ಬ್ರೇಕಿಂಗ್ ನ್ಯೂಸ್

Pahalgam terror attack, Pakistani terrorists: ಭಯೋತ್ಪಾದಕ ದಾಳಿ ; ಕೆಲವು ದಿನಗಳ ಹಿಂದೆಯೇ ಸಿಕ್ಕಿತ್ತೇ ಗುಪ್ತಚರ ಸುಳಿವು, ಭದ್ರತಾ ನಿರ್ಲಕ್ಷ್ಯದ ಬಗ್ಗೆ ಆರೋಪ, ಹೆಲ್ಮೆಟ್ ಕ್ಯಾಮರಾದಲ್ಲಿ ವಿಡಿಯೋ ಚಿತ್ರೀಕರಿಸಿದ್ದ ಉಗ್ರರು, ಮೂವರ ಗುರುತು ಪತ್ತೆ     |    Bearys Group, Bearys Turning Point mall, Deralakatte, Mangalore: ಎ.26ರಂದು ದೇರಳಕಟ್ಟೆಯಲ್ಲಿ 'ಬ್ಯಾರೀಸ್ ಟರ್ನಿಂಗ್ ಪಾಯಿಂಟ್' ಮಾಲ್ ಲೋಕಾರ್ಪಣೆ ; ಶಾಪಿಂಗ್‌ ಮಾಲ್‌, 4 ಪರದೆಗಳ ಮಲ್ಟಿಫ್ಲೆಕ್ಸ್ ಥಿಯೇಟರ್‌, ಫುಡ್‌ ಕೋರ್ಟ್‌ ಆಕರ್ಷಣೆ, ಆರಂಭಿಕ ದಿನದಂದು ಗೇಮ್ಸ್‌ ಉಚಿತ     |    Cm Siddaramaiah, Pahalgam Attack: ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಸಿದ್ದರಾಮಯ್ಯ ; ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ ವ್ಯವಸ್ಥೆ, ಕೇಂದ್ರ ಗುಪ್ತಚರ ಇಲಾಖೆ ವಿರುದ್ಧ ಸಿದ್ದು ಗರಂ    |   

ಕುಸ್ತಿ ಪಟುಗಳ ಆಕ್ರೋಶ ಬೆನ್ನಲ್ಲೇ ಬೆದರಿದ ಕ್ರೀಡಾ ಸಚಿವಾಲಯ ; ಕುಸ್ತಿ ಒಕ್ಕೂಟದ ಸಮಿತಿಯೇ ಅಮಾನತು, ಹಿಂದಿನ ಅಧ್ಯಕ್ಷರ ಹಿಡಿತದಲ್ಲಿದ್ದೀರಿ ಎಂದು ಟೀಕೆ 

24-12-23 09:07 pm       HK News Desk   ದೇಶ - ವಿದೇಶ

ಮಹತ್ವದ ಬೆಳವಣಿಗೆಯಲ್ಲಿ ಮೊನ್ನೆಯಷ್ಟೇ ಹೊಸದಾಗಿ ಆಯ್ಕೆಯಾದ ಸಂಜಯ್‌ ಸಿಂಗ್ ನೇತೃತ್ವದ ಭಾರತೀಯ ಕುಸ್ತಿ ಫೆಡರೇಶನ್‌ ಸಮಿತಿಯನ್ನು ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿ ಆದೇಶ ಮಾಡಿದೆ.

ನವದೆಹಲಿ, ಡಿ.24: ಮಹತ್ವದ ಬೆಳವಣಿಗೆಯಲ್ಲಿ ಮೊನ್ನೆಯಷ್ಟೇ ಹೊಸದಾಗಿ ಆಯ್ಕೆಯಾದ ಸಂಜಯ್‌ ಸಿಂಗ್ ನೇತೃತ್ವದ ಭಾರತೀಯ ಕುಸ್ತಿ ಫೆಡರೇಶನ್‌ ಸಮಿತಿಯನ್ನು ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿ ಆದೇಶ ಮಾಡಿದೆ.

ಕುಸ್ತಿ ಫೆಡರೇಶನ್ ಹೊಸತಾಗಿದ್ದರೂ ಹಳೆಯ ಅಧ್ಯಕ್ಷರದ್ದೇ ಹಿಡಿತದಲ್ಲಿದೆ, ಕುಸ್ತಿ ಪಂದ್ಯಾಟ ನಡೆಸುವ ವಿಚಾರದಲ್ಲಿ ಒಕ್ಕೂಟದ ನಿಯಮವನ್ನು ಉಲ್ಲಂಘಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಅಲ್ಲದೆ, ಅದನ್ನು ಹಿಂದಿನ ಅಧ್ಯಕ್ಷರ ಊರಲ್ಲೇ ತರಾತುರಿಯಲ್ಲಿ ಆಯೋಜಿಸಿರುವುದು ಆಕ್ಷೇಪಾರ್ಹ ಎಂದು ಕ್ರೀಡಾ ಸಚಿವಾಲಯ ನೂತನ ಸಮಿತಿಯನ್ನೇ ಅಮಾನತುಗೊಳಿಸಿದ್ದಾಗಿ ಹೇಳಿಕೊಂಡಿದೆ. ಆದರೆ ಕುಸ್ತಿ ಒಕ್ಕೂಟಕ್ಕೆ ಹೊಸತಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸಂಜಯ್ ಸಿಂಗ್ ಬಗ್ಗೆ ಭಾರೀ ಟೀಕೆ ಎದುರಾಗಿತ್ತು. ಕುಸ್ತಿ ಪಟು ಸಾಕ್ಷಿ ಮಲಿಕ್ ಕ್ರೀಡೆಯನ್ನೇ ತೊರೆಯುವ ಮಾತನ್ನಾಡಿದ್ದರೆ, ಬಜರಂಗ್ ಪುನಿಯಾ, ವೀರೇಂದ್ರ ಸಿಂಗ್ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಎಚ್ಚತ್ತುಕೊಂಡ ಕೇಂದ್ರ ಸರ್ಕಾರ, ಆರೋಪ ಹೊತ್ತ ಬ್ರಿಜ್ ಭೂಷಣ್ ಸಿಂಗ್ ಆಪ್ತರಿದ್ದ ಕುಸ್ತಿ ಒಕ್ಕೂಟದ ಸಮಿತಿಯನ್ನೇ ಅಮಾನತು ಗೊಳಿಸಿದೆ. 

ಕುಸ್ತಿ ಫೆಡರೇಶನ್‌ ಅಧ್ಯಕ್ಷರಾಗಿ  ಸಂಜಯ್ ಕುಮಾರ್ ಸಿಂಗ್ ಆಯ್ಕೆಯಾದ ಬೆನ್ನಲ್ಲೇ 15 ಮತ್ತು 20 ವರ್ಷದ ಒಳಗಿನ ರಾಷ್ಟ್ರೀಯ ಕುಸ್ತಿ ಪಂದ್ಯಾಟವನ್ನು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನಂದಿನಿ ನಗರದಲ್ಲಿ ನಡೆಸುವುದಾಗಿ ಘೋಷಿಸಿದ್ದರು. ರಾಷ್ಟ್ರೀಯ ಕುಸ್ತಿ ಪಟುಗಳಿಗೆ ಸೂಚನೆ ನೀಡದೆ ಮತ್ತು ಒಕ್ಕೂಟದ ಸಂವಿಧಾನದ ನಿಬಂಧನೆಗಳನ್ನು ಅನುಸರಿಸದೆ ಈ ಘೋಷಣೆಯನ್ನು ಮಾಡಲಾಗಿದೆ ಎಂದು ಸಚಿವಾಲಯ ಹೇಳಿಕೊಂಡಿದೆ. ಗೊಂಡಾ ಜಿಲ್ಲೆ ಹಿಂದಿನ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಪ್ರತಿನಿಧಿಸುವ ಕ್ಷೇತ್ರವಾಗಿದ್ದು ಇದಕ್ಕಾಗಿ ತೀವ್ರ ವಿರೋಧ ವ್ಯಕ್ತವಾಗಿತ್ತು.

The Sports Ministry suspended the Wrestling Federation of India (WFI) on Sunday until further notice following an abrupt announcement of the national championships by the newly-elected body.