ಬ್ರೇಕಿಂಗ್ ನ್ಯೂಸ್
31-03-24 02:06 pm HK NEWS ದೇಶ - ವಿದೇಶ
ಬೆಂಗಳೂರು, ಮಾ.31: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಅವರನ್ನು ಗೆಲ್ಲಿಸಲು ಗೃಹ ಸಚಿವ ಅಮಿತ್ ಶಾ ಖುದ್ದು ಅಖಾಡಕ್ಕಿಳಿಯುತ್ತಿದ್ದಾರೆ. ಡಿ.ಕೆ. ಬ್ರದರ್ಸ್‌ಗೆ ಠಕ್ಕರ್ ನೀಡಲು ಬಿಜೆಪಿ ರಣತಂತ್ರ ಹಣೆದಿದ್ದು, ಮೈತ್ರಿ ನಾಯಕರು ಬೃಹತ್ ರೋಡ್ ಶೋ ಮೂಲಕ ಶಕ್ತಿಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ.
ಡಿಸಿಎಂ ಡಿಕೆಶಿ ಸೋದರ ಡಿಕೆ ಸುರೇಶ್ ಸಂಸದರಾಗಿರುವ ಬೆಂಗಳೂರು ಗ್ರಾಮಾಂತರ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಾಡು ಆಗಿದೆ. ಮೊನ್ನೆಯಷ್ಟೇ ನಾಮಪತ್ರ ಸಲ್ಲಿಕೆಗೆ ಬೃಹತ್ ರ‍್ಯಾಲಿ ಮಾಡಿ ಶಕ್ತಿ ಪ್ರದರ್ಶನ ಮಾಡಿದ್ದ ಕಾಂಗ್ರೆಸ್‌ಗೆ ಠಕ್ಕರ್ ಕೊಡಲು ಮೈತ್ರಿ ಪಕ್ಷ ಸಿದ್ಧತೆ ಆರಂಭಿಸಿದೆ. ಡಿಕೆಶಿ ಅಖಾಡಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಎಂಟ್ರಿ ನೀಡುತ್ತಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ.
ಏಪ್ರಿಲ್ 1ರ ರಾತ್ರಿ ಅಮಿತ್ ಶಾ ಬೆಂಗಳೂರಿಗೆ ಅಗಮಿಸಲಿದ್ದಾರೆ. ಏ.2 ರಂದು ಬೆಳಗ್ಗೆ 9 ಗಂಟೆಗೆ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ, ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಒಳಗೊಂಡು ಬೃಹತ್ ಸಮಾವೇಶ ಮಾಡಲಿದ್ದಾರೆ. ಮಧ್ಯಾಹ್ನ 2 ರಿಂದ 4 ಗಂಟೆಯ ವರೆಗೂ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರಮುಖರ ಸಭೆ ನಡೆಸುವ ಮೂಲಕ ಚುನಾವಣೆ ಗೆಲುವಿಗೆ ರಣತಂತ್ರ ಹೂಡಲಿದ್ದಾರೆ.
ಬೆಂಗಳೂರಿನಲ್ಲಿ ಸಮಾವೇಶದ ಬಳಿಕ ಸಂಜೆ 6 ಗಂಟೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿ ಬಹಿರಂಗ ಸಮಾವೇಶ ನಡೆಸಲಿದ್ದಾರೆ. ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಪರವಾಗಿ ಮತಯಾಚನೆ ಮಾಡಲಿರುವ ಅಮಿತ್ ಶಾಗೆ ಹೆಚ್‌ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ, ವಿಜಯೇಂದ್ರ, ಅಶೋಕ್ ಸೇರಿದಂತೆ ಬಿಜೆಪಿ, ಜೆಡಿಎಸ್ ಪಕ್ಷಗಳ ರಾಜ್ಯ ನಾಯಕರು ಸಾಥ್ ನೀಡಲಿದ್ದಾರೆ.
Union Home Minister Amit Shah will launch his Lok Sabha poll campaign in Karnataka from April 2, BJP state general secretary V Sunil Kumar said on Saturday. Shah will hold a meeting with the Bharatiya Janata Party and its ally Janata Dal (Secular) leaders at 9 am on April 2.
31-01-25 10:10 pm
HK News Desk
Sriramulu, BJP, B. Y. Vijayendra: ವಿಜಯೇಂದ್ರ ಸ...
31-01-25 08:03 pm
SC directive for patients, Karnataka Health D...
31-01-25 06:07 pm
Cheque bounce, Snehamahi Krishna: ಮುಡಾ ಹಗರಣ ಹ...
31-01-25 02:02 pm
SR Vishwanath, Sudhakar, Yatnal; ನಿಮ್ಮಂತವರು ಪ...
30-01-25 11:09 pm
31-01-25 09:10 pm
HK News Desk
ಅಮೆರಿಕದಲ್ಲಿ ವಿಮಾನ ದುರಂತ ; ಪ್ರಯಾಣಿಕ ವಿಮಾನಕ್ಕೆ...
31-01-25 12:30 pm
1954ರ ಕುಂಭ ಮೇಳದಲ್ಲಿ ಪ್ರಧಾನಿ ನೆಹರು ಬಂದಿದ್ದಾಗಲೇ...
29-01-25 07:55 pm
Maha Kumbh stampede: ಕುಂಭಮೇಳದಲ್ಲಿ ಕಾಲ್ತುಳಿತ ;...
29-01-25 10:07 am
ಟೊರೇಸ್ ನಕಲಿ ಸ್ಕೀಂ ಹೆಸರಲ್ಲಿ ನೂರಾರು ಕೋಟಿ ವಂಚನೆ...
28-01-25 08:24 pm
31-01-25 11:05 pm
Mangalore Correspondent
Mangalore Prasad attavar, RTI Snehamayi Krish...
31-01-25 10:49 pm
Ullal Panchyath, Mangalore; ಉಳ್ಳಾಲ ನಗರಸಭೆ ಸೀಲ...
31-01-25 09:49 pm
Prasad Attavar, RTI Snehamahi Krishna, Muda c...
31-01-25 03:57 pm
Mangalore Traffic, Thokottu, Kallapu: ತೊಕ್ಕೊಟ...
30-01-25 10:53 pm
31-01-25 10:22 am
HK News Desk
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am
Ankola, Mangalore Car, Cash, Crime: ಅಂಕೋಲಾದಲ್...
29-01-25 04:12 pm
Mangalore News, Crime, Court: 14 ವರ್ಷದ ಬಾಲಕಿಯ...
28-01-25 05:17 pm
Hubballi Murder, Crime: ಹುಬ್ಬಳ್ಳಿಯಲ್ಲಿ ಯುವಕನ...
28-01-25 11:03 am