ಬ್ರೇಕಿಂಗ್ ನ್ಯೂಸ್
28-09-23 07:23 pm HK News Desk ದೇಶ - ವಿದೇಶ
ಚೆನ್ನೈ, ಸೆ.28: ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂದೇ ಪ್ರಸಿದ್ಧಿ ಪಡೆದಿದ್ದ, ಟೈಮ್ಸ್ ನಿಯತಕಾಲಿಕ 20ನೇ ಶತಮಾನದ ಅತಿ ಪ್ರಭಾವಿ ಮೂವರು ಭಾರತೀಯರಲ್ಲಿ ಒಬ್ಬರೆಂದು ಗುರುತಿಸಿದ್ದ ಎಂ.ಎಸ್. ಸ್ವಾಮಿನಾಥನ್ (98) ಚೆನ್ನೈನಲ್ಲಿ ಗುರುವಾರ ನಿಧನರಾಗಿದ್ದಾರೆ.
ತಮಿಳುನಾಡಿನ ತಂಜಾವೂರು ಜಿಲ್ಲೆಯ ಮನ್ಕೊಂಬು ಎಂಬಲ್ಲಿ 1925ರ ಆಗಸ್ಟ್ 7ರಂದು ಜನಿಸಿದ್ದ ಮನ್ಕೊಂಬು ಸಾಂಬಶಿವನ್ ಸ್ವಾಮಿನಾಥನ್, ಹವಾಮಾನ ತಜ್ಞ, ಸಸ್ಯವಿಜ್ಞಾನಿ, ಕೃಷಿ ತಳಿ ವಿಜ್ಞಾನಿಯಾಗಿ ದೇಶ- ವಿದೇಶದಲ್ಲಿ ಹೆಸರು ಪಡೆದಿದ್ದರು. 1960-70ರ ಕಾಲದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಕೃಷಿ ಸುಧಾರಣೆ, ಭತ್ತ ಮತ್ತು ಗೋಧಿ ತಳಿಯಿಂದ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಹೆಚ್ಚಿಸುವಲ್ಲಿ ತಳಿ ವಿಜ್ಞಾನಿಯಾಗಿ ಸ್ವಾಮಿನಾಥನ್ ಕೆಲಸ ಮಾಡಿದ್ದರು.
ವೈದ್ಯರಾಗಿದ್ದ ಎಂ.ಕೆ.ಸಾಂಬಶಿವನ್ ಮತ್ತು ಪಾರ್ವತಿ ತಂಗಮ್ಮಾಳ್ ಇವರ ಹೆತ್ತವರು. ತಂಜಾವೂರಿನಲ್ಲೇ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಸ್ವಾಮಿನಾಥನ್ ಸಣ್ಣದಿರುವಾಗಲೇ ಕೃಷಿ ವಿಜ್ಞಾನದತ್ತ ಆಸಕ್ತಿ ಹೊಂದಿದ್ದರು. ತಂದೆ ಸಾಂಬಶಿವನ್, ಮಹಾತ್ಮ ಗಾಂಧಿ ಅವರಿಂದ ಪ್ರೇರಣೆ ಪಡೆದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರೆ, ಇತ್ತ ಮಗ ಸ್ವಾಮಿನಾಥನ್ ಸ್ವಾತಂತ್ರ್ಯ ಚಳುವಳಿಯ ಪ್ರೇರಣೆಯಿಂದ ಓರಗೆಯ ಯುವಕರೊಂದಿಗೆ ಪೊಲೀಸ್ ಅಧಿಕಾರಿಯ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ, ಮಹಾತ್ಮ ಗಾಂಧಿಯವರು ಇಷ್ಟದ ಕೃಷಿ ವಿಜ್ಞಾನದಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಸೂಚಿಸಿದ್ದರಿಂದ ತಮಿಳುನಾಡಿನ ಕೊಯಂಬತ್ತೂರಿನ ಅಗ್ರಿಕಲ್ಚರ್ ಕಾಲೇಜಿನಲ್ಲಿ(ಈಗ ತಮಿಳುನಾಡು ಎಗ್ರಿಕಲ್ಚರ್ ಯುನಿವರ್ಸಿಟಿ) ಎರಡು ಪದವಿಗಳನ್ನು ಗಳಿಸಿದ್ದರು.
1949ರಲ್ಲಿ ಸ್ವಾಮಿನಾಥನ್ ಅವರು ದೆಹಲಿಯ ಇಂಡಿಯನ್ ಅಗ್ರಿಕಲ್ಟರಲ್ ರೀಸರ್ಚ್ ಇನ್ಸ್ ಟಿಟ್ಯೂಟ್ ಸಂಸ್ಥೆಯಲ್ಲಿ ತಳಿ ವಿಜ್ಞಾನದ ಬಗ್ಗೆ ಸ್ನಾತಕೋತ್ತರ ಅಧ್ಯಯನ ಮಾಡಿದ್ದರು. ಆನಂತರ, ಲಂಡನ್ನಿನ ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ಫಿಲಾಸಫಿಯಲ್ಲಿ ಡಾಕ್ಟರೇಟ್ ಅಧ್ಯಯನ ಕೈಗೊಂಡಿದ್ದರು. 1954ರಲ್ಲಿ ಕಟಕ್ ನಲ್ಲಿ ಭತ್ತ ಸಂಶೋಧನಾ ಕೇಂದ್ರಕ್ಕೆ (ಸಿಆರ್ ಆರ್ ಐ) ವಿಜ್ಞಾನಿಯಾಗಿ ಸೇರ್ಪಡೆಯಾಗಿದ್ದರು. 1966ರಲ್ಲಿ ತಾನು ಅಧ್ಯಯನ ನಡೆಸಿದ್ದ ದೆಹಲಿಯ ಭಾರತೀಯ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿಯೇ ಡೈರೆಕ್ಟರ್ ಆಗಿ ನೇಮಕಗೊಂಡಿದ್ದರು.
ದೇಶದ ಹಸಿರು ಕ್ರಾಂತಿಯ ಪಿತಾಮಹ
1960ರ ಕಾಲದಲ್ಲಿ ಬೆನ್ನು ಬೆನ್ನಿಗೆ ದೇಶದಲ್ಲಿ ಬರದ ಸ್ಥಿತಿ ಎದುರಾಗಿದ್ದು ಆಡಳಿತಗಾರರಿಗೆ ಜನರಿಗೆ ಆಹಾರ ನೀಡುವುದೇ ಸವಾಲಾಗಿ ಪರಿಣಮಿಸಿತ್ತು. ಜನರ ಹಸಿವು ನೀಗಿಸಲು ಆಹಾರ ಧಾನ್ಯಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಾದ ಸ್ಥಿತಿಯಿತ್ತು. ಹೀಗಾಗಿ ಆಹಾರ ಧಾನ್ಯ ಬೆಳೆ ಹೆಚ್ಚಿಸುವುದೇ ಗುರಿ ಎನ್ನುವ ಧ್ಯೇಯದೊಂದಿಗೆ ಆಗಿನ ಆಡಳಿತಗಾರರು ಕೃಷಿ ವಿಜ್ಞಾನಿಗಳಿಗೆ ಸಂಶೋಧನೆಗೆ ಒತ್ತು ನೀಡುವಂತೆ ಸೂಚಿಸಿದ್ದರು. ಇದೇ ಸಂದರ್ಭದಲ್ಲಿ ಹಸಿರು ಕ್ರಾಂತಿಯ ಯೋಜನೆ ಜಾರಿಗೆ ಕಾರಣವಾಗಿದ್ದು ಎಂ.ಎಸ್. ಸ್ವಾಮಿನಾಥನ್. ಆಗಿನ ಕೃಷಿ ಸಚಿವರಾಗಿದ್ದ ಸುಬ್ರಹ್ಮಣ್ಯಂ(1964-67) ಮತ್ತು ಜಗಜೀವನ್ ರಾಮ್ (1967-70,74-77) ಜೊತೆಗೆ ಸಲಹೆಗಾರನಾಗಿ ದುಡಿದಿದ್ದ ಸ್ವಾಮಿನಾಥನ್, ಭತ್ತ ಮತ್ತು ಗೋಧಿಯಲ್ಲಿ ಹೊಸ ತಳಿಯನ್ನು ಪರಿಚಯಿಸಿದ್ದರು. ಅಮೆರಿಕದ ರೀತಿಯಲ್ಲೇ ಧಾನ್ಯಗಳನ್ನು ಬೆಳೆಯಲು ಜನರಿಗೆ ಪ್ರೇರಣೆ ನೀಡುವ ಸರಕಾರದ ನಡೆಯ ಹಿಂದೆ ಸ್ವಾಮಿನಾಥನ್ ಕೆಲಸ ಮಾಡಿದ್ದರು.
1979ರಲ್ಲಿ ಕೇಂದ್ರ ಸರಕಾರದ ಕೃಷಿ ಮತ್ತು ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದರು. 1980ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಸ್ವಾಮಿನಾಥನ್ ಅವರನ್ನು ಕೃಷಿ, ಗ್ರಾಮೀಣಾಭಿವೃದ್ಧಿ, ವಿಜ್ಞಾನ ಮತ್ತು ಶಿಕ್ಷಣ ಸಂಬಂಧಿಸಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. 1967ರಲ್ಲಿ ಪದ್ಮಶ್ರೀ, 1971ರಲ್ಲಿ ಮ್ಯಾಗ್ಸೇಸೆ, 1972ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. 1988ರಲ್ಲಿ ಸ್ವಾಮಿನಾಥನ್ ಹೆಸರಲ್ಲೇ ಚೆನ್ನೈನಲ್ಲಿ ರಿಸರ್ಚ್ ಫೌಂಡೇಶನ್ ಸ್ಥಾಪನೆ ಮಾಡಲಾಗಿತ್ತು. ಹಳ್ಳಿ ಜನರು ಕೃಷಿಯಲ್ಲಿ ಆಧುನೀಕರಣಕ್ಕೆ ಒತ್ತು ಕೊಡುವಂತೆ ಸಂಸ್ಥೆ ಶ್ರಮಿಸಿತ್ತು. 2004ರಲ್ಲಿ ಸ್ವಾಮಿನಾಥನ್ ಅವರನ್ನು ರೈತರಿಗಾಗಿಯೇ ಮಾಡಲ್ಪಟ್ಟ ರಾಷ್ಟ್ರೀಯ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಎರಡು ವರ್ಷಗಳ ಅವಧಿಯಲ್ಲಿ ಅವರ ಸಮಿತಿ ಐದು ವರದಿಗಳನ್ನು ಕೇಂದ್ರಕ್ಕೆ ಸಲ್ಲಿಕೆ ಮಾಡಿತ್ತು. ಇದರಲ್ಲಿ ಪ್ರಮುಖವಾಗಿ ಕೃಷಿ ಬೆಳೆಗಳಿಗೆ ಅವುಗಳ ಉತ್ಪಾದನಾ ವೆಚ್ಚದ 50 ಶೇಕಡಾದಷ್ಟು ಮೌಲ್ಯವನ್ನು ಕನಿಷ್ಠ ಬೆಂಬಲ ಬೆಲೆಯನ್ನಾಗಿ ಸರಕಾರ ನೀಡಬೇಕೆಂದು ಹೇಳಿದ್ದರು. 2007-13ರಲ್ಲಿ ಸ್ವಾಮಿನಾಥನ್ ಅವರನ್ನು ಯುಪಿಎ ಸರಕಾರ ರಾಜ್ಯಸಭೆಯ ಸದಸ್ಯರನ್ನಾಗಿಯೂ ನೇಮಕ ಮಾಡಿತ್ತು.
ಎಂ.ಎಸ್ ಸ್ವಾಮಿನಾಥನ್ ಅವರ ಪತ್ನಿ ಮೀನಾ ಸ್ವಾಮಿನಾಥನ್ ಅವರೂ ದೊಡ್ಡ ವಿಜ್ಞಾನಿಯಾಗಿದ್ದು 2022ರಲ್ಲಿ ನಿಧನರಾಗಿದ್ದರು. ಮೂವರು ಹೆಣ್ಮಕ್ಕಳಿದ್ದು ಅವರೂ ವಿಜ್ಞಾನಿಗಳಾಗಿದ್ದು ದೇಶ- ವಿದೇಶದಲ್ಲಿ ಸೇವೆಯಲ್ಲಿದ್ದಾರೆ. ಟೈಮ್ಸ್ ನಿಯತಕಾಲಿಕ 20ನೇ ಶತಮಾನದ ಮೂವರು ಪ್ರಭಾವಿ ಭಾರತೀಯ ವ್ಯಕ್ತಿಗಳಲ್ಲಿ ಸ್ವಾಮಿನಾಥನ್ ಅವರನ್ನು ಗುರುತಿಸಿತ್ತು. ಉಳಿದಿಬ್ಬರು ಮಹಾತ್ಮ ಗಾಂಧೀಜಿ ಮತ್ತು ರವೀಂದ್ರನಾಥ ಠಾಗೋರ್ ಅವರಾಗಿದ್ದಾರೆ. (ಮಾಹಿತಿ- ದಿ ಹಿಂದು)
Mankombu Sambasivan Swaminathan aka MS Swaminathan, world renowned agronomist, agricultural scientist and plant geneticist, is no more. He passed away at 11.20 am in Chennai at the age of 98. He had not been keeping well over the past couple of weeks and died of age-related illness. Dr Soumya Swaminathan, his daughter and former deputy director general at WHO, said his end came very peacefully on Thursday morning.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm