Dr Manmohan Singh, passes away: ಮಾಜಿ ಪ್ರಧಾನಿ, ದೇಶವನ್ನು ಆರ್ಥಿಕ ಉದಾರೀಕರಣದತ್ತ ತೆರೆಸಿಕೊಂಡಿದ್ದ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಇನ್ನಿಲ್ಲ

26-12-24 11:15 pm       HK News Desk   ದೇಶ - ವಿದೇಶ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಅಸ್ವಸ್ಥರಾಗಿದ್ದು ಕೂಡಲೇ ಅವರನ್ನು ಏಮ್ಸ್ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿನ ವೈದ್ಯರು ನಿಧನರಾಗಿರುವ ಬಗ್ಗೆ ಖಚಿತ ಪಡಿಸಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

ನವದೆಹಲಿ, ಡಿ.26: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಅಸ್ವಸ್ಥರಾಗಿದ್ದು ಕೂಡಲೇ ಅವರನ್ನು ಏಮ್ಸ್ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿನ ವೈದ್ಯರು ನಿಧನರಾಗಿರುವ ಬಗ್ಗೆ ಖಚಿತ ಪಡಿಸಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಯುಪಿಎ 1 ಮತ್ತು 2ನೇ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅದಕ್ಕೂ ಮುನ್ನ ಆರ್ಥಿಕ ತಜ್ಞರಾಗಿ ಕೆಲಸ ಮಾಡಿದ್ದರು. ಆರ್ ಬಿಐ ಗವರ್ನರ್ ಆಗಿ, ಹಣಕಾಸು ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಪಂಜಾಬ್ ಮೂಲದ ಮನಮೋಹನ್ ಸಿಂಗ್ 1948ರಲ್ಲಿ ಮೆಟ್ರಿಕ್ಯುಲೇಶನ್ ಪಾಸ್ ಮಾಡಿದ್ದರು. ಆನಂತರ 1957ರಲ್ಲಿ ಲಂಡನ್ನಿನ ಕೇಂಬ್ರಿಜ್ ಯುನಿವರ್ಸಿಟಿಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದರು. ಆನಂತರ ಅಮೆರಿಕದ ಆಕ್ಸ್ ಫರ್ಡ್ ಯುನಿವರ್ಸಿಟಿಯಲ್ಲಿ 1962ರಲ್ಲಿ ಇಕನಾಮಿಕ್ಸ್ ನಲ್ಲಿ ಎಂಫಿಲ್ ಪೂರೈಸಿದ್ದರು.

Manmohan Singh: View: India needs more leaders like Manmohan Singh - The  Economic Times

For Manmohan Singh, the current crisis may be déjà vu

October 1991 :: Finance Minister Dr. Manmohan Singh With MD of  International Monetary Fund, Mr. Michel Camdessu [599X400] : r/IndiaSpeaks

Economic Reforms | World News, Latest and Breaking News, Top International  News Today - Firstpost

Breaking: Former Prime Minister Manmohan Singh Passes Away At 92, Breathes  His last In Delhi AIIMS News24 -

PM Modi Condoles Sudden Demise Of Dr Manmohan Singh, Passes Away At The Age  Of 92

1971ರಲ್ಲಿ ದೇಶದ ಆರ್ಥಿಕ ಸಲಹೆಗಾರರಾಗಿದ್ದ ಅವರು ನಿಧಾನಕ್ಕೆ ಕಾಂಗ್ರೆಸ್ ಜೊತೆಗೆ ಪ್ರಭಾವಿತರಾಗಿದ್ದರು. 1991ರಲ್ಲಿ ರಾಜ್ಯಸಭೆ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದರು. 1998-2004ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದರು. 1991ರಲ್ಲಿ ನರಸಿಂಹ ರಾವ್ ಪ್ರಧಾನಿಯಾಗಿದ್ದಾಗಲೂ ಆರ್ಥಿಕ ಸಚಿವರಾಗಿ ದೇಶ ಜಾಗತೀಕರಣದತ್ತ ತೆರೆದುಕೊಳ್ಳಲು ಪ್ರಮುಖ ಕಾರಣಕರ್ತರಾಗಿದ್ದರು. 2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಿಯಾಗಲ್ಲ ಎಂದು ತಿಳಿಯುತ್ತಿದ್ದಂತೆ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದ ಸಿಂಗ್ ಅವರನ್ನು ಪ್ರಧಾನಿ ಮಾಡಲಾಗಿತ್ತು.

Former Prime Minister and eminent economist Dr Manmohan Singh passed away on Thursday at the age of 92 in Delhi. Dr Singh, who had been admitted to the All India Institute of Medical Sciences (AIIMS) following a deterioration in his health, was receiving treatment in the hospital’s emergency department when the news of his demise broke.