ಬ್ರೇಕಿಂಗ್ ನ್ಯೂಸ್
27-11-23 04:55 pm HK News Desk ದೇಶ - ವಿದೇಶ
ಮುಂಬೈ, ನ 27: ನಟಿಯರಾದ ರಶ್ಮಿಕಾ, ಕತ್ರಿನಾ, ಐಶ್ವರ್ಯ ರೈ, ಕಾಜೋಲ್ ಮತ್ತು ಸಾರಾ ತೆಂಡೂಲ್ಕರ್ ಅವರ ಡೀಪ್ಫೇಕ್ ವೀಡಿಯೋಗಳು ಆನ್ಲೈನ್ನಲ್ಲಿ ಕಾಣಿಸಿಕೊಂಡು ದಿಗ್ಭ್ರಮೆ ಮತ್ತು ಆಕ್ರೋಶ ವ್ಯಕ್ತವಾದ ಬಳಿಕವೂ ಈಗ ನಟಿ ಆಲಿಯಾ ಭಟ್ ಡೀಪ್ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ದುರುಪಯೋಗದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
ವೈರಲ್ ವೀಡಿಯೊದಲ್ಲಿ ಆಲಿಯಾ ಭಟ್ ಅವರ ಮುಖವನ್ನು ಅಶ್ಲೀಲ ಮತ್ತು ಸನ್ನೆ ಮಾಡುವ ರೀತಿಯಲ್ಲಿರುವ ಇನ್ನೊಬ್ಬ ಮಹಿಳೆಯ ವೀಡಿಯೊದಲ್ಲಿ ಎಡಿಟ್ ಮಾಡಲಾಗಿದೆ. ಆದರೆ ವೀಡಿಯೊದಲ್ಲಿ ಕಂಡುಬರುವ ಮಹಿಳೆ ಆಲಿಯಾ ಭಟ್ ಅಲ್ಲ ಎಂದು ಯಾರುಬೇಕಾದರೂ ಗಮನಿಸಬುದು. ಡೀಪ್ಫೇಕ್ ತಂತ್ರಜ್ಞಾನದ ಬೆದರಿಕೆಗಳ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ, ಆಲಿಯಾ ಭಟ್ ಅವರ ಡೀಪ್ಫೇಕ್ ವೀಡಿಯೊ ಆಕ್ರೋಶವನ್ನು ಹುಟ್ಟುಹಾಕಿದೆ.
ರಶ್ಮಿಕಾ ಡೀಪ್ಫೇಕ್ ವೀಡಿಯೊ ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಇಂತಹ ಘಟನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಅಗತ್ಯವೆಂದು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸೇರಿ ಹಲವರು ಒತ್ತಾಯಿಸಿದ್ದರು. ಬಳಿಕ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿತ್ತು. ಕಡೆಗೆ ಇದು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಿತು. ಈ ತಿಂಗಳ ಆರಂಭದಲ್ಲಿ ಉದ್ದೇಶಪೂರ್ವಕ, ಸುಳ್ಳು ಮಾಹಿತಿ ಹರಡಲು ಈ ರೀತಿ ಮಾಡಲಾಗುತ್ತಿದೆ. “ನಾನು ಇತ್ತೀಚೆಗೆ ವೀಡಿಯೊವನ್ನು ನೋಡಿದೆ, ಅದರಲ್ಲಿ ನಾನು ಗಾರ್ಬಾ ಹಾಡನ್ನು ಹಾಡಿದ್ದೇನೆಂದು ಚಿತ್ರ ಹಾಕಿ ಹೇಳಲಾಗಿತ್ತು. ಆದರೆ ನಾನೆಂದೂ ಗಾರ್ಬಾ ಹಾಡಿಲ್ಲ. ಇಂತಹ ಇನ್ನೂ ಹಲವು ವಿಡಿಯೋಗಳು ಆನ್ಲೈನ್ನಲ್ಲಿವೆ ಎಂದು ಹೇಳಿದ್ದರು.
ಡೀಪ್ ಫೇಕ್ಗಳು ಎಐ ಕುಶಲತೆಯಿಂದ ಕೂಡಿದ ಛಾಯಾಚಿತ್ರಗಳು ಅಥವಾ ವೀಡಿಯೊಗಳಾಗಿವೆ, ಸಂಭವಿಸದ ಘಟನೆಗಳು ಅಥವಾ ಹೇಳಿಕೆಗಳನ್ನು ಮನವರಿಕೆಯಾಗುವಂತೆ ಚಿತ್ರಿಸಬಹುದು. ಒಬ್ಬ ವ್ಯಕ್ತಿಯ ಚಿತ್ರವನ್ನು ಇನ್ನೊಬ್ಬರ ಚಿತ್ರದೊಂದಿಗೆ ಎಡಿಟ್ ಮಾಡುವ ಮೂಲಕ ನಕಲಿ ರಚಿಸಬಹುದಾಗಿದೆ.
ಡೀಪ್ ಫೇಕ್ ತಡೆಗೆ ಶೀಘ್ರ ಹೊಸ ಕಾನೂನು ಜಾರಿ ಮಾಡುವುದೆಂದು ಇತ್ತೀಚೆಗೆ ಕೇಂದ್ರ ಸರ್ಕಾರ ಹೇಳಿದೆ.
ಇನ್ನು ಕೆಲವು ದಿನಗಳ ಹಿಂದೆ ನಟಿ ಕಾಜೋಲ್ ಅವರು ಬಟ್ಟೆ ಬದಲಾಯಿಸುವ ರೀತಿಯ ವಿಡಿಯೋ ವೈರಲ್ ಆಗಿತ್ತು. ಕ್ಯಾಮರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವ ಮಹಿಳೆಯೊಬ್ಬರ ಮುಖಕ್ಕೆ ಕಾಜೋಲ್ ಅವರ ಮುಖವನ್ನು ಎಡಿಟ್ ಮಾಡಲಾಗಿತ್ತು. ವೈರಲ್ ಆಗಿರುವ ವಿಡಿಯೋವನ್ನು ಫ್ಯಾಕ್ಟ್ ಚೆಕ್ ಮಾಡಿಸಿದ್ದು, ಅಸಲಿ ಮಹಿಳೆಯನ್ನು ಬ್ರಿಟಿಷ್ ಸೋಶಿಯಲ್ ಮೀಡಿಯಾ ಪ್ರಬಾವಿ ರೋಸಿ ಬ್ರೀನ್ ಎಂದು ಗುರುತಿಸಲಾಗಿತ್ತು.
After viral deepfake videos of Rashmika Mandanna and Katrina Kaif, actress Alia Bhatt is the new target of deepfake. In the recent video, Bhatt’s face has been morphed into another woman’s face who is making obscene gestures towards the camera. This video is making rounds on the internet raising concerns on the use of artificial intelligence.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm