ಕಾಶ್ಮೀರದ ಕುಲಗಾಮ್​ನಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದ ಭಯೋತ್ಪಾದಕರು

06-08-20 06:39 am       Headline Karnataka News Network   ದೇಶ - ವಿದೇಶ

ಬಿಜೆಪಿ ಮುಖಂಡ ಹಾಗೂ ಗ್ರಾಮ ಮುಖ್ಯಸ್ಥ ಸಾಜದ್ ಮನೆಯ ಬಳಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನ ಅನಂತನಾಗ್ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.

ಶ್ರೀನಗರ(ಆ. 06): ಜಮ್ಮು-ಕಾಶ್ಮೀರದ ಕುಲಗಾಮ್ ಜಿಲ್ಲೆಯಲ್ಲಿ ಬಿಜೆಪಿ ನಾಯಕರೊಬ್ಬರನ್ನು ಉಗ್ರರು ಗುಂಡಿಟ್ಟು ಕೊಂದಿದ್ದಾರೆ. ಸಾಜದ್ ಅಹ್ಮದ್ ಖಂಡೇ ಅವರು ಉಗ್ರರಿಗೆ ಬಲಿಯಾದ ಬಿಜೆಪಿ ನಾಯಕ. ಜಿಲ್ಲೆಯ ಖಾಜಿಗುಂದ್ ಗ್ರಾಮದ ಸರ್ಪಂಚ್ ಆಗಿದ್ದ ಸಾಜದ್ ಅವರು ಕುಲಗಾಮ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿದ್ದರು. 

ಗುರುವಾರ ಬೆಳಗ್ಗೆ ಸಾಜದ್ ಮನೆಯ ಬಳಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನ ಅನಂತನಾಗ್ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.

ಕುಲಗಾಂ ಜಿಲ್ಲೆಯಲ್ಲಿ ಎರಡು ದಿನಗಳ ಅಂತರದಲ್ಲಿ ಬಿಜೆಪಿ ನಾಯಕರ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ಮೊನ್ನೆಯಷ್ಟೇ (ಆ. 4ರಂದು) ಕುಲಗಾಮ್ ಜಿಲ್ಲೆಯ ಮತ್ತೊಬ್ಬ ಬಿಜೆಪಿ ಸರ್ಪಂಚ್ ಆಗಿದ್ದ ಅರಿಫ್ ಅಹ್ಮದ್ ಅವರ ಮೇಲೆ ಉಗ್ರರು ಗುಂಡಿನ ದಾಳಿ ಎಸಗಿದ್ದರು. ಅದೃಷ್ಟಕ್ಕೆ ಅರಿಫ್ ಅವರು ಸಾವಿನಿಂದ ಪಾರಾದರೂ ಗಂಭೀರವಾಗಿ ಗಾಯಗೊಂಡಿದ್ದರು.

ಇತ್ತೀಚೆಗೆ ಬಹಳಷ್ಟು ಉಗ್ರರನ್ನು ಸಂಹರಿಸಲಾಗಿದೆ. ಇದರಿಂದ ಹತಾಶೆಗೊಂಡು ಸುಲಭ ಗುರಿಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಅಗತ್ಯ ಇರುವ ಕಡೆ ಭದ್ರತೆ ಒದಗಿಸುತ್ತಿದ್ದೇವೆ. ಅಪಾಯವನ್ನು ಅಂದಾಜು ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ” ಎಂದು ಮುರ್ಮು ಹೇಳಿದ್ಧಾರೆ. ಮುರ್ಮು ಅವರು ನೂತನ ಸಿಎಜಿಯಾಗಿ ನೇಮಕವಾಗುತ್ತಿದ್ದು, ಜಮ್ಮು-ಕಾಶ್ಮೀರದ ಉಪರಾಜ್ಯಪಾಲರಾಗಿ ಅವರ ಸ್ಥಾನವನ್ನು ಮನೋಜ್ ಸಿನ್ಹ ತುಂಬಲಿದ್ದಾರೆ.