IPS Mohsin Khan, Rape; ಖಾನ್ಪುರ ಐಐಟಿಯಲ್ಲಿ ಕ್ರಿಮಿನಾಲಜಿ ಓದುತ್ತಿದ್ದ ವಿದ್ಯಾರ್ಥಿನಿಗೆ ಎಸಿಪಿಯಿಂದಲೇ ದೋಖಾ ; ಮದುವೆಯಾಗುತ್ತೇನೆಂದು ನಂಬಿಸಿ ಅತ್ಯಾಚಾರ, ಪತ್ನಿ, ಮಗುವಿಗೆ ಡೈವರ್ಸ್ ಕೊಡುತ್ತೇನೆಂದು ಹೇಳಿ ಹಿಂದು ಯುವತಿಗೆ ವಂಚನೆ

14-12-24 12:40 pm       HK News Desk   ದೇಶ - ವಿದೇಶ

ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಐಐಟಿ ಖಾನ್ಪುರದಲ್ಲಿ ಅಪರಾಧ ಶಾಸ್ತ್ರ ಓದುತ್ತಿದ್ದ ಹಿಂದು ವಿದ್ಯಾರ್ಥಿನಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಅತ್ಯಾಚಾರಗೈದ ಬಗ್ಗೆ ಪ್ರಕರಣ ದಾಖಲಾಗಿದೆ.

ಲಕ್ನೋ, ಡಿ.13: ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಐಐಟಿ ಖಾನ್ಪುರದಲ್ಲಿ ಅಪರಾಧ ಶಾಸ್ತ್ರ ಓದುತ್ತಿದ್ದ ಹಿಂದು ವಿದ್ಯಾರ್ಥಿನಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಅತ್ಯಾಚಾರಗೈದ ಬಗ್ಗೆ ಪ್ರಕರಣ ದಾಖಲಾಗಿದೆ. ಖಾನ್ಪುರ ನಗರದಲ್ಲಿ ಎಸಿಪಿಯಾಗಿದ್ದ ಮೊಹ್ಸಿನ್ ಖಾನ್ ಆರೋಪಿಯಾಗಿದ್ದು, ಮದುವೆಯಾಗಿ ಮಗುವಿದ್ದು ಪತ್ನಿ ಮತ್ತೆ ಗರ್ಭಿಣಿಯಾಗಿದ್ದರೂ ಉನ್ನತ ಶಿಕ್ಷಣಕ್ಕಾಗಿ ಬಂದಿದ್ದ ವಿದ್ಯಾರ್ಥಿನಿಯನ್ನು ಮದುವೆಯಾಗುವ ಭರವಸೆ ನೀಡಿ ವಂಚಿಸಿದ್ದಾನೆ.

ಪಶ್ಚಿಮ ಬಂಗಾಳ ಮೂಲದ ಸಂತ್ರಸ್ತ ಯುವತಿಯಾಗಿದ್ದು, ಖಾನ್ಪುರ ಐಐಟಿಯಲ್ಲಿ ಕ್ರಿಮಿನಾಲಜಿ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಳು. ಮೊಹ್ಸಿನ್ ಖಾನ್ 2013ರ ಬ್ಯಾಚಿನ ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಯಾಗಿದ್ದು, 2023ರಲ್ಲಿ ಖಾನ್ಪುರಕ್ಕೆ ಎಸಿಪಿಯಾಗಿ ನೇಮಕಗೊಂಡಿದ್ದರು. 2023ರ ಡಿಸೆಂಬರ್ ನಲ್ಲಿ ಮೊಹ್ಸಿನ್ ಖಾನ್ ಅವರನ್ನು ಯುವತಿ ಭೇಟಿಯಾಗಿದ್ದು, ಅಪರಾಧ ವಿಚಾರದಲ್ಲಿ ಮಾಹಿತಿ ಬಯಸಿದ್ದಳು. ಖಾನ್ಪುರ ಸೈಬರ್ ಸೆಲ್ ಮತ್ತು ಐಐಟಿ ಖಾನ್ಪುರ ಜಂಟಿಯಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಇವರ ನಡುವೆ ಪರಿಚಯ ಆಗಿತ್ತು. ಪರಸ್ಪರ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು.

ಯುವತಿ ನಾಲ್ಕನೇ ಸೆಮಿಸ್ಟರ್ ಓದುತ್ತಿದ್ದುದರಿಂದ ಇಂಟರ್ನ್ ಶಿಪ್ ಉದ್ದೇಶಕ್ಕಾಗಿ ಮೊಹ್ಸಿನ್ ಖಾನ್ ಬಳಿ ಬಂದಿದ್ದಳು. ಆನಂತರ, ತನ್ನ ಪತ್ನಿಗೆ ಡೈವರ್ಸ್ ನೀಡಿ ನಿನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ ಸಂಬಂಧ ಬೆಳೆಸಿದ್ದ. ಒಂದು ವರ್ಷ ಕಳೆದ ಬಳಿಕ ತನಗೆ ವಂಚಿಸಿದ್ದಾನೆಂದು 2024ರ ಜೂನ್ ತಿಂಗಳಲ್ಲಿ ಯುವತಿ ಪೊಲೀಸ್ ದೂರು ನೀಡಿದ್ದಳು. ದೂರಿನ ಪ್ರಕಾರ, ಮೊಹ್ಸಿನ್ ಖಾನ್ ತಾನು ಕೂಡ ಪಿಎಚ್ ಡಿ ಮಾಡಲು ಬಯಸಿದ್ದು, ಅದಕ್ಕೆ ನಿನ್ನ ಸಲಹೆ ಬೇಕೆಂದು ಕೇಳಿ ಹತ್ತಿರವಾಗಿದ್ದ. ಇದರಂತೆ ಯುವತಿಯೇ ಖಾನ್ಪುರ ಐಐಟಿಯಲ್ಲಿ ಎಸಿಪಿ ಮೊಹ್ಸಿನ್ ಖಾನ್ ನನ್ನು ಪಿಎಚ್ ಡಿ ಓದುವುದಕ್ಕೆ ಸೇರ್ಪಡೆ ಮಾಡಲು ಸಹಕರಿಸಿದ್ದಳು. ಅದರ ಶುಲ್ಕವನ್ನೂ ಆಕೆಯೇ ಮೊಹ್ಸಿನ್ ಪರವಾಗಿ ಕಟ್ಟಿದ್ದಳು.

ಕಾಲೇಜಿಗೆ ಅಡ್ಮಿಶನ್ ಆದಬಳಿಕ ಇವರ ಸಂಬಂಧ ಮತ್ತಷ್ಟು ಹತ್ತಿರವಾಗಿತ್ತು. ಆಗ ತನಗೆ ಮದುವೆಯಾಗಿಲ್ಲ, ನಿನ್ನನ್ನು ತುಂಬ ಪ್ರೀತಿಸುತ್ತೇನೆ, ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿದ್ದ. ಐಐಟಿ ಹಾಸ್ಟೆಲ್ ನಲ್ಲಿದ್ದಾಗಲೇ ತನ್ನ ಮೇಲೆ ರೇಪ್ ಆಗಿದೆ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಈ ಘಟನೆಯ ಕೆಲವು ದಿನಗಳ ಬಳಿಕ ಮೊಹ್ಸಿನ್ ಖಾನ್ ಮದುವೆಯಾಗಿರುವುದು ಮತ್ತು ಮಗುವನ್ನು ಹೊಂದಿರುವುದಲ್ಲದೆ, ಆತನ ಪತ್ನಿ ಮತ್ತೆ ಗರ್ಭಿಣಿಯಾಗಿರುವ ವಿಚಾರ ತಿಳಿದುಬಂದಿತ್ತು. ವಿಚಾರ ತಿಳಿದು ಯುವತಿ ಜಗಳ ಮಾಡಿದ್ದು, ಆ ಸಂದರ್ಭದಲ್ಲಿ ತನಗೆ ಪತ್ನಿಯೊಂದಿಗೆ ಸರಿ ಇಲ್ಲ, ಆಕೆಗೆ ಡೈವರ್ಸ್ ನೀಡುತ್ತೇನೆಂದು ನಂಬಿಸಿದ್ದಾನೆ.

ಇದೇ ನವೆಂಬರ್ 27ರಂದು ಮೊಹ್ಸಿನ್ ಖಾನ್ ಪತ್ನಿಗೆ ಹೆರಿಗೆಯಾಗಿದ್ದು ತಿಳಿದ ವಿದ್ಯಾರ್ಥಿನಿ, ಆಕೆಯ ಇನ್ ಸ್ಟಾ ಗ್ರಾಮ್ ಖಾತೆಯನ್ನು ಹುಡುಕಾಡಿ ಫೋನ್ ಸಂಪರ್ಕ ಮಾಡಿದ್ದಾಳೆ. ಆಗ ಅವರ ನಡುವಲ್ಲೇನೂ ಜಗಳ, ವಿವಾದ ಇಲ್ಲವೆಂದು ತಿಳಿದುಬಂದಿತ್ತು. ಇದರ ಬೆನ್ನಲ್ಲೇ ಐಐಟಿ ಸಂಸ್ಧೆಯ ಸಿಬಂದಿಗೆ ತನ್ನ ಮೇಲಾದ ಲೈಂಗಿಕ ಕಿರುಕುಳದ ವಿಷಯ ತಿಳಿಸಿದ್ದು ಆನಂತರ ಖಾನ್ಪುರ ಕಮಿಷನರೇಟ್ ಪೊಲೀಸರಿಗೂ ದೂರು ನೀಡಿದ್ದಾಳೆ. ಮೊದಲಿಗೆ, ಪ್ರಕರಣ ದಾಖಲಿಸದೆ ಇತ್ಯರ್ಥ ಪಡಿಸಲು ಪೊಲೀಸರು ಪ್ರಯತ್ನ ಮಾಡಿದ್ದಾರೆ. ಆದರೆ ವಂಚನೆಗೀಡಾದ ಹಿಂದು ಯುವತಿ ಗಟ್ಟಿಯಾಗಿ ನಿಂತಿದ್ದು, ಎಫ್ಐಆರ್ ದಾಖಲಿಸಲು ಪಟ್ಟು ಹಿಡಿದಿದ್ದಾಳೆ. ಪೊಲೀಸರು ಬಳಿಕ ಕೇಸು ದಾಖಲಿಸಿ, ತನಿಖೆಗೆ ಎಸ್ಐಟಿ ರಚನೆ ಮಾಡಿದ್ದಾರೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಮೊಹ್ಸಿನ್ ಖಾನ್ ಅವರನ್ನು ಖಾನ್ಪುರ ಎಸಿಪಿ ಹುದ್ದೆಯಿಂದ ತೆಗೆದು ರಾಜ್ಯ ಸರ್ಕಾರ ಲಕ್ನೋಗೆ ವರ್ಗಾವಣೆ ಮಾಡಿದೆ.

A 26-year-old research scholar at IIT Kanpur has accused Collectorganj ACP Mohsin Khan, of rape and sexual exploitation by making false promises of marriage. Mohsin Khan, an already married police officer, reportedly became closer to the girl studying criminology under the guise of studies and tricked the student into believing he would divorce his first wife to marry her. On the student’s complaint, the police have filed an FIR in this case.