ಬ್ರೇಕಿಂಗ್ ನ್ಯೂಸ್
06-05-24 09:31 pm HK News Desk ದೇಶ - ವಿದೇಶ
ತಿರುವನಂತಪುರಂ, ಮೇ.6: ಕನ್ಯಾಕುಮಾರಿ ಜಿಲ್ಲೆಯ ವೇಮೂರ್ ಬೀಚ್ ನಲ್ಲಿ ಈಜಲು ಹೋಗಿದ್ದ ಐವರು ಮೆಡಿಕಲ್ ವಿದ್ಯಾರ್ಥಿಗಳು ದುರಂತ ಸಾವಿಗೀಡಾಗಿದ್ದಾರೆ. ವಿದ್ಯಾರ್ಥಿಗಳು ತಮಿಳುನಾಡಿನ ತಿರುಚಿರಾಪಳ್ಳಿಯವರಾಗಿದ್ದು, ಗೆಳೆಯನ ಮದುವೆಗಾಗಿ ಕನ್ಯಾಕುಮಾರಿಗೆ ತೆರಳಿದ್ದರು.
ಸೋಮವಾರ ಮಧ್ಯಾಹ್ನ ಕನ್ಯಾಕುಮಾರಿ ಬಳಿಯ ವೇಮೂರ್ ಬೀಚ್ ನಲ್ಲಿ ಎಂಟು ಮಂದಿ ಈಜಾಟಕ್ಕಿಳಿದಿದ್ದಾಗ ದುರಂತ ಸಂಭವಿಸಿದೆ. ಮೂವರನ್ನು ರಕ್ಷಣೆ ಮಾಡಲಾಗಿದ್ದು, ಒಬ್ಬನ ಸ್ಥಿತಿ ಗಂಭೀರ ಇದೆಯೆಂದು ಮಾಹಿತಿ ಇದೆ. ಕನ್ಯಾಕುಮಾರಿ ನಿವಾಸಿ ಸರ್ವದರ್ಶಿತ್(23), ದಿಂಡಿಗಲ್ ನಿವಾಸಿ ಪ್ರವೀಣ್ ಸ್ಯಾಮ್(23), ನೆಯ್ ವೇಲಿ ನಿವಾಸಿ ಗಾಯತ್ರಿ(25), ಆಂಧ್ರಪ್ರದೇಶ ಮೂಲದ ವೆಂಕಟೇಶ್ (24), ತಂಜಾವೂರು ನಿವಾಸಿ ಚಕ್ರವರ್ತಿ (23) ಮೃತರು.
ಭಾನುವಾರ ಇದೇ ವೇಮೂರು ಬೀಚ್ ನಲ್ಲಿ ಮೂವರು ನೀರುಪಾಲಾಗಿದ್ದರು. ಸಮುದ್ರದ ಅಲೆಗಳು ರಕ್ಕಸ ಗಾತ್ರ ತಾಳಿದ್ದರಿಂದ ಜನರ ಪ್ರವೇಶಕ್ಕೆ ಸೋಮವಾರ ನಿರ್ಬಂಧ ಹೇರಲಾಗಿತ್ತು. ಹಾಗಿದ್ದರೂ, ವೈದ್ಯಕೀಯ ವಿದ್ಯಾರ್ಥಿಗಳು ನೀರಾಟಕ್ಕಿಳಿದಿದ್ದು ಸ್ಥಳೀಯ ಮೀನುಗಾರರ ಎಚ್ಚರಿಕೆ ಲೆಕ್ಕಿಸದೆ ಸಾವು ಕಂಡಿದ್ದಾರೆ. ಮೂರು ದಿನಗಳಲ್ಲಿ ಎಂಟು ಮಂದಿ ಈ ಬೀಚ್ ನಲ್ಲಿ ಸಾವು ಕಂಡಂತಾಗಿದೆ. ಐವರು ವಿದ್ಯಾರ್ಥಿಗಳು ಕೂಡ ತಿರುಚ್ಚಿಯ ಎಸ್ ಆರ್ ಎಂ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವೈದ್ಯಕೀಯ ಕೋರ್ಸ್ ಓದುತ್ತಿದ್ದರು. ಕೆಲವೇ ವಾರಗಳಲ್ಲಿ ಮೆಡಿಕಲ್ ಮುಗಿಸಿ ಹೊರಬರುತ್ತಿದ್ದರು.
ಸೋಮವಾರ ಬೆಳಗ್ಗೆ ಅಲ್ಲಿಯೇ ಸಮೀಪದ ತಿರಪ್ಪರಪ್ಪು ಫಾಲ್ಸ್ ಗೆ ಇವರು ತೆರಳಿದ್ದರು. ಅಲ್ಲಿ ಸಾಕಷ್ಟು ನೀರಿಲ್ಲವೆಂದು ವೇಮೂರ್ ಬೀಚ್ ಗೆ ಬಂದಿದ್ದರು. ಆದರೆ ಮಧ್ಯಾಹ್ನ ಹೊತ್ತಿಗೆ ಹಠಾತ್ತಾಗಿ ಬಂದ ಬೃಹತ್ತಾಕಾರದ ಅಲೆಯೊಂದು ಇವರನ್ನು ಎಳೆದೊಯ್ದಿತ್ತು. ಕೂಡಲೇ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಹವಾಮಾನ ಇಲಾಖೆ, ಅರಬ್ಬೀ ಸಮುದ್ರದಲ್ಲಿ ಭಾರೀ ಅಲೆಗಳು ಏಳುವ ಮುನ್ಸೂಚನೆ ನೀಡಿದ್ದು, ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.
Five students of a private medical college in Tamil Nadu’s Trichy, who went to Nagercoil to attend a wedding, drowned in the sea off the Rajakkamangalam Lemur Beach on Monday morning.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm