ಬ್ರೇಕಿಂಗ್ ನ್ಯೂಸ್
24-07-23 06:37 pm HK News Desk ದೇಶ - ವಿದೇಶ
ಲಂಡನ್, ಜು.24: ಜಗತ್ತಿನ ನಂಬರ್ 1 ಧನಿಕ ಎಲಾನ್ ಮಸ್ಕ್ ಒಡೆತನದ ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ತನ್ನ ಲೋಗೊ ಮತ್ತು ಹೆಸರನ್ನು ಬದಲಿಸಿಕೊಂಡಿದೆ. ನೀಲಿ ಹಕ್ಕಿ ಜಾಗದಲ್ಲೀಗ ಕಪ್ಪು ಬಿಳಿಯ X ಎಂಬ ವಿನ್ಯಾಸ ಕಾಣಿಸಿಕೊಂಡಿದೆ. ಇನ್ನು ಮುಂದೆ ಟ್ವಿಟ್ಟರ್ ಕಂಪನಿ ಬದಲಾಗಿ X.COM ಸ್ಟಾರ್ಟ್ಅಪ್ನಡಿ ಕೆಲಸ ಮಾಡಲಿದೆ ಎಂದು ತಿಳಿದು ಬಂದಿದೆ.
ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋದಲ್ಲಿನ ಟ್ವಿಟ್ಟರ್ ನ ಕೇಂದ್ರ ಕಚೇರಿಯಲ್ಲಿ ಮಾಲೀಕ ಎಲಾನ್ ಮಸ್ಕ್ X ಹೊಸ ಲೋಗೋವನ್ನು ಸೋಮವಾರ ಬಿಡುಗಡೆ ಮಾಡಿದರು. ಇದು ಸದ್ಯ ಕಂಪ್ಯೂಟರ್ಗಳ ಡೆಸ್ಟ್ಟಾಪ್ಗಳಲ್ಲಿ ಮಾತ್ರ ಕಾಣ ಸಿಗುತ್ತಿದೆ. ಮೊಬೈಲ್ ಆವೃತ್ತಿಯಲ್ಲಿ ಸದ್ಯಕ್ಕೆ ಬದಲಾವಣೆ ಮಾಡಲಾಗಿಲ್ಲ.
ರಾರಾಜಿಸಿದ X ಲೋಗೋ:
ಟ್ವಿಟ್ಟರ್ ಲೋಗೋವನ್ನು ಬದಲಾವಣೆ ಮಾಡಲಾಗುವುದ ಎಂದು ಸುಳಿವು ನೀಡಿದ್ದ ಎಲಾನ್ ಮಸ್ಕ್, ಅದರಂತೆ ಟ್ವಿಟ್ಟರ್ ಕಂಪನಿಯ ಕೇಂದ್ರ ಕಚೇರಿಯ ಮೇಲೆ ಭಾನುವಾರ ರಾತ್ರಿ ಲೋಗೋ ಬಿಡುಗಡೆ ಸಮಾರಂಭದ ಭಾಗವಾಗಿ ಹೊಸ ಲೋಗೋವಾದ X ಅನ್ನು ಎಲ್ಇಡಿ ಲೈಟಿಂಗ್ನಲ್ಲಿ ಬೆಳಗಿಸುವ ಮೂಲಕ ಅನಾವರಣ ಮಾಡಿದರು.
ಸಿಇಒ ಲಿಂಡಾ ಯಕಾರಿನೋ ಮತ್ತು ಮಾಲೀಕ ಮಸ್ಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನೂತನ ಲೋಗೋವನ್ನು ಹಂಚಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಲಿಂಡಾ ಯಕಾರಿನೋ ಟ್ವಿಟ್ಟರ್ ರಿಬ್ರ್ಯಾಂಡಿಂಗ್ ಮಾಡುವುದಾಗಿ ಮಾಹಿತಿ ನೀಡಿದ್ದರು.
ವಿಶ್ವದ ಧನಿಕ, ಯಶಸ್ವಿ ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವ ಹೊಂದಿರುವ ಹೆಚ್ಚಿನ ಕಂಪನಿಗಳು ಹಾಗೂ ಅವುಗಳ ಲೋಗೋ X ಎಂದಿದೆ. ಮಸ್ಕ್ ಒಡೆತನದ ಬಾಹ್ಯಾಕಾಶ ಕಂಪನಿಯ ಹೆಸರು ಕೂಡ ಸ್ಪೇಸ್ ಎಕ್ಸ್ ಆಗಿದೆ. ಟ್ವಿಟ್ಟರ್ ಕಂಪನಿಯನ್ನು ಈಗಾಗಲೇ ಎಕ್ಸ್ ಕಾರ್ಪ್ ಎಂಬ ಶೆಲ್ ಕಂಪನಿಯಲ್ಲಿ ವಿಲೀನಗೊಳಿಸಲಾಗಿದೆ. ಹೀಗಾಗಿ ಟ್ವಿಟ್ಟರ್ ಲೋಗೋವನ್ನೂ X ಎಂದು ರೀಬ್ರ್ಯಾಂಡ್ ಮಾಡಲಾಗಿದೆ.
ಟ್ವೀಟ್ ಇನ್ನು ಮುಂದೆ Xs:
ಟ್ವಿಟ್ಟರ್ ಲೋಗೋ ಮತ್ತು ಹೆಸರನ್ನು ಬದಲಿಸುವು ಬಗ್ಗೆ ಎಲಾನ್ ಮಸ್ಕ್ ಈ ಹಿಂದೆಯೇ ಮಾಹಿತಿ ನೀಡಿದ್ದರು. ಬಳಕೆದಾರರ ಜೊತೆಗಿನ ಚರ್ಚೆಯಲ್ಲಿ ಟ್ವೀಟ್ಗಳನ್ನು ಇನ್ನು ಮುಂದೆ ಏನೆಂದು ಕರೆಯಲಾಗುತ್ತದೆ ಎಂದು ಕೇಳಿದಾಗ, Xs ಎಂಬುದಾಗಿ ಮಸ್ಕ್ ತಿಳಿಸಿದ್ದರು.ಕೆಲ ತಿಂಗಳ ಹಿಂದೆ ಟ್ವಿಟ್ಟರ್ ನ ಹಕ್ಕಿ ಚಿತ್ರವನ್ನು ತಾತ್ಕಾಲಿಕವಾಗಿ ಬದಲಿಸಿ ನಾಯಿಯ ಚಿತ್ರವನ್ನು ಅಳವಡಿಸಲಾಗಿತ್ತು. ಬದಲಾದ ಲೋಗೋ ಡಾಗ್ಕಾಯಿನ್ ಕ್ರಿಪ್ಟೋಕರೆನ್ಸಿಯದ್ದಾಗಿತ್ತು. ವಿಚಿತ್ರ ಎಂದರೆ, ಈ ಡಾಗಿ ಲೋಗೋ ಟ್ವಿಟ್ಟರ್ ನ ವೆಬ್ನಲ್ಲಿ ಮಾತ್ರ ಗೋಚರಿಸುವಂತೆ ಮಾಡಲಾಗಿತ್ತು. ಹಾಗೆಯೇ, ಟ್ವಿಟ್ಟರ್ ತನ್ನ ಮುಖಪುಟದ ಲೋಗೋವನ್ನು ಡಾಗ್ ಚಿತ್ರವನ್ನಾಗಿ ಬದಲಾಯಿಸಿದ ನಂತರ ಡಾಗ್ಕಾಯಿನ್ನ ಕ್ರಿಪ್ಟೋಕರೆನ್ಸಿ ಮೌಲ್ಯ ಶೇ 30ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿತ್ತು.
Elon Musk has often made surprise announcements on Twitter and this weekend was no different. The billionaire announced that Twitter will soon be rebranded into X, the 'everything app' that he has been talking about for quite some time. The Twitter owner thus asked millions of users to prepare themselves to bid farewell to the iconic Blue Bird logo that we have come to associate with Twitter over the years.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 09:41 pm
Mangalore Correspondent
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm