ಮುಂಬೈನಲ್ಲಿ ಪ್ರವಾಸಿಗರಿದ್ದ ಫೆರ್ರಿ ಹಡಗಿಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿ ; 13 ಸಾವು, 100ಕ್ಕೂ ಹೆಚ್ಚು ಜನರ ರಕ್ಷಣೆ

18-12-24 10:37 pm       HK News Desk   ದೇಶ - ವಿದೇಶ

ಮುಂಬೈ ಕರಾವಳಿಯಲ್ಲಿ ಪ್ರವಾಸಿಗರು ಸಂಚರಿಸುತ್ತಿದ್ದ ಐಷಾರಾಮಿ ನೀಲ್ ಕಮಲ್ ಫೆರ್ರಿ ಹಡಗಿಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿಯಾಗಿದ್ದು, ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.

ಮುಂಬೈ, ಡಿ.18: ಮುಂಬೈ ಕರಾವಳಿಯಲ್ಲಿ ಪ್ರವಾಸಿಗರು ಸಂಚರಿಸುತ್ತಿದ್ದ ಐಷಾರಾಮಿ ನೀಲ್ ಕಮಲ್ ಫೆರ್ರಿ ಹಡಗಿಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿಯಾಗಿದ್ದು, ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಗೇಟ್ ವೇ ಆಫ್ ಇಂಡಿಯಾದಿಂದ ಸಮುದ್ರ ಮಧ್ಯದ ಪ್ರವಾಸಿ ತಾಣವಾಗಿರುವ ಎಲಿಫಾಂಟಾ ದ್ವೀಪಕ್ಕೆ ಫೆರ್ರಿಯಲ್ಲಿ ಪ್ರವಾಸಿಗರನ್ನು ಒಯ್ಯಲಾಗುತ್ತಿತ್ತು. ನಾಲ್ಕು ಗಂಟೆ ವೇಳೆಗೆ ನೌಕಾಪಡೆಯ ಸ್ಪೀಡ್ ಪೋಸ್ಟ್ ಡಿಕ್ಕಿಯಾಗಿದೆ. 10 ಮಂದಿ ನಾಗರಿಕರು ಮತ್ತು ಮೂರು ಮಂದಿ ನೇವಿ ಸಿಬಂದಿ ಮೃತಪಟ್ಟಿದ್ದಾರೆ.

ಇಂಡಿಯನ್ ನೇವಿ ಮತ್ತು ಕೋಸ್ಟ್ ಗಾರ್ಡ್ ಸಿಬಂದಿ 11 ನೇವಿ ಬೋಟ್ ಮತ್ತು ಮೂರು ಮೆರೈನ್ ಪೊಲೀಸ್ ಬೋಟ್ ನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ನಾಲ್ಕು ಹೆಲಿಕಾಪ್ಟರನ್ನೂ ರಕ್ಷಣಾ ಕಾರ್ಯಕ್ಕೆ ಇರಿಸಲಾಗಿದೆ. ಗೇಟ್ ವೇಯಿಂದ 30 ಕಿಮೀ ದೂರದ ಎಲಿಫಾಂಟ ದ್ವೀಪಕ್ಕೆ ಪ್ರವಾಸಿಗರು ಹಡಗಿನಲ್ಲಿ ತೆರಳುತ್ತಿದ್ದರು. ಈ ವೇಳೆ, ನೌಕಾಪಡೆಯ ಸ್ಪೀಡ್ ಬೋಟ್ ಸುತ್ತುವರಿಯುತ್ತಿತ್ತು. ಮಧ್ಯಾಹ್ನ 3.30ರ ವೇಳೆಗೆ ದ್ಪೀಪದಿಂದ ಏಳೆಂಟು ಕಿಮೀ ದೂರ ಉಳಿದಿತ್ತು. ಇದೇ ವೇಳೆ, ನೌಕಾಪಡೆಯ ಸ್ಪೀಡ್ ಬೋಟ್ ಪ್ಯಾಸೆಂಜರ್ ಹಡಗಿಗೆ ಡಿಕ್ಕಿಯಾಗಿದೆ.

Mumbai: 13 Dead, 101 Rescued After Navy Boat Crashes Into Ferry Near  Gateway Of India | Watch

Mumbai boat capsize: 13 dead, over 100 passengers rescued as speedboat rams  into ferry near Gateway of India | Today News

Two drown as Indian Navy speedboat rams into passenger ferry in Arabian Sea  off Gateway of India

ಸ್ಪೀಟ್ ಬೋಟ್ ಹತ್ತಿರದಿಂದ ಸುತ್ತು ಹೊಡೆಯುತ್ತಿದ್ದಾಗ ನೀರಿನಲ್ಲಿ ಜೋರು ಅಲೆಗಳು ಏಳುತ್ತಿದ್ದವು. ಈ ವೇಳೆ, ಹಡಗಿನ ಸಿಬಂದಿ ಜಾಕೆಟ್ ಹಾಕಿಕೊಳ್ಳುವಂತೆ ಸೂಚನೆ ನೀಡಿದರು. ನಾವು ಜಾಕೆಟ್ ರೆಡಿ ಮಾಡಿಕೊಳ್ಳುತ್ತಿದ್ದಾಗಲೇ ಹಡಗು ವಾಲುತ್ತ ಬಂದಿತ್ತು. 15 ನಿಮಿಷ ಕಾಲ ನೀರಿನಲ್ಲಿ ಈಜಾಡಿದ ಬಳಿಕ ಮತ್ತೊಂದು ಬೋಟ್ ಬಂದು ನಮ್ಮನ್ನು ರಕ್ಷಣೆ ಮಾಡಿತ್ತು ಎಂದು ಒಬ್ಬರು ತಿಳಿಸಿದ್ದಾರೆ. ಹಡಗಿನಲ್ಲಿ ಒಟ್ಟು ಎಷ್ಟು ಮಂದಿ ಇದ್ದರು, ಎಷ್ಟು ಮಂದಿಯ ರಕ್ಷಣೆ ಆಗಿದೆ ಎನ್ನುವ ಖಚಿತ ಮಾಹಿತಿ ಲಭಿಸಿಲ್ಲ.

ಬೋಟಿನ ಒಳಗೆ ನೀರು ನುಗ್ಗುವ ತನಕವೂ ನಮಗೆ ಲೈಫ್ ಜಾಕೆಟ್ ನೀಡಿರಲಿಲ್ಲ. ನಮ್ಮೊಂದಿಗೆ ಮಕ್ಕಳೂ ಇದ್ದರು. ಆನಂತರ, ಲೈಫ್ ಜಾಕೆಟ್ ನೀಡತೊಡಗಿದ್ದರು. ಜಾಕೆಟ್ ಹಾಕಿಕೊಳ್ಳುವಷ್ಟರಲ್ಲಿ ಮುಳುಗಿತ್ತು. ಸ್ಪೀಡ್ ಬೋಟಿನಲ್ಲಿಯೂ ಹತ್ತು ಮಂದಿಯಷ್ಟು ಸಿಬಂದಿ ಇದ್ದರು ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಮೃತರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶ ಮಾಡಿದ್ದಾರೆ.

An Indian navy speedboat crashed into a ferry carrying over 100 people to a popular tourist destination off Mumbai on Wednesday, killing at least 13, the navy said. A navy statement said 99 ferry passengers were rescued. They were on their way to Elephanta Island when the speedboat circled and collided with the ferry ''Neelkamal.''