ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ ; ಟ್ರಕ್ ಗೆ ಕಾರು ಡಿಕ್ಕಿ , ಐವರು ಪೊಲೀಸರ ಸಾವು

19-11-23 03:09 pm       HK News Desk   ದೇಶ - ವಿದೇಶ

ಭೀಕರ ರಸ್ತೆ ಅಪಘಾತದಲ್ಲಿ ಐವರು ಪೊಲೀಸ್‌ ಅಧಿಕಾರಿಗಳು  ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಚುರು ಎಂಬಲ್ಲಿ ಭಾನುವಾರ ನಡೆದಿದೆ.

ಜೈಪುರ, ನ.19: ಭೀಕರ ರಸ್ತೆ ಅಪಘಾತದಲ್ಲಿ ಐವರು ಪೊಲೀಸ್‌ ಅಧಿಕಾರಿಗಳು  ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಚುರು ಎಂಬಲ್ಲಿ ಭಾನುವಾರ ನಡೆದಿದೆ.

ಇಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಆಗಲಿದ್ದ ಕಾರಣ ಪೊಲೀಸರು ಕಾರಿನಲ್ಲಿ ನಗೌರ್‌ನಿಂದ ಜುಂಜುನುಗೆ ಕರ್ತವ್ಯಕ್ಕಾಗಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

Five cops heading for PM Modi's rally killed in car-truck collision in  Rajasthan's Nagaur | India News - News9live

PM Narendra Modi का 4 राज्‍यों का 36 घंटे का दौरा आज से शुरू, 50 हजार करोड़  की देंगे सौगात, जानिए पूरा शेड्यूल| Zee Business Hindi

ಪೊಲೀಸರ ವಾಹನ ಅತೀ ವೇಗದಿಂದ ಪ್ರಯಾಣಿಸುತ್ತಿತ್ತು. ಈ ವೇಳೆ ಟ್ರಕ್‌ ವೊಂದು ಓವರ್‌ ಟೇಕ್‌ ಮಾಡಿ ಹೋಗಿದೆ. ಇದೇ ಸಂದರ್ಭದಲ್ಲಿ ಮುಂದೆ ಹೋಗುತ್ತಿದ್ದ ಟ್ರಕ್‌ ಅಚಾನಕ್‌ ಆಗಿ ಬ್ರೇಕ್‌ ಹಾಕಿದೆ. ಪರಿಣಾಮ ಪೊಲೀಸರ ವಾಹನ ಟ್ರಕ್‌ ಗೆ ಹೋಗಿ ಢಿಕ್ಕಿ ಹೊಡೆದಿದೆ. ಇದರಿಂದ ವಾಹನದಲ್ಲಿ ಐವರು ಪೊಲೀಸರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ತಿಳಿಸಿದೆ. 

ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮೃತ ಪೊಲೀಸರೆಲ್ಲ ರಾಜಸ್ಥಾನದ ನಾಗೌರ್ ಜಿಲ್ಲೆಯವರೆಂದು ವರದಿ ತಿಳಿಸಿದೆ.

Six policemen were killed, while another suffered serious injuries after the SUV they were travelling in collided with a truck on National Highway 58 in Churu district of Rajasthan on Sunday morning.