ತಮಿಳ್ನಾಡಲ್ಲಿ ಬಿಜೆಪಿ ವಿರುದ್ಧ ಎಐಎಡಿಎಂಕೆ ಕಿಡಿ, ಲೋಕಸಭೆಗೆ ಮೈತ್ರಿ ಇರಲ್ಲ, ನಮ್ಮಿಂದಾಗಿ ನೀವಿದ್ದೀರಿ, ಇಲ್ಲಾಂದ್ರೆ ನೀವಿರಲ್ಲ !  

18-09-23 11:07 pm       HK News Desk   ದೇಶ - ವಿದೇಶ

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ ನಡೆಸುತ್ತಿದ್ದರೆ, ತಮಿಳುನಾಡಿನಲ್ಲಿ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಕಂಡುಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕ ಡಿ.ಜಯಕುಮಾರ್ ಹೇಳಿಕೆ ನೀಡಿರುವುದು ಸಂಚಲನ ಮೂಡಿಸಿದೆ.

ಚೆನ್ನೈ, ಸೆ.18: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ ನಡೆಸುತ್ತಿದ್ದರೆ, ತಮಿಳುನಾಡಿನಲ್ಲಿ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಕಂಡುಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕ ಡಿ.ಜಯಕುಮಾರ್ ಹೇಳಿಕೆ ನೀಡಿರುವುದು ಸಂಚಲನ ಮೂಡಿಸಿದೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಮಾಜಿ ಮುಖ್ಯಮಂತ್ರಿ ಅಣ್ಣಾದುರೈ ಬಗ್ಗೆ ಅವಹೇಳನ ಮಾತನಾಡಿದ್ದಾರೆ ಎನ್ನಲಾಗುತ್ತಿದ್ದು, ಆ ವಿಚಾರದಲ್ಲಿ ಎಐಎಡಿಎಂಕೆ ಪಕ್ಷದ ನಾಯಕರು ಕಿಡಿಕಾರಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ತಮ್ಮ ನಾಯಕನನ್ನು ಅಗೌರವ ಸೂಚಿಸಿದರೆ ಸಹಿಸಿಕೊಳ್ಳಲ್ಲ ಎಂದು ಜಯಕುಮಾರ್ ಹೇಳಿದ್ದಾರೆ. ಇವರು ಹೇಳಿದ್ದನ್ನಲ್ಲ ಕೇಳಿಕೊಂಡು ನಾವು ಸುಮ್ಮನಿರಬೇಕಾ.. ನಮ್ಮಿಂದಾಗಿ ಇವರಿಗೆ ಅಲ್ಪನಾದ್ರೂ ನೆಲೆ ಇರೋದು. ನಾವಿಲ್ಲಾಂದ್ರೆ ಇವರಿಗೆ ನೆಲೆಯೇ ಇರಲ್ಲ. ನಿಮ್ಮ ಓಟ್ ಬ್ಯಾಂಕ್ ಕೂಡ ನಮಗೆ ಗೊತ್ತಿದೆ.

ಅಣ್ಣಾಮಲೈ ಅವರು ನಮ್ಮ ಅಣ್ಣಾದುರೈ, ಜಯಲಲಿತಾ, ಪೆರಿಯಾರ್ ಅವರನ್ನು ನಿಂದಿಸಿದ್ದಾರೆ. ನಮ್ಮ ಕಾರ್ಯಕರ್ತರು ಇದನ್ನು ಸಹಿಸಲ್ಲ. ನಾವು ನಾಳೆಯೇ ಫೀಲ್ಡಿಗಿಳಿಯುತ್ತೇವೆ. ನಮ್ಮ ಗೆಲುವಿನ ಬಗ್ಗೆ ನಮಗೇನು ಭಯ ಇಲ್ಲ. ಬಿಜೆಪಿಯನ್ನು ದೂರವಿಟ್ಟರೆ ನಮಗೇನೂ ಎಫೆಕ್ಟ್ ಆಗೋದಿಲ್ಲ ಎಂದು ಹೇಳಿದ್ದಾರೆ. ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ – ಎಐಎಡಿಎಂಕೆ ಮೈತ್ರಿಯಲ್ಲಿ ರಾಜ್ಯದಲ್ಲಿ ಕೇವಲ ಒಂದು ಸ್ಥಾನ ಲಭಿಸಿತ್ತು. ಕಾಂಗ್ರೆಸ್- ಡಿಎಂಕೆ ಮೈತ್ರಿಕೂಟ 30 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ಜೊತೆಗೆ ಹೋದರೆ ನಷ್ಟ ಎನ್ನುವ ಲೆಕ್ಕಾಚಾರದಲ್ಲಿ ಎಐಎಂಡಿಎಂಕೆ ನಾಯಕರು ಮೈತ್ರಿಯಿಂದ ದೂರ ಸರಿಯಲಿದ್ದಾರೆಯೇ ಎನ್ನುವ ಸಂಶಯ ಮೂಡಿದೆ. 

In a setback to the Bharatiya Janata Party in Tamil Nadu ahead of the 2024 Lok Sabha elections, a senior leader of AIADMK on Monday said his party has no alliance with the BJP, saying any decision regarding the coalition will be taken during polls.