ಬ್ರೇಕಿಂಗ್ ನ್ಯೂಸ್
30-11-24 11:17 am HK News Desk ದೇಶ - ವಿದೇಶ
ಹೈದರಾಬಾದ್, ನ.29: ಹಿರಿಯ ನಾಗರಿಕರೊಬ್ಬರು ತಡಬಡಾಯಿಸುತ್ತ ಬ್ಯಾಂಕಿನತ್ತ ಬಂದಿದ್ದರು. ತನ್ನ ಹೆಸರಲ್ಲಿ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (ಎಸ್ ಸಿಎಸ್ ಎಸ್) ಯೋಜನೆಯಡಿ ಡಿಪಾಸಿಟ್ ಇಟ್ಟಿದ್ದ 30 ಲಕ್ಷ ಹಣವನ್ನು ತನ್ನ ಚಾಲ್ತಿ ಖಾತೆಗೆ ಹಿಂತಿರುಗಿಸುವಂತೆ ಕೇಳಿಕೊಂಡಿದ್ದರು. ಪದೇ ಪದೇ ಫೋನಲ್ಲಿ ಮಾತನಾಡುತ್ತ ಡಿಪಾಸಿಟ್ ಹಣವನ್ನು ಚಾಲ್ತಿ ಖಾತೆಗೆ ವರ್ಗಾಯಿಸುವಂತೆ ಹೇಳುತ್ತಿದ್ದರು. ಇವರ ವರ್ತನೆಯಿಂದ ಸಂಶಯಕ್ಕೀಡಾದ ಹೈದರಾಬಾದಿನ ಎಸ್ ಬಿಐ ಬ್ಯಾಂಕ್ ಶಾಖೆಯ ಮ್ಯಾನೇಜರ್ ವ್ಯಕ್ತಿಯನ್ನು ವಿಚಾರಿಸಿದ್ದು ಹಣ ಕಳಕೊಳ್ಳುವ ಕೂಪದಿಂದ ಪಾರು ಮಾಡಿದ್ದಾರೆ.
ತನ್ನ ಪತ್ನಿಗೆ ಏನೋ ಹುಷಾರಿಲ್ಲ, ಬ್ರೇನ್ ಹ್ಯಾಮರೇಜ್ ಆಗಿದೆಯಂತೆ. ಆಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ ಎಂದು ಹಿರಿಯ ವ್ಯಕ್ತಿ ನೇರವಾಗಿ ಬ್ಯಾಂಕ್ ಮ್ಯಾನೇಜರ್ ಗೆ ತಿಳಿಸಿದ್ದಾರೆ. ಹಿರಿಯ ವ್ಯಕ್ತಿ ತಡಬಡಾಯಿಸುತ್ತಿದ್ದ ವರ್ತನೆಯನ್ನು ಕಂಡು ಮ್ಯಾನೇಜರ್ ಸಂಶಯಕ್ಕೀಡಾಗಿದ್ದು, ಯಾವ ಆಸ್ಪತ್ರೆಯೆಂದು ಹೇಳಿ ಅಲ್ಲಿಗೆ ಫೋನ್ ಮಾಡಿದ್ದಾರೆ. ಅಲ್ಲಿ ಇವರು ಹೇಳಿದ ಮಹಿಳೆ ಅಡ್ಮಿಟ್ ಆಗಿಲ್ಲವೆಂದು ಉತ್ತರ ಬಂದಿತ್ತು.
ಆನಂತರ, ಬ್ಯಾಂಕ್ ಮ್ಯಾನೇಜರ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಅವರನ್ನು ಕರೆಸಿದ್ದಾರೆ. ತನಿಖೆಯಲ್ಲಿ ವೃದ್ಧ ವ್ಯಕ್ತಿಯನ್ನು ಯಾರೋ ಫೋನ್ ಮಾಡಿ ಯಾಮಾರಿಸಿದ್ದಾರೆ ಎನ್ನೋದು ಆಗ ತಿಳಿದುಬಂದಿತ್ತು. ದೆಹಲಿಯ ಕಸ್ಟಮ್ಸ್ ಅಧಿಕಾರಿಯೆಂದು ಫೋನ್ ಮಾಡಿದ್ದ ವ್ಯಕ್ತಿಯೊಬ್ಬ ವೃದ್ಧ ವ್ಯಕ್ತಿಯನ್ನು ನಂಬಿಸಿ, ನಿಮ್ಮ ಹೆಸರಲ್ಲಿ ಮಲೇಶ್ಯಾದಿಂದ 16 ಪಾಸ್ ಪೋರ್ಟ್ ಮತ್ತು ಎಟಿಎಂ ಕಾರ್ಡ್ ಇದ್ದ ಪಾರ್ಸೆಲ್ ಬಂದಿದೆ. ಅದರಲ್ಲಿ ಡ್ರಗ್ಸ್ ಇದೆಯೆಂದು ಹೇಳಿ ಬಚಾವ್ ಮಾಡಲು ಒಂದಷ್ಟು ಹಣ ಬೇಕಾಗುತ್ತದೆ ಎಂದು ಹೇಳಿದ್ದ. ಅದರ ಬೆನ್ನಲ್ಲೇ ಮತ್ತೊಬ್ಬ ವ್ಯಕ್ತಿ ತಾನು ದೆಹಲಿಯ ಕ್ರೈಮ್ ಪೊಲೀಸ್ ಎಂದು ಫೋನ್ ಮಾಡಿದ್ದು, ನಿಮ್ಮ ಆಧಾರ್ ದಾಖಲೆಯಿಟ್ಟು 30 ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. 88 ಕೋಟಿ ರೂಪಾಯಿ ಹಣ ಬ್ಯಾಂಕ್ ಖಾತೆಯಿಂದ ವರ್ಗಾವಣೆಯಾಗಿದೆ. ಇದರಿಂದಾಗಿ ಮನಿ ಲಾಂಡರಿಂಗ್ ವಿಷಯದಲ್ಲಿ ಪ್ರಕರಣ ದಾಖಲಾಗಿದೆ ಎಂದು ನಂಬಿಸಿದ್ದರು.
ಇದೇ ಕಾರಣಕ್ಕೆ ವೃದ್ಧ ವ್ಯಕ್ತಿಯನ್ನು ನಿಮ್ಮ ಬ್ಯಾಂಕಿನಲ್ಲಿ ಇಟ್ಟಿರುವ 30 ಲಕ್ಷ ಡಿಪಾಸಿಟ್ ಹಣವನ್ನು ಮರಳಿ ಚಾಲ್ತಿ ಖಾತೆಗೆ ವರ್ಗಾಯಿಸುವಂತೆ ಬೆದರಿಕೆ ಒಡ್ಡಿದ್ದರು. ನಿಮ್ಮ ಹಣ ನಿಮ್ಮದೇ ಕೈಯಲ್ಲಿದ್ದರೆ ಸೇಫ್ ಅಂತ ಹೇಳಿಯೂ ನಂಬಿಸಿದ್ದರು. ಒಂದಷ್ಟು ಹಣ ಕೊಟ್ಟರೆ ನಿಮ್ಮನ್ನು ಬಚಾವ್ ಮಾಡುತ್ತೇವೆಂದು ಹೇಳಿ ನಂಬಿಸಲು ಯತ್ನಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಲೇ ಹಿರಿಯ ವ್ಯಕ್ತಿ ಬಾಯಿಬಿಟ್ಟಿದ್ದು, ಹಣಕ್ಕಾಗಿ ನನ್ನನ್ನು ತೀವ್ರವಾಗಿ ಕಾಡಿದ್ದರು. ಅದಕ್ಕಾಗಿ ಈ ರೀತಿ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಎಸ್ ಬಿಐ ಬ್ಯಾಂಕಿನವರು ನ.27ರಂದು ನಡೆದಿರುವ ಈ ಘಟನೆಯನ್ನು ಆಧರಿಸಿ ಎಲ್ಲ ಬ್ಯಾಂಕ್ ಶಾಖೆಗಳಿಗೂ ರವಾನಿಸಿದ್ದು, ಡಿಜಿಟಲ್ ಅರೆಸ್ಟ್ ಎನ್ನುವ ಕೂಪಕ್ಕೆ ಬೀಳದಂತೆ ಜಾಗ್ರತೆ ವಹಿಸಲು ಸೂಚಿಸಿದ್ದಾರೆ.
The Finance Ministry has notified the hike in investment limit in Senior Citizens Savings Scheme. As per the notification issued, an individual can now invest Rs 30 lakh instead of Rs 15 lakh earlier in the scheme. The hike in investment limit under the scheme was announced in Budget 2023. The Finance Ministry has now issued a notification in this regard on March 31, 2023.
04-04-25 10:54 pm
HK News Desk
Mla Pradeep Eshwar, H D Kumaraswamy: ಕುಮಾರಸ್ವ...
04-04-25 09:55 pm
Waqf Amendment, Deve Gowda, Rajya Sabha: ವಕ್ಫ...
04-04-25 12:00 pm
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
04-04-25 11:07 pm
Mangalore Correspondent
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm