Newdelhi, Home Minister Amit Shah, Bills Replacing IPC, CrPC: ಬ್ರಿಟಿಷರ ಕಾಲದ ಕಾನೂನು ಪದ್ಧತಿಗೆ ತಿಲಾಂಜಲಿ ; ಐಪಿಸಿ, ಸಿಆರ್ ಪಿಸಿಗಳಿಗೆ ಹೊಸ ಮಾರ್ಪಾಡು, ಅಪ್ರಾಪ್ತರ ಗ್ಯಾಂಗ್ ರೇಪ್, ಹತ್ಯೆಗಳಿಗೆ ಗಲ್ಲು ಶಿಕ್ಷೆ, ಖೋಟಾ ನೋಟು, ಆರ್ಥಿಕ ಅಪರಾಧವೂ ಭಯೋತ್ಪಾದನೆ ! ಕೋಮು ದ್ವೇಷದ ಹತ್ಯೆಗೆ ಶಿಕ್ಷೆ ಹೆಚ್ಚಳ 

22-12-23 04:52 pm       HK News Desk   ದೇಶ - ವಿದೇಶ

ದೇಶದ ಕ್ರಿಮಿನಲ್ ಕಾನೂನು ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೆಜ್ಜೆ ಇಟ್ಟಿದೆ. ದೇಶ ಸ್ವಾತಂತ್ರ್ಯಗೊಳ್ಳುವುದಕ್ಕೂ ಮುನ್ನ ಬ್ರಿಟಿಷರ ಕಾಲದಲ್ಲಿ ರಚನೆಗೊಂಡಿದ್ದ ಅಪರಾಧ ಕಾನೂನು ವ್ಯವಸ್ಥೆಯನ್ನು ಮಾರ್ಪಡಿಸಿದ್ದು ಹೊಸತಾಗಿ ಮೂರು ಕಾನೂನು ವಿಧೇಯಕಗಳನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮತಿ ಪಡೆಯಲಾಗಿದೆ.

ನವದೆಹಲಿ, ಡಿ.22: ದೇಶದ ಕ್ರಿಮಿನಲ್ ಕಾನೂನು ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೆಜ್ಜೆ ಇಟ್ಟಿದೆ. ದೇಶ ಸ್ವಾತಂತ್ರ್ಯಗೊಳ್ಳುವುದಕ್ಕೂ ಮುನ್ನ ಬ್ರಿಟಿಷರ ಕಾಲದಲ್ಲಿ ರಚನೆಗೊಂಡಿದ್ದ ಅಪರಾಧ ಕಾನೂನು ವ್ಯವಸ್ಥೆಯನ್ನು ಮಾರ್ಪಡಿಸಿದ್ದು ಹೊಸತಾಗಿ ಮೂರು ಕಾನೂನು ವಿಧೇಯಕಗಳನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮತಿ ಪಡೆಯಲಾಗಿದೆ. ಹೊಸ ಮಸೂದೆಗೆ ರಾಷ್ಟ್ರಪತಿ ಅಂಕಿತ ಬಿದ್ದ ಬೆನ್ನಲ್ಲೇ ಅಧಿಕೃತವಾಗಿ ದೇಶದಲ್ಲಿ ಹೊಸ ಕಾನೂನು ಜಾರಿಗೆ ಬರಲಿದೆ.

1860ರಲ್ಲಿ ಜಾರಿಗೆ ಬಂದಿದ್ದ ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲಿಗೆ ಭಾರತೀಯ ನ್ಯಾಯ ಸಂಹಿತೆ -2023, 1898ರಲ್ಲಿ ಜಾರಿಗೆ ಬಂದಿದ್ದ ಭಾರತೀಯ ಅಪರಾಧ ಪ್ರಕ್ರಿಯೆ ಸಂಹಿತೆ (ಸಿಆರ್ ಪಿಸಿ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ -2023, ಭಾರತೀಯ ಎವಿಡೆನ್ಸ್ ಆಕ್ಟ್ -1872ರ ಬದಲಾಗಿ ಭಾರತೀಯ ಸಾಕ್ಷ್ಯ ಅಧಿನಿಯಮ -2023 ಜಾರಿಗೆ ತರಲಾಗುತ್ತಿದ್ದು, ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಷಾ ಮಂಡನೆ ಮಾಡಿದ್ದಾರೆ. ಉಭಯ ಸದನಗಳಲ್ಲಿಯೂ ಹೊಸ ಕಾನೂನು ಮಸೂದೆಗಳಿಗೆ ಅನುಮೋದನೆ ಸಿಕ್ಕಿದೆ.

ಹೊಸ ವಿಧೇಯಕಗಳಲ್ಲಿ ಪ್ರಕರಣಗಳ ತುರ್ತು ಇತ್ಯರ್ಥಕ್ಕೆ ಆದ್ಯತೆ ನೀಡಲಾಗಿದೆ. ಕ್ರಿಮಿನಲ್ ಮೊಕದ್ದಮೆಗಳು, ಬಂಧನ, ತನಿಖೆ, ಚಾರ್ಜ್ ಶೀಟ್ ಸಲ್ಲಿಕೆ, ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ನಡೆಯುವ ವಿಚಾರಣೆ, ಜಾಮೀನು ಅರ್ಜಿಗಳ ವಿಚಾರಣೆ, ತೀರ್ಪು, ಕ್ಷಮಾದಾನದಂತಹ ಅರ್ಜಿಗಳನ್ನು ಇತ್ಯರ್ಥಪಡಿಸಲು ಕಾಲಮಿತಿ ನಿಗದಿ ಮಾಡಲಾಗಿದೆ. 45 ದಿನಗಳಲ್ಲಿ ಪ್ರಕರಣ ಇತ್ಯರ್ಥಗೊಳಿಸುವಂತೆ ಕಾನೂನು ರೂಪಿಸಲಾಗಿದೆ. ಇದಲ್ಲದೆ, ಮೂರೂ ವಿಧೇಯಕಗಳಲ್ಲಿ ಅಪರಾಧ ಎಸಗಿದ ವ್ಯಕ್ತಿಗೆ ಶಿಕ್ಷೆ ನೀಡುವುದಕ್ಕಿಂತ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಆದ್ಯತೆ ನೀಡಲಾಗಿದೆ. ಹಿಟ್ ಆಂಡ್ ರನ್ ಪ್ರಕರಣಕ್ಕೆ ಹೊಸ ವಿಧೇಯಕದಲ್ಲಿ ಹತ್ತು ವರ್ಷ ಶಿಕ್ಷೆ ನೀಡಲಾಗಿದೆ. ಒಂದ್ವೇಳೆ ಅಪಘಾತ ಎಸಗಿದ ವ್ಯಕ್ತಿ ಪರಾರಿಯಾಗದೆ, ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದಲ್ಲಿ ಶಿಕ್ಷೆಯ ಪ್ರಮಾಣ ತಗ್ಗಿಸುವ ಅವಕಾಶ ಇದೆ.

Mandatory Minimum Sentences: Over Criminalization? – The Criminal Law Blog

ಐಪಿಸಿ ಸೆಕ್ಷನ್ ಕಡಿತ, ಕಡ್ಡಾಯ ಕನಿಷ್ಠ ಶಿಕ್ಷೆ

ಐಪಿಸಿ ಬದಲು ಬರುತ್ತಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗಿದೆ. ಹಿಂದೆ ಇದ್ದ 511 ಸೆಕ್ಷನ್ ಗಳನ್ನು ಕಡಿತಗೊಳಿಸಿ 358ಕ್ಕೆ ಇಳಿಸಲಾಗಿದೆ. ಕೆಲವು ಸೆಕ್ಷನ್ ಗಳಲ್ಲಿ ಕಲಂ ಮೂಲಕ ಹೆಚ್ಚುವರಿ ರೂಪ ಕೊಡಲಾಗಿದೆ. ಇದಲ್ಲದೆ, 20 ಹೊಸ ಮಾದರಿಯ ಅಪರಾಧಗಳನ್ನು ಪರಿಚಯಿಸಲಾಗಿದೆ. 23 ಅಪರಾಧಗಳಲ್ಲಿ ಕಡ್ಡಾಯ ಕನಿಷ್ಠ ಶಿಕ್ಷೆ ಮತ್ತು ಆರು ಪ್ರಕರಣಗಳಲ್ಲಿ ಸಮುದಾಯ ಸೇವೆಯನ್ನು ದಂಡದ ರೂಪವಾಗಿ ನೀಡಲಾಗಿದೆ. 33 ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನು ಏರಿಸಿದ್ದರೆ, 83 ಪ್ರಕರಣಗಳಲ್ಲಿ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ.

Bill Introduced To Replace IPC, CRPC, Evidence Act In Lok Sabha

ಸಿಆರ್ ಪಿಸಿ, ಸಾಕ್ಷ್ಯ ಅಧಿನಿಯಮದಲ್ಲಿ ಸೆಕ್ಷನ್ ಹೆಚ್ಚಳ  

ಸಿಆರ್ ಪಿಸಿ ಬದಲು ತರುತ್ತಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ ಹಿಂದೆ ಇದ್ದ 484 ಸೆಕ್ಷನ್ ಬದಲು 531ಕ್ಕೆ ಹೆಚ್ಚಳ ಮಾಡಲಾಗಿದೆ. 177 ನಿಬಂಧನೆಗಳ ಜೊತೆಗೆ ಹೆಚ್ಚುವರಿಯಾಗಿ 44 ನಿಬಂಧನೆಗಳನ್ನು ಸೇರಿಸಲಾಗಿದೆ. ಸಿಆರ್ ಪಿಸಿಯಲ್ಲಿದ್ದ 14 ಸೆಕ್ಷನ್ ಗಳನ್ನು ರದ್ದುಪಡಿಸಲಾಗಿದೆ. ಸಾಕ್ಷ್ಯ ಅಧಿನಿಯಮದಲ್ಲಿ ಹಿಂದೆ ಇದ್ದ 157 ವಿಭಾಗದ ಬದಲು 170ಕ್ಕೆ ಏರಿಕೆ ಮಾಡಲಾಗಿದೆ. 24 ಕಡೆಗಳಲ್ಲಿ ತಿದ್ದುಪಡಿ, ಹೊಸದಾಗಿ ಎರಡು ವಿಭಾಗಗಳು, ಆರು ಉಪ ವಿಭಾಗಗಳನ್ನು ಸೇರಿಸಲಾಗಿದೆ. ಹೊಸ ವಿಧೇಯಕದಲ್ಲಿ ಮಹಿಳೆಯರು, ಮಕ್ಕಳು, ನರಹತ್ಯೆ, ದೇಶದ್ರೋಹ ಅಪರಾಧಗಳಲ್ಲಿ ಗರಿಷ್ಠ ಶಿಕ್ಷೆ ನೀಡಿ, ಅಂತಹ ಪ್ರಕರಣ ಮರುಕಳಿಸದಂತೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ.

Punishment of Life imprisonment in India - Jail term for entire life  -iPleaders

ಗ್ಯಾಂಗ್ ರೇಪ್, ಕೊಲೆಗಳಿಗೆ ಜೀವಾವಧಿ, ಗಲ್ಲು ಶಿಕ್ಷೆ

ಅಪ್ರಾಪ್ತ ಬಾಲಕಿಯರ ಅತ್ಯಾಚಾರಕ್ಕೆ ಜೀವಾವಧಿ ಶಿಕ್ಷೆ ಅಥವಾ ಕೊಲೆಗೈದರೆ ಮರಣ ದಂಡನೆ ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಕನಿಷ್ಠ 20 ವರ್ಷಗಳ ಶಿಕ್ಷೆ ಅತವಾ ಜೀವಾವಧಿ ಶಿಕ್ಷೆ ಇರಲಿದೆ. ಸಾಮೂಹಿತ ಅತ್ಯಾಚಾರಗೈದು ಕೊಲೆ ಮಾಡಿದರೆ ಗಲ್ಲು ಶಿಕ್ಷೆ ವಿಧಿಸಲು ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

Court Sentences Man to Life Imprisonment, Who Learnt to Make Fake Currency  Notes From YouTube After Losing Job During COVID - Law Trend

ಖೋಟಾ ನೋಟು, ಭಯೋತ್ಪಾದನೆಗೆ ಗರಿಷ್ಠ ಶಿಕ್ಷೆ  

ಹೊಸ ವಿಧೇಯಕದಲ್ಲಿ ಭಯೋತ್ಪಾದನೆಗೆ ಹೊಸ ರೀತಿಯ ವ್ಯಾಖ್ಯಾನ ಮಾಡಲಾಗಿದ್ದು, ಜೀವಹಾನಿ, ಸಾರ್ವಜನಿಕ ಆಸ್ತಿಹಾನಿ, ಖೋಟಾ ನೋಟು ಚಲಾವಣೆಗೆ, ಆರ್ಥಿಕ ಅಪರಾಧಗಳನ್ನು ಭಯೋತ್ಪಾದನೆ ಕೃತ್ಯದ ವ್ಯಾಪ್ತಿಗೆ ತರಲಾಗಿದೆ. ಭಯೋತ್ಪಾದಕ ಕೃತ್ಯ ಎಸಗಿ ಸಿಕ್ಕಿಬಿದ್ದರೆ ಜಾಮೀನು ಸಿಗಲಾರದು. ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸುವ ಪ್ರಸ್ತಾಪ ಇದೆ. ಹಳೆಯ ದೇಶದ್ರೋಹದ ಯುಎಪಿಎ ಕಾನೂನನ್ನು ತೆಗೆದುಹಾಕಲಾಗಿದ್ದು, ಬದಲಿಗೆ ಸೆಕ್ಷನ್ 152ರ ಅಡಿಯಲ್ಲಿ ದೇಶದ್ರೋಹದ ಅಪರಾಧಗಳಿಗೆ ಹೊಸ ವ್ಯಾಖ್ಯಾನ ನೀಡಲಾಗಿದೆ.

MOB LYCHING :A NEW TREND IN INDIA

ಗುಂಪು ಥಳಿತ, ಕೋಮು ಹತ್ಯೆಗಳಿಗೆ ಶಿಕ್ಷೆ ಹೆಚ್ಚಳ

ಭಯೋತ್ಪಾದನೆ ಜೊತೆಗೆ ಸಂಘಟಿತ ಅಪರಾಧ, ಶಸ್ತ್ರಾಸ್ತ್ರ ಸಾಗಾಟ, ವಿಧ್ವಂಸಕ ಕೃತ್ಯಕ್ಕೆ ಸಂಚು, ಬೆಂಬಲ ನೀಡುವುದು, ದೇಶದ ಭದ್ರತೆ, ಸಾರ್ವಭೌಮತೆಗೆ ಅಪಾಯ ತರಬಲ್ಲ ಅಪರಾಧಗಳನ್ನು ಸಂಘಟಿತ ಅಪರಾಧಗಳ ಪಟ್ಟಿಗೆ ತರಲಾಗಿದ್ದು, ಸೆಕ್ಷನ್ 112ರ ಅಡಿಯಲ್ಲಿ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ನಿಗದಿ ಪಡಿಸಲಾಗಿದೆ. ಗುಂಪು ಥಳಿತ, ಹತ್ಯೆ, ಹಲ್ಲೆ ಪ್ರಕರಣ, ಜನಾಂಗ, ಜಾತಿ, ಸಮುದಾಯ, ಕೋಮು ದ್ವೇಷದ ಕೊಲೆಗಳ ಬಗ್ಗೆ ಹೊಸ ನಿಬಂಧನೆ ಸೇರಿಸಲಾಗಿದೆ. ಗುಂಪು ಹತ್ಯೆಯಿಂದ ಕೊಲೆಯಾದರೆ, ಹಲ್ಲೆಗೀಡಾಗಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ ಸಂತ್ರಸ್ತ ವ್ಯಕ್ತಿಗೆ ದಂಡ ವಿಧಿಸುವುದು ಸೇರಿದಂತೆ ಏಳು ವರ್ಷ ಜೈಲು ಶಿಕ್ಷೆಯಾಗಲಿದೆ.

Delhi: Courting trouble... how endless wait for forensic reports is  delaying justice | Delhi News - Times of India

ಶೀಘ್ರ ನ್ಯಾಯ, ಫಾರೆನ್ಸಿಕ್ ಪರೀಕ್ಷೆ ಕಡ್ಡಾಯ  

ಪ್ರಕರಣ ವರದಿಯಾದ 24 ಗಂಟೆಯಲ್ಲಿ ಎಫ್ಐಆರ್ ಮ್ಯಾಜಿಸ್ಟ್ರೇಟ್ ಗೆ ಸಲ್ಲಿಕೆಯಾಗಬೇಕು. 180 ದಿನಗಳ ಒಳಗೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಯಾವುದೇ ಅಪರಾಧ ಪ್ರಕರಣದಲ್ಲಿ ವಿಧಿ ವಿಜ್ಞಾನ ತಂತ್ರಜ್ಞರ ತಂಡದ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಅಪರಾಧಿ ಮೇಲ್ಮನವಿ ಸಲ್ಲಿಸಲು ಏಳು ದಿನಗಳ ಅವಕಾಶ ಇರುತ್ತದೆ. ಅರ್ಜಿ ವಿಚಾರಣೆಗೆ ಗರಿಷ್ಠ 120 ದಿನ ನಿಗದಿ ಮಾಡಲಾಗಿದೆ. ಘಟನೆ ನಡೆದು 30 ದಿನಗಳ ಒಳಗೆ ಪ್ರಕರಣದ ಎಲ್ಲ ಸಾಕ್ಷ್ಯಾಧಾರಗಳು ಕೋರ್ಟಿಗೆ ಸಲ್ಲಿಸುವುದು ಕಡ್ಡಾಯ ಇರುತ್ತದೆ. ಪ್ರಕರಣದ ವಿಚಾರಣೆಯನ್ನು 45 ದಿನಗಳಲ್ಲಿ ಪೂರ್ತಿಗೊಳಿಸುವಂತೆ ಕಾಲಮಿತಿ ನಿಗದಿ ಮಾಡಲಾಗಿದೆ.

The Lok Sabha today passed three criminal law bills, The Bharatiya Nyaya (Second) Sanhita 2023, The Bharatiya Nagarik Suraksha (Second) Sanhita 2023 and The Bharatiya Sakshhya (Second) Bill 2023, which seek to repeal and replace he Indian Penal Code 1860, Code of Criminal Procedure 1973 and the Indian Evidence Act 1872.