Paris 2024 Olympics: ಭೂಲೋಕದ ಸ್ವರ್ಗ ಪ್ಯಾರಿಸ್‌ನಲ್ಲಿ 33ನೇ ಒಲಿಂಪಿಕ್ಸ್‌ ಕ್ರೀಡಾಹಬ್ಬ, ತಿಳಿನೀಲ ಬಣ್ಣದ ನದಿ ನೀರಿನಲ್ಲಿ ಅದ್ಭುತ ಪಥಸಂಚಲನ, 206 ದೇಶಗಳ ಕ್ರೀಡಾಪಟುಗಳು, 110 ದೇಶಗಳ ಪ್ರತಿನಿಧಿಗಳು, 3.26 ಲಕ್ಷ ಪ್ರೇಕ್ಷಕರು ಸಾಕ್ಷಿ ! 

27-07-24 08:31 pm       HK News Desk   ದೇಶ - ವಿದೇಶ

ನದಿ ನೀರಿನ ಮೇಲೆ ಕ್ರೀಡಾಪಟುಗಳ ಪಥಸಂಚಲನ, ನಭೂತೋ ಎನ್ನುವ ರೀತಿಯ ಅದ್ದೂರಿ ಸಮಾರಂಭದೊಂದಿಗೆ 33ನೇ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಫ್ರಾನ್ಸ್ ದೇಶದ ಪ್ಯಾರಿಸ್‌ನಲ್ಲಿ ಚಾಲನೆ ನೀಡಲಾಯಿತು.

ಪ್ಯಾರಿಸ್‌, ಜುಲೈ.27: ನದಿ ನೀರಿನ ಮೇಲೆ ಕ್ರೀಡಾಪಟುಗಳ ಪಥಸಂಚಲನ, ನಭೂತೋ ಎನ್ನುವ ರೀತಿಯ ಅದ್ದೂರಿ ಸಮಾರಂಭದೊಂದಿಗೆ 33ನೇ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಫ್ರಾನ್ಸ್ ದೇಶದ ಪ್ಯಾರಿಸ್‌ನಲ್ಲಿ ಚಾಲನೆ ನೀಡಲಾಯಿತು. ಇದೇ ಮೊದಲ ಸಲ ಒಲಿಂಪಿಕ್ಸ್‌ ಕ್ರೀಡಾಂಗಣದಿಂದ ಹೊರಗೆ ನದಿ ನೀರಿನ ಮೇಲೆ ವಿಶಿಷ್ಟ ಸಮಾರಂಭ ಆಯೋಜಿಸಿ ಕ್ರೀಡಾಕೂಟದ ಆರಂಭೋತ್ಸವ ನಡೆಸಲಾಗಿದ್ದು, ಫ್ರಾನ್ಸ್‌ ದೇಶದ ಸಾಂಸ್ಕೃತಿಕ ಪರಂಪರೆ ಮತ್ತು ತಂತ್ರಜ್ಞಾನಗಳ ಶಕ್ತಿ ಅನಾವರಣಗೊಂಡಿತು. 

ಐಫೆಲ್ ಟವರ್ ಎದುರಿನ ಒಲಿಂಪಿಕ್ ಪಾರ್ಕ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಕ್ರೀಡಾಕೂಟದ ಆರಂಭವನ್ನು ಘೋಷಿಸಿದರು.  ದಾಖಲೆಯ 3.26 ಲಕ್ಷ ಪ್ರೇಕ್ಷಕರು ನಭೂತೋ ಎಂಬಂತೆ ವೈಶಿಷ್ಟ್ಯಪೂರ್ಣ ಸಮಾರಂಭವನ್ನು ಕಣ್ತುಂಬಿಕೊಂಡರು. ಸುಮಾರು 400 ನೃತ್ಯಪಟುಗಳು, ಮೂರು ಸಾವಿರದಷ್ಟು ಕಲಾವಿದರು, ಮೌಡ್ ಲಿ ಪ್ಲಾಡೆಕ್ ನಿರ್ದೇಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. 110 ದೇಶಗಳ ಪ್ರಧಾನಿ/ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಳೆ ಸ್ವಲ್ಪ ತೊಂದರೆ ಕೊಟ್ಟಿತಾದರೂ ಅದರ ಮಧ್ಯದಲ್ಲೇ ನಾಲ್ಕು ಗಂಟೆ ಕಾಲ ವರ್ಣರಂಜಿತ ಸಮಾರಂಭ ನಡೆಯಿತು.  

Paris 2024 Olympics: the best photos of the incredible opening ceremony on  the Seine

Paris 2024 Olympics: the best photos of the incredible opening ceremony on  the Seine

The Dazzling Opening Ceremony of the Paris 2024 Olympic Games Took Place  with a Parade on the Seine River under the Rain | ABC Mundial

After a grand and historic ceremony, the Paris 2024 Games are officially  open

Olympics Opening Ceremony 2024 Best Moments - Parade

ಆಧುನಿಕ ಒಲಿಂಪಿಕ್ಸ್‌ನ 128 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಸಲ ನದಿ ಮಧ್ಯದ ತಿಳಿನೀಲ ನೀರಿನಲ್ಲಿ ಕ್ರೀಡಾಪಟುಗಳ ಪಥಸಂಚಲನ ಸಾಗಿತು. ಈ ಅದ್ಭುತ ಕಾರ್ಯಕ್ರಮಕ್ಕೆ ಫ್ರಾನ್ಸ್‌ನ ಸೀನ್‌ ನದಿ ಸಾಕ್ಷಿಯಾಯಿತು. ಸೀನ್ ನದಿಯ ಸೇತುವೆ ಮೇಲೆ ಫ್ರಾನ್ಸ್ ಧ್ವಜದ ನೀಲಿ, ಬಿಳಿ, ಕೆಂಪು ಬಣ್ಣಗಳ ಹೊಗೆ ಬೃಹತ್ ಆಕಾರದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಆಧುನಿಕ ಒಲಿಂಪಿಕ್ಸ್‌ನ ಉಗಮ ಸ್ಥಾನ ಎನಿಸಿರುವ ಗ್ರೀಸ್ ಮೊದಲ ದೇಶವಾಗಿ ಪಥಸಂಚಲನದಲ್ಲಿ ಮುನ್ನಡೆಯಿತು. ಭಾರತ 84ನೇ ತಂಡವಾಗಿ ದೋಣಿಯಲ್ಲಿ ಸಾಗಿಬಂತು. ಅತಿಥೇಯ ಫ್ರಾನ್ಸ್ ತಂಡ 206ನೇ ಹಾಗೂ ಕೊನೆಯ ದೇಶವಾಗಿ ಪಥಸಂಚಲನಕ್ಕೆ ಆಗಮಿಸಿತು. 

2028ರ ಒಲಿಂಪಿಕ್ ಕೂಟದ ಆತಿಥ್ಯ ವಹಿಸಿಕೊಳ್ಳಲಿರುವ ಅಮೆರಿಕ 204 ಹಾಗೂ 2032ರ ಒಲಿಂಪಿಕ್ಸ್ ಆತಿಥ್ಯ ವಹಿಸಿಕೊಳ್ಳಲಿರುವ ಆಸ್ಟ್ರೇಲಿಯಾ 203ನೇ ದೇಶವಾಗಿ ಸಾಗಿತು. ಫ್ರಾನ್ಸ್ ಫುಟ್ಬಾಲ್‌ ದಿಗ್ಗಜ ಜಿನೆದಿನ್ ಜಿದಾನೆ ಕ್ರೀಡಾಜ್ಯೋತಿ ಹೊತ್ತುತಂದರು.

ಭಾರತವನ್ನು ಮುನ್ನಡೆಸಿದ ಸಿಂಧು-ಶರತ್ ಜೋಡಿ 

ಬೋಟ್ ಪಥಸಂಚಲನದಲ್ಲಿ ಭಾರತ ತಂಡವನ್ನು ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಮತ್ತು ಟೇಬಲ್ ಟೆನಿಸ್ ತಾರೆ ಶರತ್ ಕಮಲ್ ಮುನ್ನಡೆಸಿದರು. ಕ್ರೀಡಾಪಟುಗಳು, ಕೋಚ್‌ಗಳು ಮತ್ತು ಅಧಿಕಾರಿಗಳಿದ್ದ 78 ಭಾರತೀಯರು ಪಥಸಂಚಲನದಲ್ಲಿ ಪಾಲ್ಗೊಂಡರು. 117 ಭಾರತೀಯ ಕ್ರೀಡಾಪಟುಗಳ ಪೈಕಿ 12 ಕ್ರೀಡೆಗಳಲ್ಲಿ ಸ್ಪರ್ಧಿಸುವ ಆಯ್ದ 23 ಕ್ರೀಡಾಪಟುಗಳಷ್ಟೇ ಸಮಾರಂಭದಲ್ಲಿದ್ದರು. ಕೆಲವರು ಶನಿವಾರವೇ ಸ್ಪರ್ಧೆಗಿಳಿಯ ಬೇಕಾಗಿರುವ ಕಾರಣ ಪಥಸಂಚಲನದಲ್ಲಿ ಭಾಗವಹಿಸಲಿಲ್ಲ. ಟೆನಿಸ್ ತಾರೆ ರೋಹನ್ ಬೋಪಣ್ಣ, ಟೇಬಲ್ ಟೆನಿಸ್ ತಾರೆ ಮನಿಕಾ ಬಾತ್ರಾ, ಬಿಲ್ಲುಗಾರ್ತಿ ದೀಪಿಕಾ ಕುಮಾರಿ, ಬಾಕ್ಸರ್ ಲವಿನಾ ಬೋರ್ಗೋಹೈನ್ ಮೊದಲಾದವರು ಪಥಸಂಚಲನದಲ್ಲಿದ್ದರು.  ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಮತ್ತು ಭಾರತ ತಂಡದ ಚೆಫ್‌ ಡಿ ಮಿಷನ್ ಗಗನ್ ನಾರಂಗ್ ಕೂಡ ಜತೆಗಿದ್ದರು.

ಕ್ರೀಡಾಕೂಟಕ್ಕೆ ವಿಧ್ವಂಸಕ ಕೃತ್ಯದ ಭೀತಿ 

ಒಲಿಂಪಿಕ್ಸ್ ಆರಂಭಕ್ಕೆ ಕೆಲವೇ ಗಂಟೆ ಇರುವಾಗ ಫ್ರಾನ್ಸ್‌ನಾದ್ಯಂತ ವಿಧ್ವಂಸಕ ದಾಳಿ ಎಸಗಲಾಗಿದೆ. ಅಲ್ಲಿನ ರೈಲ್ವೆ ವ್ಯವಸ್ಥೆ ಮೇಲೆ ದಾಳಿ ನಡೆದಿದ್ದು, ರೈಲ್ವೆ ಇಲಾಖೆಗೆ ಸೇರಿದ ಸೊತ್ತುಗಳ ಮೇಲೆ ಬೆಂಕಿ ಇಡಲಾಗಿದೆ. ಇದರಿಂದ ದೇಶದ ಹೈಸ್ಪೀಡ್ ರೈಲು ಸೇವೆ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಸುಮಾರು 8 ಲಕ್ಷ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 200ಕ್ಕೂ ಅಧಿಕ ದೇಶಗಳ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. 100ಕ್ಕೂ ಹೆಚ್ಚು ದೇಶಗಳ ಜಾಗತಿಕ ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಸುತ್ತಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

Paris 2024's ambition was to open a new page in the history of the Games. On July 26th 2024, that page began to be written with a spectacle like no other. At the end of a memorable evening, the 33rd Olympic Games of the modern era got underway. Here's a look back at an evening that will go down in history.