ಅಂಬೇಡ್ಕರ್ ಘೋಷಣೆ ಫ್ಯಾಶನ್ ಆಗಿಬಿಟ್ಟಿದೆ ಎಂದ ಅಮಿತ್ ಷಾ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ ; ಸಂಸತ್ತಿನ ಹೊರಗಡೆ ತಳ್ಳಾಟ- ಹೈಡ್ರಾಮಾ, ಬಿಜೆಪಿ ಸಂಸದರಿಬ್ಬರಿಗೆ ಗಾಯ, ರಾಹುಲ್ ಗಾಂಧಿ ತಳ್ಳಿದ್ದಾರೆಂದು ಕೊಲೆಯತ್ನ ದೂರು

19-12-24 05:40 pm       HK News Desk   ದೇಶ - ವಿದೇಶ

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿದ್ದಾರೆಂದು ಸಂಸತ್ತಿನ ಹೊರಗಡೆ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದ್ದಾರೆ.

ನವದೆಹಲಿ, ಡಿ.19: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿದ್ದಾರೆಂದು ಸಂಸತ್ತಿನ ಹೊರಗಡೆ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ, ತಳ್ಳಾಟ ನಡೆದಿದ್ದು, ಬಿಜೆಪಿಯ ಹಿರಿಯ ಸಂಸದರೊಬ್ಬರು ಗಾಯಗೊಂಡಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡುತ್ತ ಅಮಿತ್ ಷಾ, ಅಂಬೇಡ್ಕರ್ ಹೆಸರನ್ನೆತ್ತಿ ರಾಜಕೀಯ ಮಾಡುತ್ತಿದ್ದಾರೆಂದು ಹೇಳುವುದಕ್ಕೆ ಮುಂದಾಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಈಗ ಅಂಬೇಡ್ಕರ್, ಅಂಬೇಡ್ಕರ್ ಎಂದು ಘೋಷಣೆ ಕೂಗುವುದು ಕೆಲವರಿಗೆ ಫ್ಯಾಷನ್ ಆಗಿಬಿಟ್ಟಿದೆ. ಇದೇ ರೀತಿ ದೇವರ ಹೆಸರನ್ನು ಹೇಳುತ್ತಿದ್ದರೆ ಏಳು ಜನ್ಮ ಕಾಲ ಸ್ವರ್ಗ ಸಿಗಬಹುದಿತ್ತು ಎಂದು ಅಮಿತ್ ಷಾ ಹೇಳಿಕೆ ನೀಡಿದ್ದು ಈಗ ವಿವಾದಕ್ಕೆ ತಿರುಗಿದೆ. ಈ ಹೇಳಿಕೆಯ ಬಗ್ಗೆ ದೇಶಾದ್ಯಂತ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಅಂಬೇಡ್ಕರ್ ಹೆಸರು ನಮಗೆ ದೇವರಿಗೆ ಸಮನಾದುದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರೆ, ಹಲವು ನಾಯಕರು ಅಮಿತ್ ಷಾ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Shah's Ambedkar remarks: Opposition launches all-out offensive, seeks HM's  sacking; PM, BJP counter attack - OrissaPOST

Parliament Winter Session Live Updates: Congress VS BJP Showdown Over Amit  Shah's Remark On BR Ambedkar

ಇದರ ಬೆನ್ನಲ್ಲೇ ಅಮಿತ್ ಷಾ ಸುದ್ದಿಗೋಷ್ಟಿ ಕರೆದು ತಾನೇನೂ ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿಲ್ಲ, ನನ್ನ ಹೇಳಿಕೆಯನ್ನು ಕಾಂಗ್ರೆಸಿಗರು ತಿರುಚಿದ್ದಾರೆ, ನನಗೆ ಅಂಬೇಡ್ಕರ್ ಬಗ್ಗೆ ಬಹಳ ಗೌರವ ಇದೆ, ಕಾಂಗ್ರೆಸಿಗರೇ ಅಂಬೇಡ್ಕರ್ ಗೆ ಅವಮಾನ ಮಾಡಿರೋದು ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಕಾಂಗ್ರೆಸ್ ನಾಯಕರು ಸಂಸತ್ ಅಧಿವೇಶನ ಕೊನೆಯಾಗಲು ಒಂದು ದಿನ ಇರುವಾಗಲೇ ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸಿ ಜನರ ಗಮನಸೆಳೆಯುವ ಯತ್ನ ಮಾಡಿದ್ದಾರೆ. ಇದೇ ವೇಳೆ, ಒರಿಸ್ಸಾ ಮೂಲದ ಬಿಜೆಪಿ ಸಂಸದ ಪ್ರತಾಪ ಸಾರಂಗಿ ಮತ್ತು ಮತ್ತೊಬ್ಬ ಬಿಜೆಪಿ ಮುಕೇಶ್ ರಜಪೂತ್ ನೆಲಕ್ಕೆ ಬಿದ್ದು ತಲೆಗೆ ಗಾಯಗೊಂಡಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟ ಬಣದ ಸದಸ್ಯರು ಅಮಿತ್ ಶಾ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಅಂಬೇಡ್ಕರ್ ಅವರಿಗೆ ಅವಮಾನಿಸಿದ ಕಾಂಗ್ರೆಸ್ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಸಂಸದರು ಪ್ರತಿಭಟನೆ ನಡೆಸುತ್ತಿದ್ದರು. ಸಂಸತ್ತಿನ ಮಕರ ದ್ವಾರದ ಬಳಿಗೆ ಎರಡೂ ಕಡೆಯ ಸಂಸದರು ಆಗಮಿಸುತ್ತಿದ್ದಂತೆ ತಳ್ಳಾಟ ನಡೆದಿದ್ದು, ಈ ವೇಳೆ ಬಿಜೆಪಿಯ ಇಬ್ಬರು ಸಂಸದರು ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಪ್ರತಾಪ್ ಸಾರಂಗಿ ಹಣೆಗೆ ಗಾಯವಾಗಿದ್ದು, ಈ ವೇಳೆ ಬೆಂಗಳೂರು ಗ್ರಾಮಾಂತರ ಬಿಜೆಪಿ ಸಂಸದ, ಸ್ವತಃ ವೈದ್ಯರೂ ಆಗಿರುವ ಡಾ.ಸಿ.ಎನ್ ಮಂಜುನಾಥ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

ಇದರ ಬೆನ್ನಲ್ಲೇ ವಿಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೇ ಪ್ರತಾಪ ಸಾರಂಗಿ ಅವರನ್ನು ತಳ್ಳಿದ್ದು, ಇದರಿಂದಾಗಿ ಗಾಯಗೊಂಡಿದ್ದಾರೆಂದು ಬಿಜೆಪಿ ಆರೋಪಿಸಿದೆ. ರಾಹುಲ್ ಗಾಂಧಿ ಅವರು ಪ್ರತಿಭಟನಾ ನಿರತ ಸಂಸದರನ್ನು ತಳ್ಳಿದ್ದು, ಈ ವೇಳೆ ಮುಕೇಶ್ ರಜಪೂತ್ ಮತ್ತು ಪ್ರತಾಪ ಸಾರಂಗಿ ನೆಲಕ್ಕೆ ಬಿದ್ದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ಸಂಸದ ಅನುರಾಗ್ ಠಾಕೂರ್, ಪೊಲೀಸರಿಗೆ ದೂರು ನೀಡಿದ್ದು ರಾಹುಲ್ ಗಾಂಧಿ ವಿರುದ್ಧ ಕೊಲೆಯತ್ನ ಕೇಸು ದಾಖಲಿಸುವಂತೆ ಆಗ್ರಹಿಸಿದ್ದಾರೆ. ಸೆಕ್ಷನ್ 109, 115, 117, 125, 131 ಮತ್ತು 351 ಅಡಿ ಕೇಸು ದಾಖಲಿಸುವಂತೆ ದೂರು ನೀಡಿದ್ದಾರೆ.

Dramatic scenes played out in Parliament today as both the BJP and the Opposition took out protest marches amid the massive row over Union Home Minister Amit Shah's remarks on Dalit icon BR Ambedkar. While the Congress MPs demanded the Home Minister's resignation, BJP leaders said the Congress had humiliated BR Ambedkar and must apologise.