Ajay Bhalla, Arif Khan: ಗಲಭೆ ಪೀಡಿತ ಮಣಿಪುರಕ್ಕೆ ಅಜಯ್ ಭಲ್ಲಾ ರಾಜ್ಯಪಾಲ ; ಕೇರಳದಲ್ಲಿ ವಿವಾದ ಸೃಷ್ಟಿಸಿದ್ದ ಆರಿಫ್ ಮೊಹಮ್ಮದ್ ಖಾನ್ ಬಿಹಾರಕ್ಕೆ ವರ್ಗ 

25-12-24 04:21 pm       HK News Desk   ದೇಶ - ವಿದೇಶ

ಗಲಭೆ ಪೀಡಿತ ಮಣಿಪುರ ಸೇರಿದಂತೆ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಗೆ ರಾಷ್ಟ್ರಪತಿ ಒಪ್ಪಿಗೆ ನೀಡಿದ್ದಾರೆ.

ನವದೆಹಲಿ, ಡಿ.25: ಗಲಭೆ ಪೀಡಿತ ಮಣಿಪುರ ಸೇರಿದಂತೆ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಗೆ ರಾಷ್ಟ್ರಪತಿ ಒಪ್ಪಿಗೆ ನೀಡಿದ್ದಾರೆ. ಕೇರಳ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಬಿಹಾರಕ್ಕೆ ವರ್ಗಾವಣೆ ಮಾಡಲಾಗಿದೆ. 

ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಘರ್ಷಣೆಗೆ ತುತ್ತಾಗಿರುವ ಮಣಿಪುರ ರಾಜ್ಯಪಾಲರಾಗಿ ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರನ್ನು ನೇಮಕ ಮಾಡಲಾಗಿದೆ. ಅಜಯ್‌ ಕುಮಾರ್‌ ಭಲ್ಲಾ 1984ರ ಬ್ಯಾಚಿನ ಅಸ್ಸಾಂ-ಮೇಘಾಲಯ ಕೇಡರ್‌ ಐಎಎಸ್‌ ಅಧಿಕಾರಿಯಾಗಿದ್ದು ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.

ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದ ನಿವೃತ್ತ ಸೇನಾ ಮುಖ್ಯಸ್ಥ ಡಾ.ವಿಜಯ ಕುಮಾರ್‌ ಸಿಂಗ್‌ (ವಿ.ಕೆ.ಸಿಂಗ್‌) ಅವರನ್ನು ಮಿಜೋರಾಂ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಮಿಜೋರಾಂ ರಾಜ್ಯಪಾಲರಾಗಿದ್ದ ಹರಿಬಾಬು ಕಂಭಮ್‌ಪತಿ ಅವರನ್ನು ಒಡಿಶಾ ಗವರ್ನರ್‌ ಆಗಿ ನೇಮಿಸಲಾಗಿದೆ. ಒಡಿಶಾ ರಾಜ್ಯಪಾಲ ರಘುಬರ್‌ ದಾಸ್‌ ತಮ್ಮ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ.

ಕೇರಳ ರಾಜ್ಯಪಾಲರಾಗಿ ತನ್ನ ನಿಷ್ಠುರ ನಡೆಗಳಿಂದ ಹೆಸರು ಗಳಿಸಿದ್ದ ಆರಿಫ್ ಮೊಹಮ್ಮದ್‌ ಖಾನ್‌ ಅವರನ್ನು ಬಿಹಾರ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ಬಿಹಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್‌ ಅರ್ಲೇಕರ್‌ ಅವರನ್ನು ಕೇರಳಕ್ಕೆ ವರ್ಗಾವಣೆ ಮಾಡಲಾಗಿದೆ. ಕೇರಳದಲ್ಲಿ ಎಡರಂಗ ಸರ್ಕಾರದ ಜೊತೆ ಆರಿಫ್ ಮೊಹಮ್ಮದ್ ಖಾನ್ ಜಟಾಪಟಿ ನಡೆಸಿದ್ದರು. ಹೀಗಾಗಿ ಖಾನ್ ವಿರುದ್ಧ ಸಿಎಂ ಪಿಣರಾಯಿ ವಿಜಯನ್ ರಾಷ್ಟ್ರಪತಿಗೆ ದೂರು ನೀಡಿದ್ದರು.

Former Home Secretary Ajay Kumar Bhalla has been appointed as the Governor of Manipur, an official notification said on Tuesday. Bhalla's appointment has come at a time when Manipur is reeling under a resurgence in ethnic violence that has rocked the state since May 2023.