ಬ್ರೇಕಿಂಗ್ ನ್ಯೂಸ್
04-01-25 06:01 pm HK News Desk ದೇಶ - ವಿದೇಶ
ರಾಯ್ ಪುರ, ಜ.4: ಛತ್ತೀಸ್ಗಢ ರಾಜ್ಯದ ಬಸ್ತಾರ್ ನಲ್ಲಿ ಯುವ ಪತ್ರಕರ್ತರೊಬ್ಬರನ್ನು ಕೊಲೆ ಮಾಡಲಾಗಿದ್ದು, ಘಟನೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಹೊಸ ವರ್ಷದ ಜನವರಿ 1ರಂದೇ ಮುಕೇಶ್ ಚಂದ್ರಾಕರ್ (28) ಎಂಬ ಪತ್ರಕರ್ತ ನಾಪತ್ತೆಯಾಗಿದ್ದು, ಎರಡು ದಿನಗಳ ಬಳಿಕ ಗುತ್ತಿಗೆದಾರನ ಮನೆಯ ಸೆಪ್ಟಿ ಟ್ಯಾಂಕಿನಲ್ಲಿ ಶವ ಪತ್ತೆಯಾಗಿದೆ.
ಮುಕೇಶ್ ಚಂದ್ರಾಕರ್ ಫ್ರೀಲ್ಯಾನ್ಸ್ ಪತ್ರಕರ್ತನಾಗಿದ್ದು, ಬಸ್ತಾರ್ ವಿಭಾಗದಿಂದ ಎನ್ ಡಿಟಿವಿಗೆ ವರದಿ ಮಾಡುತ್ತಿದ್ದರು. ಅಲ್ಲದೆ, ಸ್ಥಳೀಯವಾಗಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರು. ಜನವರಿ 1ರಂದು ಸ್ಥಳೀಯ ಗುತ್ತಿಗೆದಾರನೊಬ್ಬನ ಸೋದರ ಕರೆ ಮಾಡಿದ್ದು, ಮಾತನಾಡಲಿಕ್ಕಿದೆ ಎಂದು ಹೇಳಿ ಬರಹೇಳಿದ್ದ. ಈ ಬಗ್ಗೆ ರಾಯ್ ಪುರದ ಇನ್ನೊಬ್ಬ ಪತ್ರಕರ್ತರಲ್ಲಿ ಮುಕೇಶ್ ಹೇಳಿಕೊಂಡಿದ್ದರು. ಅದೇ ದಿನ ರಾತ್ರಿ ಮುಕೇಶ್ ಫೋನ್ ಸ್ವಿಚ್ ಆಫ್ ಆಗಿತ್ತು.
ಈ ಬಗ್ಗೆ ಜನವರಿ 2ರಂದು ಸೋದರ ಯುಕೇಶ್, ಮುಕೇಶ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ದೂರು ನೀಡಿದ್ದರು. ಪೊಲೀಸರು ಮೊಬೈಲ್ ಲೊಕೇಶನ್ ನೋಡಿದಾಗ, ಚತ್ತನ್ ಪಾರ ಬಸ್ತಿ ಎಂಬಲ್ಲಿನ ಸುರೇಶ್ ಚಂದಾಕರ್ ಎಂಬ ಗುತ್ತಿಗೆದಾರನ ಮನೆಯ ಬಳಿ ತೋರಿಸಿತ್ತು. ಅಲ್ಲಿಯೇ ಪರಿಶೀಲನೆ ನಡೆಸಿದಾಗ, ಇತ್ತೀಚೆಗಷ್ಟೇ ಕಾಂಕ್ರೀಟ್ ಮಾಡಲಾಗಿದ್ದ ಸೆಪ್ಟಿ ಟ್ಯಾಂಕ್ ಬಗ್ಗೆ ಶಂಕೆ ಉಂಟಾಗಿ ಅದನ್ನು ಅಗೆದು ನೋಡಿದಾಗ ಅಡಿಭಾಗದಲ್ಲಿ ಮುಕೇಶ್ ಚಂದ್ರಾಕರ್ ಶವ ಪತ್ತೆಯಾಗಿದೆ. ಶವದ ಬೆನ್ನು, ಕುತ್ತಿಗೆ, ತಲೆಗೆ ಹೊಡೆದು ಹಾಕಿದ ಗುರುತುಗಳಿವೆ.
ಗುತ್ತಿಗೆದಾರ ಸುರೇಶ್ ಚಂದಾಕರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇತ್ತೀಚೆಗೆ ಮುಕೇಶ್ ವರದಿ ಮಾಡಿದ ಯಾವುದಾದ್ರೂ ವಿಚಾರಕ್ಕೆ ಕೊಲೆ ನಡೆದಿದೆಯಾ ಎನ್ನುವ ಬಗ್ಗೆ ತನಿಖೆ ನಡೆಸಲಾಗಿದೆ. 2021ರಲ್ಲಿ ಸಿಆರ್ ಪಿಎಫ್ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮಾನಸ್ ಅವರನ್ನು ಮಾವೋವಾದಿಗಳು ಅಪಹರಿಸಿದ ಪ್ರಕರಣ ಪತ್ತೆ ಹಚ್ಚಲು ಮುಕೇಶ್ ಚಂದಾಕರ್ ಸಹಾಯ ಮಾಡಿದ್ದರು. ಈ ಕಾರಣಕ್ಕಾಗಿ ಸಿಆರ್ ಪಿಎಫ್ ಮುಕೇಶ್ ಅವರನ್ನು ಗುರುತಿಸಿ ಗೌರವಿಸಿತ್ತು.
ಘಟನೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಸಿಎಂ ವಿಷ್ಣುದೇವ್ ಸಾಯಿ, ಆರೋಪಿಗಳನ್ನು ಹಿಡಿದು ಶೀಘ್ರದಲ್ಲೇ ಜೈಲಿಗೆ ಹಾಕುತ್ತೇವೆ. ಯಾವುದೇ ಕಾರಣಕ್ಕೂ ಆರೋಪಿಗಳ ಬಗ್ಗೆ ದಯೆ ತೋರುವುದಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಎಷ್ಟೇ ಪ್ರಬಲರಿದ್ದರೂ ಬಂಧಿಸಿ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
Chhattisgarh Police on Saturday arrested three persons in connection with the killing of a well-known journalist, who went missing on New Year’s Day and was found murdered in a septic tank of a road contractor in Bijapur district.
06-01-25 06:53 pm
HK News Desk
Bangalore Suicide, Software engineer family:...
06-01-25 02:03 pm
HMPV virus Karnataka, Guidelines: ಹೆಚ್ಎಂಪಿವ...
06-01-25 01:39 pm
ಬೆಂಗಳೂರಿನಲ್ಲಿ ಎರಡು ಶಿಶುಗಳಲ್ಲಿ ಎಚ್ಎಂಪಿವಿ ವೈರಸ್...
06-01-25 01:04 pm
Bangalore News, IIM College Bangalore: ಹಾಸ್ಟೆ...
06-01-25 01:01 pm
05-01-25 09:41 pm
HK News Desk
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
06-01-25 03:59 pm
Mangalore Correspondent
Mangalore, Kotekar Samaja Seva Sahakari Sangh...
05-01-25 10:51 pm
Dr Na DSouza passes, Death, Mangalore: ಖ್ಯಾತ...
05-01-25 10:16 pm
Mangalore MP Brijesh Chowta, Rajnath Singh: ರ...
05-01-25 02:13 pm
Mangalore MCC Anand CL, Abdul Rauf: ಮಹಾನಗರ ಪಾ...
04-01-25 09:49 pm
06-01-25 05:37 pm
HK News Desk
Mangalore Robbery, Singari Beedi owner, Crime...
04-01-25 11:31 am
Madhugiri DySP Ramachandrappa Arrest, Video:...
03-01-25 11:02 pm
Sri Bhagavathi Co Operative Bank fraud, Manga...
03-01-25 09:26 pm
Belagavi Murder, Crime; ಕುಡಿಯಲು ಹಣಕ್ಕಾಗಿ ಪೀಡಿ...
02-01-25 11:00 pm