು ಯುವತಿಯರು ಪೊಲೀಸರಿಗೆ ದೂರು ನೀಡಿದ್ದರು. ಆ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ. ಕೆಲವು ಹುಡುಗರ ಜೊತೆಗೆ ಪಾದ್ರಿಗೆ ಜಗಳವಾಗಿದ್ದು, ಆನಂತರ ಒಬ್ಬ ಯುವಕ ಪಾದ್ರಿಯ ಲ್ಯಾಪ್ಟಾಪ್, ಇನ್ನಿತರ ಕಂಪ್ಯೂಟರ್ ಗಳನ್ನು ಕದ್ದುಕೊಂಡು ಹೋಗಿ ವಿಡಿಯೋ ಲೀಕ್ ಮಾಡಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ಪಾದ್ರಿ ಬೆನೆಡಿಕ್ಟ್ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ವೇಳೆ, ಒಬ್ಬ ಕಾನೂನು ಓದುತ್ತಿದ್ದ ವಿದ್ಯಾರ್ಥಿಯ ತಾಯಿ ಕನ್ಯಾಕುಮಾರಿ ಎಸ್ಪಿಗೆ ದೂರು ನೀಡಿದ್ದಾರೆ. ಕಾನೂನು ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದ ಬಗ್ಗೆ ಪಾದ್ರಿಯನ್ನು ಪ್ರಶ್ನಿಸಲು ಬಂದಿದ್ದ. ಆ ವೇಳೆ ಜಗಳವಾಗಿದ್ದು, ವಿದ್ಯಾರ್ಥಿ ಪಾದ್ರಿಗೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಪಾದ್ರಿಯ ದೂರಿನಂತೆ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಪಾದ್ರಿಯ ಅಸಭ್ಯ ನಡವಳಿಕೆಯ ಕುರಿತ ಪೂರಕ ದಾಖಲೆಗಳನ್ನು ಮುಂದಿಟ್ಟು ವಿದ್ಯಾರ್ಥಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಪಾದ್ರಿಗೆ ಹಲವು ಯುವತಿಯರ ಜೊತೆ ಸಂಬಂಧ ಇತ್ತು. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ತನ್ನ ಮಗನಿಗೆ ನ್ಯಾಯ ಕೊಡಿಸುವಂತೆ ಹೇಳಿದ್ದಾರೆ.
A Syro Malankara Catholic Church priest from the Kanyakumari district named Benedict Anto on Monday was arrested by Tamil Nadu Police days after his private videos and photos were leaked on social media. Benedict Anto was absconding ever since his personal videos had gone viral alleging that he was involved with minors and married women. Benedict Anto's private videos became the talk of the town especially on social media and many users accused the priest that he had illegal relationships with the women who came to his church.
09-03-25 04:54 pm
Headline Karnataka Staff
Bangalore News, Marriage: ಮದುವೆಗೂ ಮುನ್ನ ಕ್ಯೂಟ...
09-03-25 11:41 am
Halal Budget, BJP, CM Siddaramaiah: ಮುಸ್ಲಿಂ ಸ...
07-03-25 09:21 pm
CM Budget, Minorities: ಅಲ್ಪಸಂಖ್ಯಾತರ ಕಲ್ಯಾಣಕ್...
07-03-25 09:08 pm
Baby Killed, Gangavathi, Koppal: ಅಗರಬತ್ತಿ ಪವಾ...
07-03-25 07:54 pm
08-03-25 04:03 pm
HK News Desk
James Harrison, Golden Arm, Death: ಲಕ್ಷಾಂತರ ಮ...
05-03-25 05:38 pm
14ನೇ ಮಗುವಿಗೆ ತಂದೆಯಾದ ಉದ್ಯಮಿ ಎಲಾನ್ ಮಸ್ಕ್ ! ನಾಲ...
01-03-25 10:39 pm
Trump Vs Zelenskyy, Talk fight: ಶ್ವೇತ ಭವನದಲ್ಲ...
01-03-25 05:35 pm
Pope Francis: ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗ...
01-03-25 01:20 pm
09-03-25 06:34 pm
Mangaluru Correspondent
Mangalore Urwa Police, Inspector Bharathi Tra...
09-03-25 02:55 pm
Mangalore, Diganth missing found, Sp Yathish:...
09-03-25 02:31 pm
Mangalore Diganth Missing Case, shocking deta...
08-03-25 11:05 pm
Mangalore Laveena Vegas, PhD Catalytic Syste...
08-03-25 10:54 pm
09-03-25 05:06 pm
Headline Karnataka Staff
Bangalore Suicide, Bank Staff, Crime; ಹಿರಿಯ ಅ...
09-03-25 03:06 pm
Koppal Rape, Crime, Arrest: ಪೆಟ್ರೋಲ್ ದುಡ್ಡು ಕ...
08-03-25 10:44 pm
Mangalore, Kasaragod Crime, Robbery: ಕ್ರಶರ್ ಮ...
07-03-25 05:51 pm
Belagavi Couple Murder, Crime: ಬೆಳಗಾವಿಯಲ್ಲಿ ಪ...
05-03-25 10:24 am