ಅಮೆರಿಕದಲ್ಲಿ ಭೀಕರ ಅಪಘಾತ ;  ನ್ಯೂ ಇಯರ್ ಸಂಭ್ರಮದಲ್ಲಿದ್ದ ಜನರ ಗುಂಪಿನ ಮೇಲೆ ಟ್ರಕ್ ರೋಪದಲ್ಲಿ ಬಂದ ಜವರಾಯ ; 15 ಮಂದಿ ಬಲಿ,  30ಕ್ಕೂ ಹೆಚ್ಚು ಜನರಿಗೆ ಗಾಯ, ಉಗ್ರರ ದಾಳಿ ಶಂಕೆ ! 

02-01-25 12:02 pm       HK News Desk   ದೇಶ - ವಿದೇಶ

ಇಲ್ಲಿನ ಬೌರ್ಬನ್​​​ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮದಲ್ಲಿದ್ದ ಜನರ ಗುಂಪಿನ ಮೇಲೆ ಟ್ರಕ್ ಹರಿದು 15 ಜನ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಮೆರಿಕ, ಜ 02: ಇಲ್ಲಿನ ಬೌರ್ಬನ್​​​ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮದಲ್ಲಿದ್ದ ಜನರ ಗುಂಪಿನ ಮೇಲೆ ಟ್ರಕ್ ಹರಿದು 15 ಜನ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಜನರ ಮೇಲೆ ನುಗ್ಗಿದ ವಾಹನದ ಮೇಲೆ ಇಸ್ಲಾಮಿಕ್​ ಸ್ಟೇಟ್(ಐಎಸ್)​ ಭಯೋತ್ಪಾದಕ ಸಂಘಟನೆಯ ಧ್ವಜ ಕಂಡುಬಂದಿದ್ದು, ಎಫ್​ಬಿಐ ತನಿಖೆ ಚುರುಕುಗೊಳಿಸಿದೆ. ಘಟನೆಯ ಹಿಂದೆ ಯಾವುದಾದರೂ ಭಯೋತ್ಪಾದಕ ಗುಂಪಿನ ಕೈವಾಡವಿದೆಯೇ ಎಂಬ ಕುರಿತು ತನಿಖೆ ತೀವ್ರಗೊಳಿಸಿದೆ.

At least 15 dead as a truck rams a New Year's crowd in New Orleans | In  Pictures News | Al Jazeera

At least 15 killed in New Orleans truck attack linked to ISIL

ಇದುವರೆಗೂ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ. ಸುಧಾರಿತ ಸಾಧನ, ಕಂಟ್ರಿ ಬಾಂಬ್‌ಗಳು ವಾಹನದಲ್ಲಿ ಪತ್ತೆಯಾಗಿವೆ. ವಾಹನದಲ್ಲಿ ಚಾಲಕ ಮಾತ್ರ ಇದ್ದ ಎಂದು FBI ಮಾಹಿತಿ ನೀಡಿದೆ.

ಫ್ರೆಂಚ್ ಕ್ವಾರ್ಟನ್​ನ ಆರ್ಲಿನ್ಸ್​​ನ ಐತಿಹಾಸಿಕ ಕೇಂದ್ರದ ಸಮೀಪ ಹೊಸ ವರ್ಷ 2025ರ ಸಂಭ್ರಮಾಚರಣೆಯಲ್ಲಿದ್ದ ಸಂದರ್ಭದಲ್ಲಿ ಬೆಳಗಿನ ಜಾವ ಸುಮಾರು 3 ಗಂಟೆಗೆ ಘಟನೆ ನಡೆದಿದೆ. ಓಪನ್​ ಏರ್​ ಕನ್ಸರ್ಟ್​ನಲ್ಲಿ ಸೇರಿದ್ದ ಜನರ ಮೇಲೆ ವಾಹನ ಹರಿದಿದೆ. 'ಆಲ್‌ಸ್ಟೇಟ್ ಶುಗರ್ ಬೌಲ್‌'ಗಾಗಿ ನಗರಕ್ಕೆ ಬರುತ್ತಿದ್ದ ಕಾಲೇಜು ಫುಟ್‌ಬಾಲ್ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಶುಗರ್​ ಬೌಲ್​ ಅಮೆರಿಕದೆಲ್ಲೆಡೆ ನಡೆಯುವ ವಾರ್ಷಿಕ ಕಾಲೇಜು​ ಫುಟ್ಬಾಲ್​ ಆಟವಾಗಿದೆ.

Texas man kills 15 on New Orleans' Bourbon Street after driving truck with  ISIS flag through crowd

At least 15 killed in New Orleans after driver intentionally rams into crowd  on Bourbon Street | CNN

At least 15 killed on Bourbon Street in New Orleans after driver  intentionally slams truck into crowd; dozens injured - CBS News

ಆರ್ಲೆನ್ಸ್​ ಪೊಲೀಸ್​ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿ, "ಸಂಭ್ರಮಾಚಾರಣೆಗಾಗಿ ನಾವು ಶೇ 100ರಷ್ಟು ಸಿಬ್ಬಂದಿಗಳನ್ನು ನಿಯೋಜಿಸಿದ್ದೆವು. ಇನ್ನೂ ಹೆಚ್ಚುವರಿಯಾಗಿ 300ಕ್ಕೂ ಹೆಚ್ಚು ಅಧಿಕಾರಿಗಳನ್ನು ಕಾನೂನು ಜಾರಿ ಸಂಸ್ಥೆಯಿಂದ ಎರವಲು ಪಡೆದಿದ್ದೆವು" ಎಂದು ತಿಳಿಸಿರುವುದಾಗಿ ಸಿಎನ್​ಎನ್​ ವರದಿ ಮಾಡಿದೆ.

ನಗರದೆಲ್ಲೆಡೆ ಸ್ಥಳೀಯ, ರಾಜ್ಯ ಮತ್ತು ಫೆಡರಲ್​ ಸಹಭಾಗಿತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಪೊಲೀಸ್​ ವಾಹನಗಳ ಜೊತೆಗೆ ಕಾಲ್ನಡಿಗೆ, ಬೈಕ್​ ಹಾಗೂ ಕುದುರೆಗಳ ಮೇಲೆಯೂ ಕೂಡ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ನಡುವೆಯೂ ಘಟನೆ ಸಂಭವಿಸಿದೆ.

'ಎಕ್ಸ್'​ ಜಾಲತಾಣದ ಮೂಲಕ ಸಾರ್ವಜನಿಕರಿಗೆ ನ್ಯೂ ಆರ್ಲಿನ್​​ ತುರ್ತು ಸಿದ್ಧತಾ ಪ್ರಚಾರ(ಎನ್​ಒಎಲ್​ಎ) ಸಂದೇಶ ರವಾನಿಸಿ, "ಕ್ಯಾನೆಲ್​ ಮತ್ತು ಬೌರ್ಬನ್​ ಸ್ಟ್ರೀಟ್​ನಲ್ಲಿ ಸಾಮೂಹಿಕ ಅಪಾಯದ ಘಟನೆ ಸಂಭವಿಸಿದೆ. ಈ ಪ್ರದೇಶದಿಂದ ದೂರವಿರಿ" ಎಂದು ಎಚ್ಚರಿಸಿದೆ.

Authorities are looking for any connections, associations or co-conspirators who might be linked to the man who intentionally drove a pickup truck into a crowd of New Year’s revelers in the Bourbon Street area of New Orleans early Wednesday, President Joe Biden said late Wednesday evening.