Delhi,AIADMK-BJP alliance: ತಮಿಳುನಾಡು ಬಿಜೆಪಿಗೆ ಮತ್ತೊಂದು ಶಾಕ್ ; ಎನ್ ಡಿಎ ಮೈತ್ರಿ ಕಡಿದುಕೊಂಡ ಎಐಎಡಿಎಂಕೆ, ಬಿಜೆಪಿ ಸಖ್ಯ ಬಿಡಲು ಅಣ್ಣಾಮಲೈ ಕಾರಣವಂತೆ ! 

25-09-23 09:32 pm       HK News Desk   ದೇಶ - ವಿದೇಶ

ಒಂದೆಡೆ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವಾಗಲೇ ಬಿಜೆಪಿಗೆ ಎಐಎಡಿಎಂಕೆ ಶಾಕ್ ಕೊಟ್ಟಿದೆ. ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದು ಬಿಜೆಪಿ ಜೊತೆಗಿದ್ದ ಮೈತ್ರಿಯನ್ನೂ ಕಡಿದುಕೊಂಡಿದ್ದಾರೆ. 

ಚೆನ್ನೈ, ಸೆ.25: ಒಂದೆಡೆ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವಾಗಲೇ ಬಿಜೆಪಿಗೆ ಎಐಎಡಿಎಂಕೆ ಶಾಕ್ ಕೊಟ್ಟಿದೆ. ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದು ಬಿಜೆಪಿ ಜೊತೆಗಿದ್ದ ಮೈತ್ರಿಯನ್ನೂ ಕಡಿದುಕೊಂಡಿದ್ದಾರೆ. 

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮತ್ತು ಎಐಎಡಿಎಂಕೆ ನಾಯಕರ ನಡುವಿನ ಮಾತಿನ ಯುದ್ಧ ಎರಡೂ ಪಕ್ಷಗಳ ಒಡಕಿಗೆ ಕಾರಣವಾಗಿತ್ತು. ಇದರ ಪರಿಣಾಮ ಎನ್ನುವಂತೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷವು ಬಿಜೆಪಿ ಪಕ್ಷದ ಜೊತೆಗಿನ ಸುದೀರ್ಘ ಸ್ನೇಹಕ್ಕೆ ಗುಡ್‌ಬೈ ಹೇಳಿದೆ.

ಎಐಎಡಿಎಂಕೆ ನಾಯಕರು ಚೆನ್ನೈನಲ್ಲಿ ಪಕ್ಷದ ಸಂಸದರು, ಶಾಸಕರ ಜೊತೆಗೆ ಸಭೆ ನಡೆಸಿದ್ದು ಬಳಿಕ ಮಹತ್ವದ ತೀರ್ಮಾನ ಘೋಷಿಸಿದ್ದಾರೆ. ಈ ಬೆಳವಣಿಗೆ ದಕ್ಷಿಣ ಭಾರತದಲ್ಲಿ ಹೆಚ್ಚಿನ ಲೋಕಸಭಾ ಸ್ಥಾನ ಗೆಲ್ಲುವ ಗುರಿ ಹೊಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎಗೆ ಭಾರಿ ಹಿನ್ನಡೆ ತಂದಿದೆ. ಎಐಎಡಿಎಂಕೆ ನಾಯಕ ಕೆ.ಪಿ. ಮುನುಸ್ವಾಮಿ, ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡ ಬಗ್ಗೆ ನಿರ್ಧಾರ ಪ್ರಕಟಿಸಿದ್ದು ಅಣ್ಣಾಮಲೈ ನಡವಳಿಕೆಯ ಬಗ್ಗೆಯೇ ಪ್ರಸ್ತಾಪ ಮಾಡಿದ್ದಾರೆ. 

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಅಣ್ಣಾದುರೈ ಬಗ್ಗೆ ವಿವಾದ ಸೃಷ್ಟಿಸುವ ರೀತಿ ಮಾತನಾಡಿದ್ದೇ ಈಗ ಮುಳುವಾಗಿದೆ. ಎರಡೂ ಪಕ್ಷಗಳ ನಡುವೆ ಹೊತ್ತುಕೊಂಡಿದ್ದ ಸಣ್ಣ ಕಿಡಿಯೇ ಈಗ ಎರಡು ಪಕ್ಷಗಳ ಸಂಬಂಧವನ್ನು ಕಡಿದು ಹೋಗುವಂತೆ ಮಾಡಿದೆ. ಈ ಬೆಳವಣಿಗೆ ಬಿಜೆಪಿಗೆ ಶಾಕ್ ನೀಡಿದ್ದರೆ, ಡಿಎಂಕೆಗೆ ಸಹಾಯವಾಗುವ ಸಾಧ್ಯತೆ ಇದೆ. ತ್ರಿಕೋನ ಸ್ಪರ್ಧೆ ಎದುರಾದಲ್ಲಿ ಆಡಳಿತಾರೂಢ ಡಿಎಂಕೆಗೆ ಲಾಭ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.‌

In a cloud of controversy for months now, the alliance between the BJP and the AIADMK in Tamil Nadu continues to be on shaky ground. With the BJP’s state chief K Annamalai frequently making comments against the AIADMK and the BJP national leadership also appearing lenient, causing a palpable rift between the two parties, AIADMK general secretary Edappadi K Palaniswami is expected to make an announcement on Monday about the future of the alliance.