South Korea Flight Crash: ದಕ್ಷಿಣ ಕೊರಿಯಾದಲ್ಲಿ ಮಂಗಳೂರು ಮಾದರಿಯಲ್ಲೇ ಭೀಕರ ವಿಮಾನ ದುರಂತ ; ರನ್ ವೇಯಿಂದ ಹೊರಗೆ ಡಿಕ್ಕಿ, ಬೆಂಕಿ ಹತ್ತಿಕೊಂಡು ಸುಟ್ಟು ಭಸ್ಮ, 179 ಪ್ರಯಾಣಿಕರು ಸಾವು ! 

29-12-24 02:35 pm       HK News Desk   ದೇಶ - ವಿದೇಶ

ಮಂಗಳೂರಿನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಅಪಘಾತದ ಮಾದರಿಯಲ್ಲೇ ದಕ್ಷಿಣ ಕೊರಿಯಾದಲ್ಲಿ ವಿಮಾನ ದುರಂತ ನಡೆದಿದ್ದು, ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 181 ಮಂದಿಯಲ್ಲಿ ಇಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. 

ನವದೆಹಲಿ, ಡಿ.29: ಮಂಗಳೂರಿನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಅಪಘಾತದ ಮಾದರಿಯಲ್ಲೇ ದಕ್ಷಿಣ ಕೊರಿಯಾದಲ್ಲಿ ವಿಮಾನ ದುರಂತ ನಡೆದಿದ್ದು, ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 181 ಮಂದಿಯಲ್ಲಿ ಇಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. 

ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಭೀಕರ ದುರಂತ ಸಂಭವಿಸಿದ್ದು, 181 ಜನ ಪ್ರಯಾಣಿಕರನ್ನು ಹೊಂದಿದ್ದ ವಿಮಾನ ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಹೊರಗೆ ನೆಲಕ್ಕೆ ಡಿಕ್ಕಿಯಾಗಿದ್ದು ಬೆಂಕಿ ಹೊತ್ತಿಕೊಂಡಿದೆ. ವಿಮಾನಕ್ಕೆ ಬೆಂಕಿ ಹತ್ತಿಕೊಂಡು ಸ್ಥಳದಲ್ಲೇ 29 ಮಂದಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ. ಲೇಟೆಸ್ಟ್ ಮಾಹಿತಿ ಪ್ರಕಾರ ಒಂದಿಬ್ಬರನ್ನು ಹೊರತಡುಪಡಿಸಿ ವಿಮಾನದಲ್ಲಿದ್ದ ಬಹುತೇಕ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಏರ್ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

179 Feared Dead, 2 Rescued After Plane Crashes On South Korea Runway

World News | Breaking and Latest World News, International News Headlines –  NDTV.com

Should I Say Last Words?": Flyer's Text To Family Before South Korea Crash

ಜೆಜು ಏರ್ ವಿಮಾನವು ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ವಿಮಾನ ಅಪಘಾತ ಸಂಭವಿಸಿದೆ. ಬ್ಯಾಂಕಾಕ್ ನಿಂದ 181 ಜನರನ್ನು ಹೊತ್ತು ತರುತ್ತಿದ್ದ ಜೆಜು ವಿಮಾನವು ದಕ್ಷಿಣ ಕೊರಿಯಾದ ಮುವಾನ್ ಏರ್ಪೋರ್ಟ್ ನಲ್ಲಿ ತುರ್ತಾಗಿ ಇಳಿಯುತ್ತಿದ್ದಂತೆ ನೆಲಕ್ಕೆ ಬಡಿದು ಬೆಂಕಿ ಹೊತ್ತಿಕೊಂಡಿದೆ. 12 ವರ್ಷಗಳ ಹಿಂದೆ ದುಬೈನಿಂದ ಮಂಗಳೂರು ಏರ್ಪೋರ್ಟ್ ಬರುತ್ತಿದ್ದ ವಿಮಾನವು ರನ್ ವೇಯಿಂದ ಹೊರಗೆ ಗುಡ್ಡಕ್ಕೆ ಬಡಿದು ಎಂಟು ಜನ ಹೊರತುಪಡಿಸಿ ಉಳಿದೆಲ್ಲರೂ ಸಾವನ್ನಪ್ಪಿದ್ದರು.

A somber atmosphere filled with grief loomed over South Korea on Sunday morning as a plane carrying 181 people crashed and burst into flames, likely killing at least 179 of them.