Jaipur, Vande Bharat, stones, rods: ವಂದೇ ಭಾರತ್ ರೈಲು ಅಪಘಾತಕ್ಕೆ ಸಂಚು ; ಹಳಿಯ ಮೇಲೆ ಕಲ್ಲು, ರಾಡ್ ಇಟ್ಟು ದುಷ್ಕೃತ್ಯ, ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ 

02-10-23 08:38 pm       HK News Desk   ದೇಶ - ವಿದೇಶ

ಉದಯಪುರ- ಜೈಪುರ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಅವಘಡಕ್ಕೆ ಸಂಚು ಹೂಡಿದ್ದರೇ ಅನ್ನುವ ಅನುಮಾನ ಮೂಡಿದೆ.

ಜೈಪುರ, ಅ.2: ಉದಯಪುರ- ಜೈಪುರ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಅವಘಡಕ್ಕೆ ಸಂಚು ಹೂಡಿದ್ದರೇ ಅನ್ನುವ ಅನುಮಾನ ಮೂಡಿದೆ. ಹಳಿಗಳ ಮೇಲೆ ಕಲ್ಲುಗಳನ್ನು ಇಟ್ಟು ರೈಲು ಹಳಿ ತಪ್ಪಿಸಲು ಪ್ರಯತ್ನಿಸಿದ್ದನ್ನು ಲೊಕೊಮೋಟಿವ್ ಪೈಲಟ್‌ಗಳು ಗಮನಿಸಿ ಅಪಘಾತ ತಪ್ಪಿಸಿದ್ದಾರೆ. ಕೂಡಲೇ ರೈಲನ್ನು ತುರ್ತು ನಿಲುಗಡೆ ಮಾಡಿದ್ದು, ಭಾರೀ ಅನಾಹುತ ತಪ್ಪಿಸಿದ್ದಾರೆ. 

ಎಂದಿನಂತೆ ಈ ಮಾರ್ಗದಲ್ಲಿ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಸಾಗುವುದಿತ್ತು. ಇದನ್ನು ತಿಳಿದವರೇ ಹಳಿಯ ಮೇಲೆ ಕಲ್ಲು ಮತ್ತು ರಾಡ್​ ಪೀಸನ್ನು ಕಿಡಿಗೇಡಿಗಳು ಇಟ್ಟಿದ್ದರು ಎನ್ನಲಾಗಿದೆ. ಇದನ್ನು  ದೂರದಿಂದಲೇ ಗಮನಿಸಿದ ಲೋಕೊ ಪೈಲಟ್‌ಗಳು, ರೈಲನ್ನು ತುರ್ತಾಗಿ ನಿಲ್ಲಿಸಿದ್ದಾರೆ. ಆಮೂಲಕ ಎದುರಾಗುತ್ತಿದ್ದ ಅಪಘಾತವನ್ನು ತಪ್ಪಿಸಿದ್ದಾರೆ.

Vande Bharat train operators spot stones, rods on track, hit emergency  brakes - India Today

ಹಳಿಗಳ ಮೇಲೆ ಕಲ್ಲುಗಳನ್ನು ಇಟ್ಟಿರುವ ಘಟನೆಯ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಗಂಗಾರಾರ್- ಸೋನಿಯಾನಾ ವಿಭಾಗದಲ್ಲಿ ಹಳಿಯ ಪ್ಲೇಟ್‌ ಮೇಲೆ ಕಲ್ಲುಗಳು ಮತ್ತು ರಾಡ್‌ಗಳನ್ನು ಇಟ್ಟಿರುವುದು ಕಂಡುಬಂದಿದೆ. ಘಟನೆ ಸೋಮವಾರ ಬೆಳಗ್ಗೆ 9.55ರ ಸುಮಾರಿಗೆ ನಡೆದಿದ್ದು, ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Vigilant locomotive pilots of the Udaipur-Jaipur Vande Bharat Express on Monday helped avert a disaster after noticing stones and other obstructions on the tracks. The locomotive pilots applied emergency brakes.