ಮಂದಿರ ಕೆಡವಿ ಮಸೀದಿ ಕಟ್ಟುವೆವು ; ಕಿಡಿ ಹೊತ್ತಿಸಿದ ಟ್ವೀಟ್

06-08-20 11:57 am       Headline Karnataka News Network   ದೇಶ - ವಿದೇಶ

ಅಖಿಲ ಭಾರತ ಇಮಾಮ್ ಸಂಘದ ಅಧ್ಯಕ್ಷ  ಸಾಜಿದ್ ರಶೀದ್ ತಮ್ಮ ಟ್ವಿಟರ್  ನಲ್ಲಿ ಅಯೋಧ್ಯೆಯಲ್ಲಿ ಹಿಂದೆಯೂ ಬಾಬರಿ ಮಸೀದಿ ಇತ್ತು, ಮುಂದೆಯೂ ಇರಲಿದೆ- ಯಾವ ತೀರ್ಪೂ ಲೆಕ್ಕಕ್ಕಿಲ್ಲ ಎಂದು ಬರೆದು ಕೊಂಡಿದ್ದಾರೆ.

ನವದೆಹಲಿ, ಆಗಸ್ಟ್ 06: ರಾಮಮಂದಿರಕ್ಕೆ ನಿನ್ನೆ ಯಷ್ಟೆ ಭೂಮಿಪೂಜೆ ಕಾರ್ಯಕ್ರಮ ನೆರವೇರಿದೆ. ಇದರ ಬೆನ್ನಲೇ ಕೆಲವು ಕಟ್ಟರ್ ಮುಸ್ಲಿಂ ಸಂಘಟನೆಗಳಿಂದ ಪ್ರಚೋದನಕಾರಿ ಹೇಳಿಕೆಗಳ ಬರತೊಡಗಿದೆ.

ಈ ನಡುವೆ ಇಮಾಮ್ ಒಬ್ಬರು ಪ್ರಚೋದನಾತ್ಮಕ ಟ್ವಿಟ್ ಭಾರೀ ಸದ್ದು ಮಾಡ ತೊಡಗಿದೆ.  ಅಖಿಲ ಭಾರತ ಇಮಾಮ್ ಸಂಘದ ಅಧ್ಯಕ್ಷ  ಸಾಜಿದ್ ರಶೀದ್ ತಮ್ಮ ಟ್ವಿಟರ್  ನಲ್ಲಿ ಅಯೋಧ್ಯೆಯಲ್ಲಿ ಹಿಂದೆಯೂ ಬಾಬರಿ ಮಸೀದಿ ಇತ್ತು, ಮುಂದೆಯೂ ಇರಲಿದೆ- ಯಾವ ತೀರ್ಪೂ ಲೆಕ್ಕಕ್ಕಿಲ್ಲ ಎಂದು ಬರೆದು ಕೊಂಡಿದ್ದಾರೆ. ಇಲ್ಲಿ ಶ್ರೀ ರಾಮನ ಮಂದಿರ ಕಟ್ಟಿದರೆ ಅದನ್ನ  ನೆಲಸಮ ಮಾಡಿ ಅಲ್ಲಿ ಮಸೀದಿ ಕಟ್ಟುವುದಾಗಿ ಪ್ರಚೋದನಕಾರಿ ಟ್ವೀಟ್ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

 

ಮಸೀದಿ ಯಾವಾಗಲೂ ಮಸೀದಿಯಾಗಿಯೇ ಇರಬೇಕು ಎಂದು ಇಸ್ಲಾಂ ಧರ್ಮ ಹೇಳುತ್ತದೆ. ಮಸೀದಿ ಜಾಗದಲ್ಲಿ ಬೇರೆ ಏನನ್ನೇ ನಿರ್ಮಿಸಲು ನಮ್ಮ ಧರ್ಮ ಬಿಡುವುದಿಲ್ಲ. ಇಲ್ಲಿ ನೀಡಿರುವ ಹೇಳಿಕೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ವಿವಾದಿತ ಜಾಗದಲ್ಲಿ ಸದಾ ಇದದ್ದು ಮಸೀದಿಯೇ ಆದ್ದುದರಿಂದ ಮುಂದೆಯೂ ಆ ಜಾಗದಲ್ಲಿ ಮಸೀದಿಯೇ ಇರಲಿದೆ ಎಂದು ಟ್ವೀಟರ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇಗ ದೇಶದಲ್ಕಿ ಭಾರೀ ವಿವಾದ ಹುಟ್ಟುಹಾಕಿದೆ.