Mumbai Road Rage Video; ಮುಂಬೈ ; ಕಾರಿಗೆ ಆಟೋ ರಿಕ್ಷಾ ಡಿಕ್ಕಿ , ನಡು ರಸ್ತೆಯಲ್ಲೇ ಮಾರಾಮಾರಿ, ಹೆತ್ತವರ ಎದುರಲ್ಲೇ ಯುವಕನ ಬಲಿ

15-10-24 03:51 pm       HK News Desk   ದೇಶ - ವಿದೇಶ

ಆತ 28 ವರ್ಷ ವಯಸ್ಸಿನ ಯುವಕ. ಕಾರಿನಲ್ಲಿ ತನ್ನ ತಂದೆ ಹಾಗೂ ತಾಯಿಯನ್ನು ಕೂರಿಸಿಕೊಂಡು ಹೊರಟಿದ್ದ. ಈ ವೇಳೆ ಆಟೋ ರಿಕ್ಷಾ ಒಂದು ಓವರ್ ಟೇಕ್ ಮಾಡುವ ಭರದಲ್ಲಿ ಯುವಕ ಚಾಲನೆ ಮಾಡುತ್ತಿದ್ದ ಕಾರಿಗೆ ಗುದ್ದಿತು.

ಮುಂಬೈ, ಅ 15: ಆತ 28 ವರ್ಷ ವಯಸ್ಸಿನ ಯುವಕ. ಕಾರಿನಲ್ಲಿ ತನ್ನ ತಂದೆ ಹಾಗೂ ತಾಯಿಯನ್ನು ಕೂರಿಸಿಕೊಂಡು ಹೊರಟಿದ್ದ. ಈ ವೇಳೆ ಆಟೋ ರಿಕ್ಷಾ ಒಂದು ಓವರ್ ಟೇಕ್ ಮಾಡುವ ಭರದಲ್ಲಿ ಯುವಕ ಚಾಲನೆ ಮಾಡುತ್ತಿದ್ದ ಕಾರಿಗೆ ಗುದ್ದಿತು. ತನ್ನ ಕಾರಿಗೆ ಗುದ್ದಿದ ಆಟೋ ರಿಕ್ಷಾ ಚಾಲಕನನ್ನು ಯುವಕ ತರಾಟೆಗೆ ತೆಗೆದುಕೊಂಡ.. ಅಷ್ಟೇ ದುರಂತವೊಂದು ನಡೆದು ಹೋಯ್ತು..

ಮುಂಬೈನ ಮಲಾಡ್ ಪ್ರದೇಶದಲ್ಲಿ ಇರುವ ಪುಷ್ಪಾ ಪಾರ್ಕ್‌ ಬಳಿ ಶನಿವಾರ ಸಂಜೆ ನಡೆದ ಈ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಆಟೋ ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ 28 ವರ್ಷ ವಯಸ್ಸಿನ ಆಕಾಶ್ ಮಯಿನ್ ಅವರು ಚಲಾಯಿಸುತ್ತಿದ್ದ ಕಾರಿಗೆ ಗುದ್ದಿದ. ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತ ಆಕಾಶ್, ಈ ವೇಳೆ ಕಾರಿನಿಂದ ಇಳಿದು ಆಟೋ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಜನರು ಸೇರತೊಡಗಿದರು. ಈ ವೇಳೆ ಆಟೋ ಚಾಲಕ ಮೆಲ್ಲನೆ ಘಟನಾ ಸ್ಥಳದಿಂದ ಪರಾರಿಯಾದ. ಆದರೆ ಜನರು ಮಾತ್ರ ಸುಮ್ಮನಿರಲಿಲ್ಲ!

ಆಟೋ ಚಾಲಕ ಪರಾರಿಯಾಗಿದ್ದರೂ ಕೂಡಾ ಆತನ ಪರ ನಿಂತಿದ್ದ ಕೆಲವರು ಆಕಾಶ್‌ಗೆ ಥಳಿಸಿದರು. ಈ ವೇಳೆ ಸ್ಥಳದಲ್ಲಿ ಇದ್ದ ಇತರರೂ ಕೂಡಾ ಆಕಾಶ್‌ಗೆ ಥಳಿಸಲು ಆರಂಭಿಸಿದರು. ಘಟನೆಯ ತೀವ್ರತೆ ಅರಿತ ಆಕಾಶ್ ತಂದೆ ಕೂಡಲೇ ಕಾರಿನಿಂದ ಇಳಿದು ತಮ್ಮ ಮಗನ ರಕ್ಷಣೆಗೆ ಮುಂದಾದರು. ಆಕಾಶ್ ಅವರ ತಾಯಿ ತಮ್ಮ ಮಗನ ರಕ್ಷಣೆಗೆ ನಿಂತು ಆತನ ದೇಹದ ಮೇಲೆ ಒರಗಿದರು. ಈ ವೇಳೆ ಆಕೆಗೂ ಪೆಟ್ಟುಗಳು ಬಿದ್ದವು.

ಆಕಾಶ್‌ನ ತಂದೆ ಹಾಗೂ ತಾಯಿ ಮಗನ ರಕ್ಷಣೆಗೆ ಧಾವಿಸುವಷ್ಟರಲ್ಲೇ ಆತನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಆತನಿಗೆ ಕಾಲಿನಲ್ಲಿ ಒದ್ದು, ಮುಖ ಹಾಗೂ ತಲೆಯಲ್ಲಿ ರಕ್ತ ಬರುತ್ತಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆಕಾಶ್ ಪ್ರಜ್ಞಾ ಹೀನರಾಗಿದ್ದರು. ಈ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯ್ತು

ಆದರೆ ಆಸ್ಪತ್ರೆಯ ವೈದ್ಯರು ಆಕಾಶ್‌ ಅವರನ್ನು ಆಸ್ಪತ್ರೆಗೆ ಕರೆ ತರುವ ಮುನ್ನವೇ ಸಾವನ್ನಪ್ಪಿದ್ದರು ಎಂದು ಘೋಷಿಸಿದರು. ಈ ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರು ಮಂದಿಯನ್ನು ಗುರ್ತಿಸಿ ಭಾನುವಾರವೇ ಬಂಧಿಸಿದರು. ಇನ್ನೂ ಮೂವರನ್ನು ಸೋಮವಾರ ಬಂಧಿಸಿದರು. ಇವರೆಲ್ಲರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕೊಲೆ ಹಾಗೂ ಇನ್ನಿತರ ಆರೋಪಗಳ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.

ಎಲ್ಲಾ 9 ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಲಯ ಆರೋಪಿಗಳನ್ನು ಅಕ್ಟೋಬರ್ 22ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಘಟನೆಗೆ ಕಾರಣವಾದ ಆಟೋ ಚಾಲಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಗುಂಪು ಹಲ್ಲೆ ಪ್ರಕರಣದಲ್ಲಿ ಇನ್ನೂ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಪತ್ತೆ ಮಾಡಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Aakash Meena, an MNS worker murdered in a road rage incident in broad daylight light in Mumbai. This happened on Oct 12 and reportedly his pregnant wife suffered a miscarriage during the time he was being beaten by a group of boys

More, his parents were right there, trying to… pic.twitter.com/ECL8QGGMDI

— Sneha Mordani (@snehamordani) October 15, 2024

In a tragic incident of road rage, a 28-year-old man was brutally beaten to death by a mob in Malad East, Mumbai. The victim, Akash Maeen, was visiting his parents for the Navratri festival when the altercation occurred. Nine individuals have been arrested in connection with the incident, which took place on the evening of October 12, a TOI report stated.