ಬಿಹಾರದಲ್ಲಿ ಸಿಎಂ ನಿತೀಶ್ ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು ; ಮುಖ್ಯಮಂತ್ರಿ ನಿವಾಸಕ್ಕೆ ನುಗ್ಗಲು ಯತ್ನ, ಪೊಲೀಸರ ಲಾಠಿಯೇಟು, ಹಲವರು ಆಸ್ಪತ್ರೆಗೆ 

30-12-24 11:14 pm       HK News Desk   ದೇಶ - ವಿದೇಶ

ಬಿಹಾರದಲ್ಲಿ ಬಿಪಿಎಸ್​ಸಿ (Bihar Public Service Commission) ಪರೀಕ್ಷಾ ಅಭ್ಯರ್ಥಿಗಳು ಮತ್ತು ಸರ್ಕಾರದ ನಡುವಿನ ಜಟಾಪಟಿ ಹಿಂಸಾತ್ಮಕ ರೂಪ ಪಡೆದಿದೆ. ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಅಭ್ಯರ್ಥಿಗಳಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ. ಸರ್ಕಾರದ ನಡೆ ವಿರುದ್ಧ ಸೋಮವಾರ ಬಿಹಾರ ಬಂದ್​ ನಡೆಸಲಾಗಿದ್ದು ಹಲವೆಡೆ ಹೋರಾಟಗಾರರು ಮತ್ತು ಪೊಲೀಸರ ನಡುವೆ ಜಟಾಪಟಿಯಾಗಿದೆ. 

ಪಾಟ್ನಾ, ಡಿ.30: ಬಿಹಾರದಲ್ಲಿ ಬಿಪಿಎಸ್​ಸಿ (Bihar Public Service Commission) ಪರೀಕ್ಷಾ ಅಭ್ಯರ್ಥಿಗಳು ಮತ್ತು ಸರ್ಕಾರದ ನಡುವಿನ ಜಟಾಪಟಿ ಹಿಂಸಾತ್ಮಕ ರೂಪ ಪಡೆದಿದೆ. ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಅಭ್ಯರ್ಥಿಗಳಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ. ಸರ್ಕಾರದ ನಡೆ ವಿರುದ್ಧ ಸೋಮವಾರ ಬಿಹಾರ ಬಂದ್​ ನಡೆಸಲಾಗಿದ್ದು ಹಲವೆಡೆ ಹೋರಾಟಗಾರರು ಮತ್ತು ಪೊಲೀಸರ ನಡುವೆ ಜಟಾಪಟಿಯಾಗಿದೆ. 

ಹಲವು ದಿನಗಳಿಂದ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಪಿಎಸ್​ಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರೊಂದಿಗೆ ಮಾತುಕತೆಗೂ ಪ್ರಯತ್ನಿಸಿದ್ದರು. ನಿತೀಶ್‌ ಕುಮಾರ್‌ ಭೇಟಿ ಸಾಧ್ಯವಿಲ್ಲ ಎಂದಿದ್ದು ವಿದ್ಯಾರ್ಥಿಗಳು ಮುಖ್ಯಮಂತ್ರಿ ಮನೆ ಮುತ್ತಿಗೆಗೆ ಮುಂದಾಗಿದ್ದಾರೆ. ಈ ವೇಳೆ ಬ್ಯಾರಿಕೇಡ್‌ಗಳನ್ನಿಟ್ಟು ತಡೆಯಲು ಪೊಲೀಸರು ಮುಂದಾಗಿದ್ದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಬ್ಯಾರಿಕೇಡ್​ ಚೆಲ್ಲಾಪಿಲ್ಲಿಯಾದವು. 

Bihar civil service aspirants seek re-exam, face lathi-charge; FIR against  Prashant Kishor | Latest News India - Hindustan Times

Bihar civil service aspirants seek re-exam in big protest, lathi-charged by  cops

Patna BPSC protest: Bihar civil service aspirants seek re-exam, clash with  cops, break barricades - India Today

ವಿದ್ಯಾರ್ಥಿಗಳು ಬ್ಯಾರಿಕೇಡ್‌ ಕಿತ್ತೆಸೆದು ನಿತೀಶ್‌ ಕುಮಾರ್‌ ನಿವಾಸಕ್ಕೆ ನುಗ್ಗಲು ಮುಂದಾಗಿದ್ದರಿಂದ ಪೊಲೀಸರು ಬಲಪ್ರಯೋಗ ಮಾಡಿದ್ದು ಜಲಫಿರಂಗಿ ಬಳಸಿ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದ್ದಾರೆ. ಜಲಫಿರಂಗಿಯನ್ನು ಲೆಕ್ಕಿಸದೇ ಪ್ರತಿಭಟನೆಗೆ ನುಗ್ಗಿ ಬಂದಾಗ ಲಾಠಿ ಚಾರ್ಜ್‌ ಮಾಡಿದ್ದಾರೆ. ಪೊಲೀಸರ ಲಾಠಿ ಚಾರ್ಜ್‌ನಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

Bihar Police on Sunday used water cannons and resorted to lathi charge to disperse hundreds of civil service aspirants, who have been demanding re-examination of Bihar Public Service Commission prelims, when some of them tried to break through barricades set up to stop them from going towards the Chief Minister’s residence in Patna.