ಬ್ರೇಕಿಂಗ್ ನ್ಯೂಸ್
15-04-24 10:21 pm HK News Desk ದೇಶ - ವಿದೇಶ
ಸಿಡ್ನಿ, ಎ.15: ಆಸ್ಟ್ರೇಲಿಯಾದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಸಿಡ್ನಿಯ ಚರ್ಚ್ ಒಂದರಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ಬಿಷಪ್ ಮೇಲೆ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನ್ಯೂ ಸೌತ್ ವೇಲ್ಸ್ ನಲ್ಲಿ ಬಿಷಪರೂ ಆಗಿರುವ ಪಾದ್ರಿ ಇಮ್ಯಾನುವೆಲ್ ಚರ್ಚ್ ನಲ್ಲಿ ಪ್ರಾರ್ಥನೆ ನಡೆಸುತ್ತಿದ್ದಾಗಲೇ ಪುಸ್ತಕ ಹಿಡಿದು ಓದುತ್ತಿರುವ ರೀತಿ ಮುಂದಕ್ಕೆ ಬಂದ ವ್ಯಕ್ತಿಯೊಬ್ಬ ನೇರವಾಗಿ ತನ್ನ ಕೈಲಿದ್ದ ಚೂರಿಯಿಂದ ತಿವಿಯಲು ಯತ್ನಿಸಿದ್ದಾನೆ. ಕೂಡಲೇ ಅಲ್ಲಿದ್ದವರು ಆತನನ್ನು ತಡೆದಿದ್ದು, ಇತರರ ಮೇಲೂ ಹಲ್ಲೆ ನಡೆಸಿದ್ದಾನೆ. ಬಳಿಕ ಪೊಲೀಸರು ಆಗಂತುಕ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪಾದ್ರಿ ಮತ್ತು ಇತರ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದ್ದು ಅಪಾಯದಿಂದ ಪಾರಾಗಿದ್ದಾರೆ.

ಪಶ್ಚಿಮ ಸಿಡ್ನಿ ನಗರದ ವಾಕೇಲೆ ಎಂಬಲ್ಲಿನ ಕ್ರಿಸ್ತ್ ದಿ ಗುಡ್ ಶೆಫರ್ಡ್ ಎಂಬ ಚರ್ಚ್ ನಲ್ಲಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪ್ರತಿ ಸೋಮವಾರ ಈ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತಿತ್ತು. ಪ್ರಾರ್ಥನೆ ಸಂದರ್ಭದಲ್ಲಿಯೇ ದಾಳಿಯಾಗಿದ್ದು, ಸೇರಿದ್ದ ಜನರು ಭೀತಿಯಿಂದ ಚೆಲ್ಲಾಪಿಲ್ಲಿಯಾಗಿದ್ದಾರೆ. ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು ಯಾಕಾಗಿ ಈ ಕೃತ್ಯ ನಡೆಸಿದ್ದಾನೆ ಎನ್ನುವ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ನ್ಯೂ ಸೌತ್ ವೇಲ್ಸ್ ನಲ್ಲಿ ಸ್ಥಳೀಯವಾಗಿ ಜನಪ್ರಿಯರಾಗಿದ್ದ ಬಿಷಪ್ ಮಾರ್ ಮಾರಿ ಇಮ್ಯಾನುವೆಲ್ ಇರಿತಕ್ಕೊಳಗಾದವರು. ಆಗಂತುಕ ಚೂರಿಯಿಂದ ಇರಿಯಲು ಬರುತ್ತಿದ್ದಂತೆ ಬಿಷಪ್ ತನ್ನ ಕೈಯನ್ನು ಅಡ್ಡ ಹಿಡಿದು ತಪ್ಪಿಸಿಕೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಕೈಗೆ ಸಿಕ್ಕ ವಸ್ತುಗಳನ್ನು ಆತನ ಮೇಲೆ ಎಸೆದು ಬಿಷಪ್ ಮೇಲಿನ ದಾಳಿಯನ್ನು ತಪ್ಪಿಸಿದ್ದಾರೆ. ಕೆಲವರು ಕಾಲಿನಲ್ಲಿ ಒದ್ದು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅವರಿಗೂ ಚೂರಿಯಿಂದ ಗಾಯಗಳಾಗಿವೆ ಎಂದು ಪೊಲೀಸರು ಸ್ಥಳೀಯ ಸಿಡ್ನಿ ಹೆರಾಲ್ಡ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ, ಶನಿವಾರ ರಾತ್ರಿ ಸಿಡ್ನಿಯ ವೆಸ್ಟ್ ಫೀಲ್ಡ್ ಬೋಂದಿ ಜಂಕ್ಷನ್ನಲ್ಲಿ ಮಾಲ್ ಒಂದಕ್ಕೆ ನುಗ್ಗಿದ್ದ ವ್ಯಕ್ತಿಯೊಬ್ಬ ಕೈಯಲ್ಲಿದ್ದ ಚೂರಿಯಿಂದ ಇರಿದು ಹಲವರನ್ನು ಸಾಯಿಸಿದ್ದ. 9 ತಿಂಗಳ ಮಗು ಸೇರಿ ಆರು ಮಂದಿ ಘಟನೆಯಲ್ಲಿ ಸಾವು ಕಂಡಿದ್ದರು. ಈ ಪೈಕಿ ಐವರು ಮಹಿಳೆಯರೇ ಆಗಿದ್ದರು. 12ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದರು. ಜೋಯೆಲ್ ಕೌಚಿ ಎಂಬ ಹೆಸರಿನ 40 ವರ್ಷದ ವ್ಯಕ್ತಿ ಈ ದಾಳಿ ನಡೆಸಿದ್ದು, ಮಹಿಳೆಯರ ದ್ವೇಷದಿಂದ ಚೂರಿಯಿಂದ ದಾಳಿ ನಡೆಸಿದ್ದ ಎಂದು ಆತನನ್ನು ಬಂಧಿಸಿರುವ ಪೊಲೀಸರು ತಿಳಿಸಿದ್ದರು. ಆ ಘಟನೆಯಾಗಿ ಮೂರೇ ದಿನದಲ್ಲಿ ಚರ್ಚ್ ನಲ್ಲಿ ಬಿಷಪ್ ಮೇಲೆ ದಾಳಿಯಾಗಿದೆ.
!⚠️ Graphic warning ⚠️
— Drea Humphrey - Prepping and Politics (@DreaHumphrey) April 15, 2024
Sydney Australia’s Bishop Mar Mari Emmanuel, was one of 4 allegedly stabbed during an attack at Christ The Good Shepherd Church 😔.
The Bishop is reportedly in stable condition.https://t.co/Gi9Wj4LxWc pic.twitter.com/zYP6Wq65NS
In yet another tragic incident in Sydney on Monday, a bishop and multiple worshippers were reportedly attacked during a Monday evening sermon at the Good Shepherd Church in Sydney's suburbian city of Wakeley. The bishop was stabbed by the assailant multiple times.
19-02-26 09:29 pm
mangalore
ಪರಮೇಶ್ವರ್ ಅಥವಾ ಡಿಕೆಶಿ ಯಾರಾಗ್ತಾರೆ ಮುಂದಿನ ಮುಖ್ಯ...
19-02-26 03:11 pm
ವಿಧಾನಸೌಧ ಒಳಗಡೆ ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ ; ಭದ್...
18-02-26 09:02 pm
ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ...
18-02-26 06:03 pm
ಊಟಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ ; ಬೈಕ್...
17-02-26 10:33 pm
19-02-26 11:04 pm
mangalore
'ಉಚಿತ' ಕೊಡುಗೆಗಳು ದೇಶದ ಅಭಿವೃದ್ಧಿಗೆ ಅಡ್ಡಿ ; ಆದಾ...
19-02-26 10:10 pm
ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಶೋಚನೀಯ ಸ್ಥಿತಿ ; ಕ...
17-02-26 08:50 pm
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
19-02-26 10:37 pm
mangalore
2013ರಲ್ಲಿ ಶಿಲಾನ್ಯಾಸಗೊಂಡಿದ್ದ ಅಬ್ಬಕ್ಕ ಭವನ ನಿರ್ಮ...
19-02-26 09:50 pm
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹ, ಹೋರಾಟ...
19-02-26 06:08 pm
ನೇತ್ರಾವತಿ ಸೇತುವೆ ಆವರಣ ಗೋಡೆಗೆ ಅಪ್ಪಳಿಸಿದ ಮಿನಿ ಟ...
19-02-26 05:38 pm
ಬೆಳ್ತಂಗಡಿ : ಮಕ್ಕಳು ಕ್ರಿಕೆಟ್ ಆಡುತ್ತಿದ್ದಾಗ ನಿಗೂ...
19-02-26 04:09 pm
20-02-26 11:31 am
Mangalore Correspondent
Mangalore CCB Police, Rowdy Safwan Hussain: ದ...
18-02-26 09:16 pm
Mangalore Shivabagh Suicide: ಕೈ ಕೊಯ್ದುಕೊಂಡು ರ...
18-02-26 07:42 pm
Hassan Murder: ಆಸ್ತಿ ವಿಚಾರಕ್ಕೆ ತಕರಾರು, ಕೋರ್ಟ್...
18-02-26 07:10 pm
ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆ, ಹಡಗುಗಳ ರಹಸ್ಯ ಮಾ...
18-02-26 01:52 pm