ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ ಮುಟ್ಟುವ ಮೊದಲೇ ದುರ್ಮರಣ ; ಏರ್ಪೋರ್ಟ್ ನಲ್ಲಿ ಸ್ವಾಗತಿಸಿದ್ದ ತಂದೆಯಂದಿರ ಜೊತೆಗೇ ಇಹಲೋಕಕ್ಕೆ, ಶಬರಿಮಲೆ ಬಳಿ ಭೀಕರ ಅಪಘಾತಕ್ಕೆ ನಾಲ್ವರ ಬಲಿ

16-12-24 04:19 pm       HK News Desk   ದೇಶ - ವಿದೇಶ

ಮಲೇಶ್ಯಾದಲ್ಲಿ ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ನವ ವಧೂವರರು ಮತ್ತವರ ತಂದೆಯಂದಿರು ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವಿಗೀಡಾದ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.

ತಿರುವನಂತಪುರಂ, ಡಿ.16: ಮಲೇಶ್ಯಾದಲ್ಲಿ ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ನವ ವಧೂವರರು ಮತ್ತವರ ತಂದೆಯಂದಿರು ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವಿಗೀಡಾದ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.

15 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನಿಖಿಲ್ ಈಪನ್ (29) ಮತ್ತು ಅನು ಬಿಜು (26) ಮೃತಪಟ್ಟ ನವಜೋಡಿ. ಇವರೊಂದಿಗೆ ನಿಖಿಲ್ ತಂದೆ ಮತ್ತಾಯಿ ಈಪನ್ ಮತ್ತು ಅನು ತಂದೆ ಬಿಜು ಜಾರ್ಜ್ ಅವರೂ ಸಾವಿಗೀಡಾಗಿದ್ದಾರೆ. ಭಾನುವಾರ ನಸುಕಿನ 4 ಗಂಟೆ ವೇಳೆಗೆ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಬಳಿಯಿರುವ ಪರವೂರು- ಮೂವಾಟ್ಟುಪುಝ ಹೆದ್ದಾರಿಯ ಮುರಿಂಜಕಲ್ ಎಂಬಲ್ಲಿನ ಅಪಾಯಕಾರಿ ತಿರುವಿನಲ್ಲಿ ಅಪಘಾತ ನಡೆದಿದೆ.

Until death do us apart': Anu and Nikhil to be laid to rest at church where  they united 15 days ago, newlyweds, car accident, anu nikhil, Kerala, pathanamthitta  accident, honeymoon, funeral

ಮಲೇಶ್ಯಾದಿಂದ ತಿರುವನಂತಪುರ ಏರ್ಪೋರ್ಟಿಗೆ ಮರಳಿದ್ದ ಜೋಡಿಯನ್ನು ಸ್ವಾಗತಿಸಲು ಯುವತಿ ಮತ್ತು ಯುವಕನ ತಂದೆ ಕಾರಿನಲ್ಲಿ ತೆರಳುತ್ತಿದ್ದರು. ವಿಮಾನದಲ್ಲಿ ಬಂದ ಜೋಡಿಯನ್ನು ಕಾರಿನಲ್ಲಿ ಕರೆದುಕೊಂಡು ಮನೆಯತ್ತ ಹಿಂತಿರುಗುತ್ತಿದ್ದಾಗ ಆಂಧ್ರಪ್ರದೇಶದ ಶಬರಿಮಲೆ ಯಾತ್ರಿಕರಿದ್ದ ಟೂರಿಸ್ಟ್ ಬಸ್ ಡಿಕ್ಕಿಯಾಗಿದೆ. ಮುರಿಂಜಕಲ್ ಎನ್ನುವ ತಿರುವು ರಸ್ತೆ ಅಪಘಾತಕ್ಕೆ ಕುಖ್ಯಾತಿಯಾಗಿದ್ದು, ಈ ಹಿಂದೆಯೂ ಹಲವಾರು ಅಪಘಾತಗಳಾಗಿದ್ದವು.

ಮತ್ತಾಯಿ ಈಪನ್ ಮತ್ತು ಬಿಜು ಅವರು ತಮ್ಮ ಮಕ್ಕಳನ್ನು ಸ್ವಾಗತಿಸಲು ಶನಿವಾರ ರಾತ್ರಿಯೇ ತಿರುವನಂತಪುರ ಏರ್ಪೋರ್ಟಿಗೆ ತೆರಳಿದ್ದರು. ಆದರೆ ಹಿಂತಿರುಗಿ ಬರುತ್ತಿದ್ದಾಗ ತಮ್ಮ ಮನೆ ಇನ್ನೇನು 7 ಕಿಮೀ ದೂರ ಇದೆ ಎನ್ನುವಷ್ಟರಲ್ಲಿ ಅಪಘಾತಕ್ಕೀಡಾಗಿದ್ದಾರೆ. ನಿಖಿಲ್ ಮತ್ತು ಅನು ಅವರು ಪತ್ತನಂತಿಟ್ಟ ಜಿಲ್ಲೆಯ ರನ್ನಿಯ ಕೆಥೋಲಿಕ್ ಚರ್ಚ್ ಗೆ ಸೇರಿದವರಾಗಿದ್ದು, ಎಂಟು ವರ್ಷಗಳ ಪ್ರೀತಿಯ ಬಳಿಕ ನ.30ರಂದು ಮೇರಿ ಮಲಂಕರ ಸಿರಿಯಾಕ್ ಕೆಥೋಲಿಕ್ ಚರ್ಚ್ ನಲ್ಲಿ ಮದುವೆಯಾಗಿದ್ದರು. ಮದುವೆಯ ಬಳಿಕ ಮಲೇಶ್ಯಾಕ್ಕೆ ಹನಿಮೂನ್ ತೆರಳಿ ಹಿಂತಿರುಗು

Pathanamthitta: Nikhil Eapen (29) and Anu Biju (26) could not have foreseen the tragedy that awaited them upon their return from a joyful honeymoon in Malaysia. In a cruel twist of fate, the couple, who had taken their wedding vows just 15 days ago, lost their lives in a road accident during their journey from Thiruvananthapuram airport to their home in Ranni.