ಬ್ರೇಕಿಂಗ್ ನ್ಯೂಸ್
16-11-23 08:29 pm HK News Desk ದೇಶ - ವಿದೇಶ
ಮುಂಬೈ, ನ.16: ಡೀಪ್ ಪೇಕ್ ಕಾಟ ಸಿನಿಮಾರಂಗಕ್ಕೆ ತಪ್ಪಿದಂತೆ ಕಾಣುತ್ತಿಲ್ಲ. ರಶ್ಮಿಕಾ ಮಂದಣ್ಣ ಅವರ ವಿಡಿಯೋವನ್ನು ವೈರಲ್ ಮಾಡಿದ ಬಳಿಕ, ಕತ್ರಿನಾ ಕೈಫ್ ಫೋಟೋವನ್ನು ಆಶ್ಲೀಲವಾಗಿ ಡೀಪ್ ಫೇಕ್ ಮಾಡಲಾಗಿತ್ತು. ಇದೀಗ ಬಾಲಿವುಡ್ ಮತ್ತೊಬ್ಬ ನಟಿಯ ಡೀಪ್ ಫೇಕ್ ವಿಡಿಯೋವನ್ನು ವೈರಲ್ ಮಾಡಲಾಗಿದೆ.
ಬಿಟೌನ್ ಖ್ಯಾತ ನಟಿ ಕಾಜೋಲ್ ಅವರ ಮುಖವನ್ನು ಜೋಡಿಸಿ ವಿಡಿಯೋವೊಂದು ವೈರಲ್ ಮಾಡಲಾಗಿದೆ. ಕಾಜೋಲ್ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಎಐ ಮೂಲಕ ಡೀಪ್ ಫೇಕ್ ಮಾಡಿ ಹರಿದು ಬಿಡಲಾಗಿದೆ.
ಈ ವಿಡಿಯೋವನ್ನು ಜೂ.5 ರಂದು ಟಿಕ್ ಟಾಕ್ ನಲ್ಲಿ ಸೋಶಿಯಲ್ ಮೀಡಿಯಾ ತಾರೆಯೊಬ್ಬರು ʼಗೆಟ್ ರೆಡಿ ವಿತ್ ಮಿ ಟ್ರೆಂಡ್ʼ ಅಡಿಯಲ್ಲಿ ಅಪ್ ಲೋಡ್ ಮಾಡಲಾಗಿತ್ತು. ಇದೇ ವಿಡಿಯೋವನ್ನು ಬಳಸಿಕೊಂಡು ವಿಡಿಯೋದಲ್ಲಿರುವವರ ಮುಖಕ್ಕೆ ಕಾಜೋಲ್ ಅವರ ಮುಖವನ್ನು ಜೋಡಿಸಲಾಗಿದೆ ಎಂದು ಫ್ಯಾಕ್ಟ್ ಚೆಕ್ ಮಾಡುವ ʼಬೂಮ್ʼ ವರದಿ ಮಾಡಿದೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಟೌನ್ ತಾರೆಯರು ಮಾತ್ರವಲ್ಲದೆ ಹಾಲಿವುಡ್ ಕಲಾವಿದರು ಕೂಡ ಡೀಪ್ ಫೇಕ್ ಬಲೆಗೆ ಸಿಲುಕಿದ್ದಾರೆ.
ನಟಿ ರಶ್ಮಿಕಾಳ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್ ;
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅವರ ಮುಖವನ್ನು ಬಳಸಿಕೊಂಡು ಡೀಪ್ ಫೇಕ್ ವಿಡಿಯೋ ಮಾಡಿ ವೈರಲ್ ಮಾಡಲಾಗಿತ್ತು.
ಝಾರಾ ಪಟೇಲ್ ಎನ್ನುವ ಇಂಡೋ – ಬ್ರಿಟೀಷ್ ಸೋಶಿಯಲ್ ಮೀಡಿಯಾ ತಾರೆಯ ಅಸಲಿ ವಿಡಿಯೋಗೆ ರಶ್ಮಿಕಾ ಅವರ ಫೋಟೋವನ್ನು ಎಐ ಮೂಲಕ ಡೀಪ್ ಫೇಕ್ ಮಾಡಲಾಗಿತ್ತು. ಸ್ತನದ ಅರ್ಧ ಭಾಗ ತೋರುವಂತೆ ಆಶ್ಲೀಲವಾಗಿ ಎಡಿಟ್ ಮಾಡಲಾಗಿತ್ತು.
ಡೀಪ್ ಫೇಕ್ ವಿಡಿಯೋಗೆ ಬಿಗ್ ಬಿ ಸೇರಿದಂತೆ ಅನೇಕರು ರಶ್ಮಿಕಾ ಅವರ ಪರ ನಿಂತಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರು ಎಫ್ ಐಆರ್ ಕೂಡ ದಾಖಲಿಸಿದ್ದಾರೆ.
ರಶ್ಮಿಕಾ ಬಳಿಕ ಕತ್ರಿನಾ ಕೈಫ್ ಅವರ ಫೋಟೋವನ್ನು ಕೂಡ ಡೀಪ್ ಫೇಕ್ ಮಾಡಲಾಗಿತ್ತು. ಇದೀಗ ರಶ್ಮಿಕಾ ಅವರ ಮತ್ತೊಂದು ವಿಡಿಯೋ ಡೀಪ್ ಫೇಕ್ ಮಾಡಲಾಗಿದೆ.
ಯುವತಿಯೊಬ್ಬರ ವಿಡಿಯೋಗೆ ರಶ್ಮಿಕಾ ಅವರ ಮುಖವನ್ನು ಮಾರ್ಫಿಂಗ್ ಮಾಡಲಾಗಿದೆ. ಇದನ್ನು ರಶ್ಮಿಕಾ ಅವರ ಫ್ಯಾನ್ ಪೇಜ್ ವೊಂದು ಹಂಚಿಕೊಂಡಿದೆ. ನಗುಮುಖದಲ್ಲಿರುವ ರಶ್ಮಿಕಾರ ಈ ಡೀಪ್ ಫೇಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
After Rashmika Mandanna and Katrina Kaif, a fake video of Bollywood actress Kajol has been doing rounds on social media platforms. The footage, originally shared on TikTok, showcases Kajol's face digitally manipulated to create a misleading and fabricated scenario. In the video, the woman purporting to be Kajol appears to be changing clothes, further emphasizing the deceptive nature of the deepfake content.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm