ಬ್ರೇಕಿಂಗ್ ನ್ಯೂಸ್
04-10-23 11:55 am HK News Desk ದೇಶ - ವಿದೇಶ
ಸಿಕ್ಕಿಂ, ಅ.4: ಉತ್ತರ ಸಿಕ್ಕಿಂ ಪ್ರಾಂತ್ಯದಲ್ಲಿ ಭಾರೀ ಮಳೆಯಾಗಿದ್ದು ನಿನ್ನೆ ನಡುರಾತ್ರಿ 1.30ರ ಸುಮಾರಿಗೆ ವಿಕೋಪ ಸೃಷ್ಟಿಯಾಗಿದೆ. ತೀಸ್ತಾ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ 23 ಮಂದಿ ಯೋಧರು ಕೊಚ್ಚಿಕೊಂಡು ಹೋಗಿದ್ದಾರೆ.
ಸೇನಾ ಸಿಬ್ಬಂದಿ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಏಕಾಏಕಿ ಪ್ರವಾಹ ಬಂದಿದ್ದರಿಂದ ವಾಹನಗಳ ಸಹಿತ ಸೇನಾ ಸಿಬ್ಬಂದಿ ಕೊಂಚಿಕೊಂಡು ಹೋಗಿದ್ದಾರೆ. ಸೇನಾ ವಾಹನ ಸೇರಿ 41 ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಲೋನಾಕ್ ಸರೋವರ ಇರುವ ಭಾಗದಲ್ಲಿ ಮೇಘಸ್ಫೋಟ ಉಂಟಾಗಿತ್ತು. ಜಲಾಶಯದಲ್ಲಿ ಭಾರೀ ನೀರು ತುಂಬಿಕೊಂಡಿದ್ದರಿಂದ ನೀರನ್ನು ಹೊರಬಿಡಲಾಗಿತ್ತು. ಈ ವೇಳೆ, ತೀಸ್ತಾ ನದಿಯಲ್ಲಿ ಅನಿರೀಕ್ಷಿತ ಪ್ರವಾಹ ಉಂಟಾಗಿದ್ದು ರಕ್ಷಣಾ ಸಿಬಂದಿಯೇ ಕೊಚ್ಚಿಕೊಂಡು ಹೋಗಿದ್ದಾರೆ. ಇದೇ ವೇಳೆ, ದುರಂತದಲ್ಲಿ ಸಿಲುಕಿದ್ದ 90 ಮಂದಿ ಸ್ಥಳೀಯರನ್ನು ರಕ್ಷಣೆ ಮಾಡಲಾಗಿದೆ.
ರಾಜಧಾನಿ ಗ್ಯಾಂಗ್ಟಕ್ ಬಳಿಯ ಸಿಂಗ್ಟಮ್ ನಲ್ಲಿ ನದಿಯ ಅಡ್ಡಲಾಗಿದ್ದ ಸ್ಟೀಲ್ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ದುರಂತ ನಡೆದಿರುವ ಸಿಂಗ್ಟಮ್ ಪ್ರದೇಶಕ್ಕೆ ಸಿಎಂ ಪಿಎಸ್ ತಮಾಂಗ್ ಭೇಟಿ ನೀಡಿದ್ದು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ರಾಜಧಾನಿಯಿಂದ 90 ಕಿಮೀ ದೂರದ ಚುಂಗ್‌ಥಾಂಗ್‌ನಲ್ಲೂ ಸಾಕಷ್ಟು ಅನಾಹುತ ಸಂಭವಿಸಿದ್ದು, ಸೇನಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಮಳೆಯಿಂದಾಗಿ ಪಶ್ಚಿಮ ಬಂಗಾಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 10 ಭಾಗಶಃ ಕೊಚ್ಚಿ ಹೋಗಿದೆ. ಇದರಿಂದ ಈ ಭಾಗದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಿಕ್ಕಿನಲ್ಲಿ ಭಾರೀ ಮಳೆ ಹಾಗೂ ಪ್ರವಾಹದ ಮುನ್ಸೂಚನೆ ನೀಡಲಾಗಿದೆ.
Connectivity to Sikkim, including capital Gangtok, has been affected on Wednesday after an overflowing Teesta river washed away parts of NH-10 that connects the state to the rest of the country. The river water rose to an alarming level after a cloudburst triggered a flash flood in the northeastern state.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm