ಬ್ರೇಕಿಂಗ್ ನ್ಯೂಸ್
26-04-23 05:59 pm HK News Desk ದೇಶ - ವಿದೇಶ
ಮುಂಬೈ, ಎ.26 : ಬಾಲಿವುಡ್ ನಟಿ ಕ್ರಿಸಾನ್ ಪಿರೇರಾ ಡ್ರಗ್ಸ್ ಪ್ರಕರಣದಲ್ಲಿ ಮುಂಬೈ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದು ನಟಿಯನ್ನು ಸಿಲುಕಿಸಲೆಂದೇ ಡ್ರಗ್ಸ್ ಕೊಟ್ಟು ಕಳುಹಿಸಿದ್ದರು ಎನ್ನುವ ವಿಚಾರವನ್ನು ಪತ್ತೆ ಮಾಡಿದ್ದಾರೆ.
ನಟಿ ಕ್ರಿಸನ್ ಪಿರೇರಾ ತಿಂಗಳ ಹಿಂದೆ ವೆಬ್ ಸಿರೀಸ್ ಚಿತ್ರೀಕರಣಕ್ಕಾಗಿ ದುಬೈಗೆ ತೆರಳಿದ್ದರು. ಏರ್ಪೋರ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಆಕೆಯ ಬಳಿಯಿದ್ದ ಟ್ರೋಫಿಯಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಬಳಿಕ ದುಬೈ ಪೊಲೀಸರು ನಟಿ ಪಿರೇರಾ ಅವರನ್ನು ಬಂಧಿಸಿದ್ದರು. ಈ ಬಗ್ಗೆ ಕುಟುಂಬ ಸದಸ್ಯರು ಡ್ರಗ್ಸ್ ಬಗ್ಗೆ ಶಂಕೆ ವ್ಯಕ್ತಪಡಿಸಿ ಮುಂಬೈನಲ್ಲಿ ಪೊಲೀಸ್ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆಂಟನಿ ಪೌಲ್ ಮತ್ತು ರಾಜೇಶ್ ಬಭೋಟೆ ಅಲಿಯಾಸ್ ರವಿ ಎಂಬವರನ್ನು ಬಂಧಿಸಿದ್ದಾರೆ.
ಇಂಟರ್‌ನ್ಯಾಶನಲ್ ವೆಬ್ ಸಿರೀಸ್‌ಗೋಸ್ಕರ ಕ್ರಿಸನ್ ಅವರು ಆಡಿಷನ್ ನೀಡಲು ದುಬೈಗೆ ತೆರಳಿದ್ದರು. ಈ ವೇಳೆ, ಆಂಟನಿ ಪೌಲ್ ಡ್ರಗ್ಸ್ ಬಚ್ಚಿಟ್ಟಿದ್ದ ಟ್ರೋಫಿ ಒಂದನ್ನು ನಟಿಗೆ ನೀಡಿದ್ದ. ಇದರಿಂದ ಅಮಾಯಕ ನಟಿ ದುಬೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು.
ಆಂಟನಿ ಪೌಲ್, ನಟಿ ಪಿರೇರಾ ತಾಯಿ ಪಮೇಲಾ ಜೊತೆಗೆ ವೈರತ್ವ ಹೊಂದಿದ್ದರು. 2020ರಲ್ಲಿ ಪೌಲ್ ಬೊರಿವಿಲಿಯ ಪಮೇಲಾ ಇದ್ದ ಮನೆ ಬಳಿಗೆ ಹೋಗಿದ್ದ. ಆಗ ಪಮೇಲಾ ಅವರ ಮನೆಯ ನಾಯಿ ಪೌಲ್ ಗೆ ಕಚ್ಚಿದ್ದು ನಾಯಿಯಿಂದ ಬಚಾವ್ ಆಗಲು ಪೌಲ್ ಕುರ್ಚಿ ತಗೊಂಡು ನಾಯಿಗೆ ಹೊಡೆದಿದ್ದ. ಇದನ್ನು ನೋಡಿ ಪ್ರಮೀಳಾಗೆ ಸಿಟ್ಟು ಬಂದು, ಆ ಬಿಲ್ಡಿಂಗ್‌ನಲ್ಲಿರುವ ಎಲ್ಲರ ಮುಂದೆ ಅವರು ಪೌಲ್‌ಗೆ ಬೈಯ್ದಿದ್ದರು. ಇದಕ್ಕೆ ರಿವೆಂಜ್ ತಗೊಳ್ಳಲು ಪೌಲ್ ಈ ರೀತಿ ಸಂಚು ರೂಪಿಸಿದ್ದಾನೆ.
ಹೋಟೆಲ್ ಗ್ರ್ಯಾಂಡ್ ಹಯಾತ್‌ನಲ್ಲಿ ಮೀಟಿಂಗ್ ಅರೇಂಜ್ ಆಗಿ ಕ್ರಿಸನ್ ಅವರು ಆಯ್ಕೆ ಆಗಿದ್ದಾರೆ ಎಂದು ಹೇಳಲಾಗಿತ್ತು. ಏಪ್ರಿಲ್ 1ಕ್ಕೆ ದುಬೈಗೆ ಹೋಗಲು ಕ್ರಿಸನ್‌ಗೆ ಟಿಕೆಟ್ ಬುಕ್ ಆಗಿತ್ತು. ಕ್ರಿಸನ್ ಉಳಿದುಕೊಳ್ಳಲು ಹಿಲ್ಟನ್ ಹೋಟೆಲ್ ನಲ್ಲಿ ರೂಮ್ ಬುಕ್ ಆಗಿತ್ತು. ದುಬೈಗೆ ಹೋಗಲು ಕ್ರಿಸನ್ ರೆಡಿ ಆಗಿದ್ದಾಗ ರವಿ, ಕ್ರಿಸನ್‌ಗೆ ಟ್ರೋಫಿ ಕೊಟ್ಟು ಇದು ಆಡಿಷನ್‌ನಲ್ಲಿ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಆ ಟ್ರೋಫಿ ಒಳಗಡೆ ಕ್ರಿಸನ್ ಅವರು ಡ್ರಗ್ಸ್ ಇಟ್ಟಿದ್ದರು. ಇದು ಕ್ರಿಸನ್‌ಗೆ ಗೊತ್ತಿರಲಿಲ್ಲ.
ಕ್ರಿಸನ್ ಅವರು ದುಬೈಗೆ ಹೋದಾಗ ಅಲ್ಲಿ ತನ್ನ ಹೆಸರಿನಲ್ಲಿ ರೂಮ್ ಬುಕ್ ಆಗಿದ್ಯಾ ಅಂತ ಚೆಕ್ ಮಾಡಿದ್ದಾರೆ. ಆಗ ಹೋಟೆಲ್‌ನಲ್ಲಿ ಅವರ ಹೆಸರು ಇಲ್ಲದಿರೋದು ಗೊತ್ತಾಗಿದೆ. ಈ ನಡುವೆ, ಪೊಲೀಸ್ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಟ್ರೋಫಿ ಒಳಗಡೆ ಡ್ರಗ್ಸ್ ಪತ್ತೆಯಾಗಿದ್ದು ಕ್ರಿಸನ್‌ರನ್ನು ಬಂಧಿಸಿದ್ದರು.
The Mumbai Crime Branch arrested two people on charges of framing Bollywood actress Chrisann Pereira in connection with a drug-smuggling case. The actress is in jail in Sharjah in the UAE. And the arrested duo are said to have planted the drugs on her to get Chrisann Pereira imprisoned.
21-07-25 05:56 pm
HK News Desk
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm