ಬ್ರೇಕಿಂಗ್ ನ್ಯೂಸ್
14-12-23 08:54 pm HK News Desk ದೇಶ - ವಿದೇಶ
ನವದೆಹಲಿ, ಡಿ.14: ಸಂಸತ್ತಿನಲ್ಲಿ ಭದ್ರತಾ ಲೋಪ ಘಟನೆ ವಿಚಾರದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗುರುವಾರ ಕೋಲಾಹಲವೇ ನಡೆದಿದ್ದು ಪ್ರತಿಭಟನೆ ನಡೆಸಿ ಅಶಿಸ್ತು ತೋರಿದ 15 ಸಂಸದರನ್ನು ಸ್ಪೀಕರ್ ಅಮಾನತು ಮಾಡಿದ್ದಾರೆ.
ಭದ್ರತಾ ಲೋಪದ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಸಂಸದರು ಭಾರಿ ಗದ್ದಲ ನಡೆಸಿದ್ದಾರೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ, ಭದ್ರತಾ ವೈಫಲ್ಯಕ್ಕೆ ಪ್ರತಿಪಕ್ಷಗಳು ಸ್ಪೀಕರ್ ಎಚ್ಚರಿಕೆ ಲೆಕ್ಕಿಸದೆ ಪ್ರತಿಭಟನೆ ನಡೆಸಿದ್ದಾರೆ. ಸದನದಲ್ಲಿ ಅಶಿಸ್ತು ತೋರಿದ ಕಾರಣಕ್ಕೆ ಸ್ಪೀಕರ್ ಓಂ ಬಿರ್ಲಾ ಲೋಕಸಭೆಯ 14 ಸಂಸದರನ್ನು ಅಮಾನತು ಮಾಡಿದ್ದಾರೆ. ಸಂಸದರಾದ ಟಿಎನ್ ಪ್ರತಾಪನ್, ಹಿಬಿ ಇಡನ್, ಎಸ್ ಜ್ಯೋತಿಮಣಿ, ರಮ್ಯಾ ಹರಿದಾಸ್, ಡೀನ್ ಕುರಿಯಾಕೋಸ್, ಬೆನ್ನಿ ಬೆಹನಾನ್, ವಿಕೆ ಶ್ರೀಕಂಠನ್, ಮೊಹಮ್ಮದ್ ಜಾವೇದ್, ಪಿಆರ್ ನಟರಾಜನ್, ಕನ್ನಿಮೊಳಿ ಕರುಣಾನಿಧಿ, ಕೆ ಸುಬ್ರಹ್ಮಮಣ್ಯಂ, ಎಸ್ ಆರ್ ಪ್ರತಿಭನ್, ಎಸ್. ವೆಂಕಟೇಶನ್ ಹಾಗೂ ಮಣಿಕಂ ಠಾಗೋರ್ ಅಮಾನತಾಗಿದ್ದು ಇವರನ್ನು ಸಂಪೂರ್ಣ ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಲಾಗಿದೆ. 15 ಸಂಸದರ ಪೈಕಿ ಒಂಬತ್ತು ಮಂದಿ ಕಾಂಗ್ರೆಸ್, ಇಬ್ಬರು ಸಿಪಿಎಂ, ಒಬ್ಬರು ಸಿಪಿಐ ಮತ್ತು ಇಬ್ಬರು ಡಿಎಂಕೆ ಸಂಸದರು ಸೇರಿದ್ದಾರೆ. ಇನ್ನು ರಾಜ್ಯಸಭೆಯಲ್ಲಿ ಟಿಎಂಸಿ ಸಂಸದ ಡೆರೆಕ್ ಓಬ್ರಿಯಾನ್ರನ್ನ ಅಮಾನತುಗೊಳಿಸಲಾಗಿದೆ.
ಪ್ರತಿಪಕ್ಷಗಳ ಸಂಸದರು ಗುರುವಾರ ಬೆಳಗ್ಗೆ ಮಹತ್ವದ ಸಭೆ ನಡಸಿದ್ದು ಅಧಿವೇಶನದಲ್ಲಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಪಾಸ್ ನೀಡಿ ಸಂಸತ್ ಭದ್ರತಾ ಲೋಪಕ್ಕೆ ಕಾರಣವಾಗಿರುವ ಸಂಸದ ಪ್ರತಾಪ್ ಸಿಂಹ ಅವರ ಸಂಸದ ಸ್ಥಾನ ರದ್ದು ಮಾಡುವಂತೆ ಆಗ್ರಹಿಸಿದ್ದಲ್ಲದೆ, ಭದ್ರತಾ ವೈಫಲ್ಯದ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು. ತನಿಖೆಯಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು.
ಗುರುವಾರ ಬೆಳಗ್ಗೆ ರಾಜ್ಯಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ಸಂಸದರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಸಂಸತ್ ಭದ್ರತಾ ಲೋಪದ ಕುರಿತು ಚರ್ಚೆಗೆ ಪಟ್ಟು ಹಿಡಿದಿದ್ದು ಭದ್ರತಾ ವೈಫಲ್ಯದ ಕುರಿತು ಚರ್ಚಿಸಲು ಉಳಿದ ಕಲಾಪವನ್ನು ಬದಿಗಿಟ್ಟು ಅವಕಾಶ ನೀಡುವಂತೆ 28 ನೋಟಿಸ್ಗಳನ್ನು ಮಂಡಿಸಿದರು. ಆದರೆ, ಈ ನೋಟಿಸ್ಗಳನ್ನು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ತಿರಸ್ಕರಿಸಿದರು. ಇದರಿಂದ ಕೋಪಗೊಂಡ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿದರು, ಗೃಹ ಸಚಿವ ಅಮಿತ್ ಶಾ ಅವರೇ ಭದ್ರತಾ ಲೋಪದ ಬಗ್ಗೆ ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸಿದರು. ಸಂಸದರ 'ಅನುಚಿತ ನಡವಳಿಕೆ'ಯನ್ನು ಖಂಡಿಸಿದ ಧನಕರ್, ಡೆರೆಕ್ ಓಬ್ರಿಯನ್ ಅವರ ನಡವಳಿಕೆಯು ಅಧ್ಯಕ್ಷ ಸ್ಥಾನಕ್ಕೆ ತೋರುವ ಅಗೌರವವಾಗಿದೆ, ಇದು ಗಂಭೀರ ದುರ್ವರ್ತನೆ ಎಂದು ಹೇಳಿ ಸದನದಿಂದ ಹೊರ ಹೋಗುವಂತೆ ಸೂಚಿಸಿದರು. ಆನಂತರ, ಲೋಕಸಭೆಯಲ್ಲೂ ಇದೇ ರೀತಿ ಕಾಂಗ್ರೆಸ್ ಸದಸ್ಯರು ಗದ್ದಲ ನಡೆಸಿದ್ದು ಸ್ಪೀಕರ್ ಅಮಾನತುಗೊಳಿಸುವ ಚಾಟಿ ಬೀಸಿದ್ದಾರೆ. ಒಂದೇ ದಿನ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಂಸದರನ್ನು ಅಮಾನತುಗೊಳಿಸಿದ್ದು ಇದೇ ಮೊದಲು ಎನ್ನಲಾಗುತ್ತಿದೆ.
15 MPs suspended for remaining session amid uproar; both houses adjourned for the day, 15 MPs have been suspended from the Parliament for disrupting house proceedings, a day after a major security breach in parliament on Wednesday.
21-05-25 02:35 pm
Bangalore Correspondent
ED Raids, Parameshwar College, Ranya Rao: ಹೋಂ...
21-05-25 01:50 pm
KG Halli Police Sub inspector Nagraj, Wife su...
21-05-25 12:12 pm
Accident in Vijaypura, 5 Killed, VRL volvo bu...
21-05-25 11:33 am
Darshan, Pavitra, Court case: ರೇಣುಕಾಸ್ವಾಮಿ ಹತ...
20-05-25 10:49 pm
21-05-25 12:57 pm
HK News Desk
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
20-05-25 11:12 pm
Mangalore Correspondent
ಕೊಂಡಾಣ ಜಾತ್ರೆಯಲ್ಲಿ ಮುತ್ತಣ್ಣ ಶೆಟ್ಟಿ ಮುಂಡಾಸು ಕಟ...
20-05-25 06:59 pm
Manipal Rain, Udupi: ಕರಾವಳಿಯಲ್ಲಿ ದಿಢೀರ್ ಮಳೆಗಾ...
20-05-25 02:03 pm
Job Scam Mangalore, Police Suspend, Hireglow...
19-05-25 11:07 pm
Jail Attack, Suhas Shetty, Mangalore, Chotte...
19-05-25 10:14 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm