ಕೊರಿಯಾ ಬಳಿಕ ಮತ್ತೊಂದು ಭೀಕರ ದುರಂತ ; ಆಫ್ರಿಕಾದಲ್ಲಿ ಟ್ರಕ್ ನದಿಗೆ ಬಿದ್ದು 60 ಮಂದಿ ಜಲಸಮಾಧಿ, ಮದುವೆಗೆ ಹೊರಟವರು ಮಸಣಕ್ಕೆ ! 

31-12-24 11:57 am       HK News Desk   ದೇಶ - ವಿದೇಶ

ಕಜಖಸ್ಥಾನ, ದಕ್ಷಿಣ ಕೊರಿಯಾದಲ್ಲಿನ ವಿಮಾನ ಪತನದ ಬಳಿಕ ಆಫ್ರಿಕಾದ ಪೂರ್ವ ರಾಷ್ಟ್ರ ಇಥಿಯೊಫಿಯಾದಲ್ಲಿ ಭೀಕರ ದುರಂತ ಸಂಭವಿಸಿದ್ದು, 60 ಜನರು ಮೃತರಾಗಿದ್ದಾರೆ.

ಅದೀಸ್ ಅಬಾಬಾ, ಡಿ 31: ಕಜಖಸ್ಥಾನ, ದಕ್ಷಿಣ ಕೊರಿಯಾದಲ್ಲಿನ ವಿಮಾನ ಪತನದ ಬಳಿಕ ಆಫ್ರಿಕಾದ ಪೂರ್ವ ರಾಷ್ಟ್ರ ಇಥಿಯೊಫಿಯಾದಲ್ಲಿ ಭೀಕರ ದುರಂತ ಸಂಭವಿಸಿದ್ದು, 60 ಜನರು ಮೃತರಾಗಿದ್ದಾರೆ.

ಪ್ರಯಾಣಿಕರಿಂದ ತುಂಬಿದ್ದ ಟ್ರಕ್ ನದಿಗೆ ಉರುಳಿದ ಪರಿಣಾಮ 60 ಜನರು ಜಲಸಮಾಧಿಯಾಗಿದ್ದಾರೆ. ದಕ್ಷಿಣ ಸೀದಾಮಾ ಎಂಬಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಸ್ಥಳೀಯ ಮಾಧ್ಯಮ ಸಂಸ್ಥೆಯ ವರದಿ ಪ್ರಕಾರ, ಭಾನುವಾರ ರಾತ್ರಿ  ಈ ಘಟನೆ ನಡೆದಿದೆ. ಗಾಯಾಳುಗಳನ್ನು ಬೋನಾ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಸರ್ಕಾರಿ ಸ್ವಾಮ್ಯದ ಇಥಿಯೋಪಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್(EBC) ವರದಿ ಪ್ರಕಾರ್, ಟ್ರಕ್‌ನಲ್ಲಿದ್ದ ಎಲ್ಲ ಜನರು ಮದುವೆ ಸಂಭ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಕೆಟ್ಟ ರಸ್ತೆಗಳಿಂದಾಗಿ ಇಥಿಯೊಫಿಯಾದಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸುತ್ತಿರುತ್ತವೆ. ಚಾಲಕನ ನಿರ್ಲಕ್ಷ್ಯ ಮತ್ತು ವಾಹನದ ದುರಸ್ತಿಯಿಂದಾಗಿ ಈ ಅಪಘಾತ ಸಂಭವಿಸಿದೆ. ನದಿ ಪಕ್ಕದಲ್ಲಿದ್ರೂ ರಸ್ತೆ ಬದಿ ಯಾವುದೇ ರೀತಿಯ ತಡೆಗೋಡೆ ಸಹ ನಿರ್ಮಿಸಿರಲಿಲ್ಲ. ರಸ್ತೆಯಲ್ಲಿ ಯಾವುದೇ ಸುರಕ್ಷಾ ಕ್ರಮಗಳು ಸಹ ಇರಲಿಲ್ಲ. 

ಇ.ಬಿ.ಸಿ ವರದಿ ಪ್ರಕಾರ, ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ನದಿಗೆ ಉರುಳಿದೆ.  ನದಿಯಲ್ಲಿ ಶೋಧ ಕಾರ್ಯ ಇನ್ನೂ ಮುಂದುವರಿದಿದೆ. ಸದ್ಯದ ಮಾಹಿತಿ ಪ್ರಕಾರ 60 ಜನರು ಮೃತರಾಗಿರೋದು ಖಚಿತಯವಾಗಿದೆ. ಆದ್ರೆ ಟ್ರಕ್‌ನಲ್ಲಿ ಎಷ್ಟು ಜನರು ಪ್ರಯಾಣಿಸುತ್ತಿದ್ದರು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯ ಮುಂದುವರಿದಿದೆ.

2018ರಲ್ಲಿ ಇಂತಹುವುದೇ ದೊಡ್ಡ ಭೀಕರ ದುರಂತವೊಂದು ನಡೆದಿತ್ತು. ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ವಾಹನ, ಆಳವಾದ ಕಣಿವೆಗೆ ಬಿದ್ದ ಪರಿಣಾಮ 38 ಜನರು ಮೃತರಾಗಿದ್ದರು.

At least 71 people have died in southern Ethiopia after a lorry plunged into a river, officials say The vehicle, which was travelling through Sidama state on Sunday, fell into the river after it missed a bridge, a local official told the Reuters news agency.