ಬ್ರೇಕಿಂಗ್ ನ್ಯೂಸ್
28-03-24 10:51 pm HK News Desk ದೇಶ - ವಿದೇಶ
ಚೆನ್ನೈ , ಮಾ 28: ತಮಿಳುನಾಡಿನ ತಿರುವಳ್ಳೂರ್ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ನಾಮಪತ್ರ ಸಲ್ಲಿಸಿದ್ದಾರೆ.
2009ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ 45 ವರ್ಷದ ಸೆಂಥಿಲ್ ಅವರು, ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ 2019ರಲ್ಲಿ ರಾಜೀನಾಮೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಅವರು 2020ರ ನವೆಂಬರ್‌ನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಶಶಿಕಾಂತ್ ಸೆಂಥಿಲ್ ಅವರು ತಮ್ಮ ನಾಮಪತ್ರದ ಜತೆಗೆ ಚುನಾವಣಾ ಆಯೋಗಕ್ಕೆ ಆಸ್ತಿ ವಿವರಗಳ ಮಾಹಿತಿ ನೀಡಿದ್ದಾರೆ. ಸೆಂಥಿಲ್ ನೀಡಿರುವ ವಿವರದ ಪ್ರಕಾರ, ಅವರ ಬಳಿ ಒಟ್ಟು ಕೇವಲ 72.72 ಲಕ್ಷ ರೂ ಮೌಲ್ಯದ ಆಸ್ತಿ ಇದೆ. ಇನ್ನು ಡಿಸೈನ್ ಎಂಜಿನಿಯರ್ ಆಗಿರುವ ಅವರ ಪತ್ನಿ ಸುಜಾತಾ ಅವರ ಬಳಿ 1.48 ಕೋಟಿ ರೂ ಮೊತ್ತದ ಆಸ್ತಿ ಇದೆ.
ಶಶಿಕಾಂತ್ ಸೆಂಥಿಲ್ ಅವರು ತಮ್ಮ ಹತ್ತಿರ 10 ಸಾವಿರ ರೂ ನಗದು, 1.50 ಲಕ್ಷ ರೂ ಮೌಲ್ಯದ ರಾಯಲ್ ಎನ್‌ಫೀಲ್ಡ್ ಬೈಕ್ ಇದೆ ಎಂದು ತಿಳಿಸಿದ್ದಾರೆ. ಇನ್ನು ರಾಯಚೂರು ಮತ್ತು ಚೆನ್ನೈನಲ್ಲಿನ ಬ್ಯಾಂಕ್ ಖಾತೆಗಳಲ್ಲಿ ಸುಮಾರು 1.10 ಲಕ್ಷ ರೂ ಉಳಿತಾಯ ಸೇರಿದಂತೆ 2,17,713 (2.17 ಲಕ್ಷ) ರೂ ಚರ ಆಸ್ತಿ ಇದೆ.
ಸೆಂಥಿಲ್ ಅವರ ಬಳಿ ಕೃಷಿ ಭೂಮಿ ಇಲ್ಲ. ಅವರು ವಿಮೆ, ಒಡವೆಯಂತಹ ಬೆಲೆಬಾಳುವ ವಸ್ತುಗಳು, ಬಾಂಡ್ ಅಥವಾ ಷೇರುಗಳನ್ನು ಹೊಂದಿಲ್ಲ. ಆದರೆ 17.80 ಲಕ್ಷ ರೂ ಮೊತ್ತದ 2,400 ಚದರ ಅಡಿ ಕೃಷಿಯೇತರ ಜಮೀನನ್ನು 2007ರಲ್ಲಿ ಚೆನ್ನೈನಲ್ಲಿ ಖರೀದಿಸಿದ್ದು, ಪ್ರಸ್ತುತ ಅದರ ಮಾರುಕಟ್ಟೆ ಮೌಲ್ಯ 70 ಲಕ್ಷ ರೂ ಇದೆ ಎಂದು ತಿಳಿಸಿದ್ದಾರೆ.
ಸೆಂಥಿಲ್ ಅವರ ಪತ್ನಿ ಎ ಸುಜಾತಾ ಅವರ ಬಳಿ 10 ಸಾವಿರ ರೂ ನಗದು, ಉಳಿತಾಯ ಖಾತೆಯ ಹಣ, ವಿಮೆ, ಮಾರುತಿ ಆಲ್ಟೋ ಕಾರು, 250 ಗ್ರಾಂ ಚಿನ್ನ ಸೇರಿದಂತೆ 66.34 ಲಕ್ಷ ರೂ ಮೊತ್ತದ ಚರ ಆಸ್ತಿ ಘೋಷಿಸಿದ್ದಾರೆ. ಇನ್ನು 7 ಲಕ್ಷ ರೂ ಹಾಗೂ 5 ಲಕ್ಷ ರೂ ಮೌಲ್ಯದ ಎರಡು ಕೃಷಿಯೇತರ ಭೂಮಿ ಹೊಂದಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ 46.20 ಲಕ್ಷ ರೂ ಮೊತ್ತಕ್ಕೆ ಖರೀದಿಸಿದ, ಈಗ ಅಂದಾಜು 70 ಲಕ್ಷ ರೂ ಬೆಲೆಬಾಳುವ ಮನೆ ಇದೆ. ಅವರ ಬಳಿ ಇರುವ ಒಟ್ಟು ಸ್ಥಿರ ಆಸ್ತಿ 82 ಲಕ್ಷ ರೂ. ಪತಿ ಮತ್ತು ಪತ್ನಿ ಇಬ್ಬರೂ ಯಾವುದೇ ಸಾಲು ಹೊಂದಿಲ್ಲ
Former Karnataka IAS officer Sasikanth Senthil, who is contesting as a Congress candidate from Tiruvallur Lok Sabha constituency in Tamil Nadu, has filed his nomination papers.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 08:53 pm
Mangalore Correspondent
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm