ಬ್ರೇಕಿಂಗ್ ನ್ಯೂಸ್
12-01-24 08:31 pm HK News Desk ದೇಶ - ವಿದೇಶ
ಲೈಮಾ, ಜ 11: ವಯಸ್ಕರ ಚಲನಚಿತ್ರ ಉದ್ಯಮದಲ್ಲಿ ತಾನು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದ ಪೆರುವಿನ ನೀಲಿ ಚಿತ್ರತಾರೆ ಥೈನಾ ಫೀಲ್ಡ್ಸ್(24) ಅದಾದ ಒಂದೇ ತಿಂಗಳಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ
ಆಕೆಯ ಆಪ್ತ ಸ್ನೇಹಿತ ಅಲೆಜಾಂಡ್ರಾ ಸ್ವೀಟ್ ಅವರು ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನನ್ನ ಸ್ನೇಹಿತೆಯ ಸಾವಿನಿಂದ ದುಃಖಿತನಾಗಿದ್ದೇನೆ, ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಆಕೆಯನ್ನು ಪ್ರೀತಿಸುವವರೆಲ್ಲರೂ ಅವಳ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಎಂದು ಹೇಳಿದ್ದಾರೆ.
ಫೀಲ್ಡ್ ನೊಂದಿಗೆ ಕೆಲಸ ಮಾಡಿದ ಉತ್ಪಾದನಾ ಕಂಪನಿಗಳಲ್ಲಿ ಒಂದಾದ ಮಿಲ್ಕಿ ಪೆರು, ಥೈನಾ ಫೀಲ್ಡ್ಸ್ಗೆ ಸಂತಾಪ ಸೂಚಿಸಿದೆ. ವಯಸ್ಕ ಉದ್ಯಮದಲ್ಲಿ ತಾನು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಥೈನಾ ಫೀಲ್ಡ್ಸ್ ಇತ್ತೀಚೆಗೆ ಹೇಳಿಕೊಂಡಿದ್ದಳು. ಅಡಲ್ಟ್ಸ್ ಕಂಟೆಂಟ್ನಲ್ಲಿ ನಟಿಸಲು ಪ್ರಾರಂಭಿಸಿದ ನಂತರ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೆ. ತನ್ನನ್ನು ನೇಮಿಸಿಕೊಂಡವರು ತಮಗೆ ಬೇಕಾದುದ್ದನ್ನು ಮಾಡಬೇಕು ಎಂದು ಬಯಸುತ್ತಾರೆ. ಮಹಿಳೆಯರು ವಯಸ್ಕರ ಚಿತ್ರಗಳಲ್ಲಿ ನಟಿಸುವುದು ತುಂಬಾ ಕಷ್ಟಕರವಾಗಿತ್ತು. ಈ ಆರೋಪಗಳನ್ನು ಮಾಡಿದ ಕೆಲ ತಿಂಗಳ ನಂತರ, ಥೈನಾ ಫೀಲ್ಡ್ಸ್ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿನ ಕಾರಣ ಇನ್ನಷ್ಟೇ ಹೊರಬರಬೇಕಿದೆ.
ಸದ್ಯ ಬೆಳಕಿಗೆ ಬಂದಿರುವ ಆಘಾತಕಾರಿ ಘಟನೆಯಲ್ಲಿ, ಪೆರುವಿಯನ್ ವಯಸ್ಕ ಚಲನಚಿತ್ರ ತಾರೆ- ಥೈನಾ ಫೀಲ್ಡ್ ಎಂಬ ಹೆಸರಿನಿಂದ ಕೆಲಸ ಮಾಡುತ್ತಿದ್ದು, ನಿಗೂಢ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ 24 ವರ್ಷದ ನಟಿಯ ದೇಹವು ಟ್ರುಜಿಲ್ಲೊದಲ್ಲಿನ ಅವರ ಮನೆಯಲ್ಲಿ ಪತ್ತೆಯಾಗಿದೆ. ಲೈಂಗಿಕ ಉದ್ಯಮದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಆರೋಪ ಮಾಡಿದ ಒಂದು ತಿಂಗಳ ನಂತರ ಈ ಘಟನೆ ವರದಿಯಾಗಿದೆ. ಆಕೆಯ ಉದ್ಯಮದಲ್ಲಿ ತೊಡಗಿದ್ದ ಮಿಲ್ಕಿ ಪೆರು ಕಂಪನಿಯೂ ನಟಿಯ ಸಾವಿಗೆ ಸಂತಾಪ ಸೂಚಿಸಿದೆ.
A Peruvian adult film star named Thaina Fields was found dead in her apartment. Her body was recovered from her home in Trujillo on Saturday The 24-year-old’s death triggered rumours of possible foul play as months ago Fields had opened up about the abuse she faced in the industry.
10-11-25 01:23 pm
Bangalore Correspondent
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm