ಬ್ರೇಕಿಂಗ್ ನ್ಯೂಸ್
05-01-25 09:41 pm HK News Desk ದೇಶ - ವಿದೇಶ
ಕೊಲ್ಲಾಪುರ, ಜ.5: ಹಾರ್ಟ್ ಅಟ್ಯಾಕ್ ನಿಂದ ಸತ್ತಿದ್ದಾರೆಂದು ತಿಳಿದು 65 ವರ್ಷದ ವೃದ್ಧ ವ್ಯಕ್ತಿಯನ್ನು ಸಂಬಂಧಿಕರು ಆಂಬುಲೆನ್ಸ್ ನಲ್ಲಿ ಅಂತ್ಯಕ್ರಿಯೆಗೆಂದು ಒಯ್ಯುತ್ತಿದ್ದರು. ಮನೆಯಲ್ಲಿ ಸಂಬಂಧಿಕರು ಸೇರಿ ಅಂತ್ಯಕ್ರಿಯೆಗೆ ಸಿದ್ಧತೆಯನ್ನೂ ನಡೆಸಿದ್ದರು. ಆದರೆ, ಅಷ್ಟರಲ್ಲಿಯೇ ಆಂಬುಲೆನ್ಸ್ ಹಂಪ್ ನಲ್ಲಿ ಸಾಗುತ್ತಿದ್ದಾಗ ಸತ್ತಿದ್ದಾನೆಂದು ತಿಳಿದಿದ್ದ ವ್ಯಕ್ತಿಯೊಬ್ಬರು ಜೀವ ಪಡೆದ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ.
65 ವರ್ಷದ ಪಾಂಡುರಂಗ ಉಲ್ಪೆ ಸತ್ತು ಬದುಕಿದ ವ್ಯಕ್ತಿ. ಆಂಬುಲೆನ್ಸ್ ನಲ್ಲಿ ಸಾಗುತ್ತಿದ್ದಂತೆ ಸತ್ತಿದ್ದ ವ್ಯಕ್ತಿಯ ಬೆರಳುಗಳು ಚಲನೆ ಪಡೆದಿದ್ದವು. ಜೊತೆಗಿದ್ದ ಸಂಬಂಧಿಕರು ವ್ಯಕ್ತಿಯ ಕೈಬೆರಳು ಚಲನೆ ಆಗಿದ್ದನ್ನು ತಿಳಿದು ಕೈ ಮಣಿಗಂಟನ್ನು ಹಿಡಿದು ರಕ್ತ ಚಲನೆ ಇದೆಯಾ ಎಂದು ಪರಿಶೀಲಿಸಿದ್ದಾರೆ. ರಕ್ತ ಪರಿಚಲನೆ ಇರುವುದನ್ನು ತಿಳಿದು ಕೂಡಲೇ ಆಂಬುಲೆನ್ಸ್ ಅನ್ನು ಮತ್ತೊಂದು ಖಾಸಗಿ ಆಸ್ಪತ್ರೆ ಕಡೆಗೆ ಚಲಾಯಿಸಿದ್ದಾರೆ.
ಹೌದು.. ಇಂಥದ್ದೊಂದು ವಿದ್ಯಮಾನ ಕೊಲ್ಲಾಪುರದಲ್ಲಿ ನಡೆದಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಡಿ.16ರಂದು ತೋಟಕ್ಕೆ ಹೋಗಿದ್ದ ಪಾಂಡುರಂಗ ಅವರಿಗೆ ಅಲ್ಲಿಂದ ಮರಳುತ್ತಿದ್ದಂತೆ ರಕ್ತ ವಾಂತಿಯಾಗಿತ್ತು. ಆನಂತರ, ನಡೆಯುವುದಕ್ಕಾಗದೆ ಕುಸಿದು ಬಿದ್ದಿದ್ದರು. ಪಾಂಡುರಂಗ ಅವರನ್ನು ಮೊಮ್ಮಗ ರಮಣ್ ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಹೃದಯಾಘಾತವಾಗಿರುವ ಬಗ್ಗೆ ತಿಳಿಸಿದ್ದು, ಚಿಕಿತ್ಸೆ ನೀಡಿದ್ದಾರೆ. ಆದರೆ ಪಾಂಡುರಂಗ ಅವರಿಗೆ ರಕ್ತವಾಂತಿಯಾಗಿದ್ದು, ವೈದ್ಯರು ಇಸಿಜಿ ಮಾಡಿದ ಬಳಿಕ, ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ನಾವು ಕೈಲಾದ ಪ್ರಯತ್ನವನ್ನು ಮಾಡಿದ್ದು ಜೀವ ಉಳಿಸುವುದು ಸಾಧ್ಯವಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾಗಿ ರಮಣ್ ತಿಳಿಸಿದ್ದಾರೆ.
ಇದರಂತೆ, ಪಾಂಡುರಂಗ ಅವರು ಸತ್ತಿದ್ದಾಗಿ ಸಂಬಂಧಿಕರಿಗೆ ತಿಳಿಸಿದ್ದಲ್ಲದೆ, ಅಲ್ಲಿನ ಆಸ್ಪತ್ರೆಯ ಬಿಲ್ ಪಾವತಿಸಿ ಮನೆಯ ಕಡೆಗೆ ಆಂಬುಲೆನ್ಸ್ ನಲ್ಲಿ ಒಯ್ಯುತ್ತಿದ್ದೆವು. ಮನೆಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆಯನ್ನೂ ನಡೆಸುವಂತೆ ತಿಳಿಸಿದ್ದೆವು. ಆಂಬುಲೆನ್ಸ್ ಕೊಲ್ಲಾಪುರದ ಕಸ್ಬಾ ಗ್ರಾಮದ ಚೌಗುಲೆ ಹಳ್ಳಿಯಲ್ಲಿ ಎದುರಾಗಿದ್ದ ಸ್ಪೀಡ್ ಬ್ರೇಕರ್ ಹಂಪ್ಸ್ ನಲ್ಲಿ ಮೇಲೆ ಕೆಳಗೆ ಸಾಗುತ್ತಿದ್ದಂತೆ ಪಾಂಡುರಂಗ ಅವರಿಗೆ ಎಚ್ಚರ ಆದಂತಾಗಿದೆ.
ಪಾಂಡುರಂಗ ಅವರ ಬೆರಳುಗಳು ಚಲನೆ ಮತ್ತು ಕೈಯಲ್ಲಿ ಪಲ್ಸ್ ಇರುವುದನ್ನು ತಿಳಿದು ಕೂಡಲೇ ಅವರನ್ನು ಸಿಪಿಆರ್ ಆಸ್ಪತ್ರೆಗೆ ಒಯ್ಯಲಾಗಿತ್ತು. ಅಲ್ಲಿ ಬೆಡ್ ಇಲ್ಲದಿರುವುದನ್ನು ತಿಳಿದು ಆಂಬುಲೆನ್ಸ್ ಅನ್ನು ನೇರವಾಗಿ ಡಿವೈ ಪಾಟೀಲ್ ಆಸ್ಪತ್ರೆ ಕಡೆಗೆ ತಿರುಗಿಸಲಾಗಿತ್ತು. ಸೀರಿಯಸ್ ಆಗಿದ್ದ ಪಾಂಡುರಂಗ ಅವರನ್ನು ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ನಲ್ಲಿ ಇಡಲಾಯಿತು. ಇಸಿಜಿ ಮತ್ತು ಆಂಜಿಯೋ ಪ್ಲಾಸ್ಟಿಯನ್ನೂ ಮಾಡಲಾಯಿತು. ಎರಡು ದಿನಗಳಲ್ಲಿ ಚೇತರಿಕೆ ಆಗಿದ್ದು, ಡಿ.30ರಂದು ಪಾಂಡುರಂಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪಾಂಡುರಂಗ ಅವರು ಮನೆ ಕಡೆಗೆ ನಡೆದು ಹೋಗಿದ್ದನ್ನು ಮತ್ತು ರಮಣ್ ಅವರ ಹೇಳಿಕೆಯನ್ನು ಸ್ಥಳೀಯ ಟಿವಿ ವಾಹಿನಿಗಳು ಪ್ರಕಟಿಸಿದ್ದು, ಅಚ್ಚರಿ ಸುದ್ದಿ ಎಂಬಂತೆ ಪ್ರಸಾರ ಮಾಡಿವೆ. ಆದರೆ ಯಾವ ಆಸ್ಪತ್ರೆ ವೈದ್ಯರು ಸಾವನ್ನಪ್ಪಿದ್ದಾಗಿ ಹೇಳಿದ್ದರು ಎನ್ನುವುದನ್ನು ರಮಣ್ ಮಾಧ್ಯಮಕ್ಕೆ ಹೇಳಿಕೊಂಡಿಲ್ಲ.
ಸತ್ತ ವ್ಯಕ್ತಿ ಬದುಕಿ ಬಂದ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಕೊಲ್ಲಾಪುರ ಮುನ್ಸಿಪಲ್ ಕಾರ್ಪೊರೇಶನ್ ಅಧಿಕಾರಿಗಳು, ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಸರಿಯಾಗಿ ತಪಾಸಣೆ ಮಾಡದೆ ವ್ಯಕ್ತಿಯನ್ನು ಸತ್ತಿದ್ದಾಗಿ ಘೋಷಣೆ ಮಾಡುವಂತಿಲ್ಲ. ನಾವು ಈ ಬಗ್ಗೆ ತನಿಖೆ ಮಾಡಲಿದ್ದೇವೆ ಎಂದು ನಗರ ಪಾಲಿಕೆಯ ಆರೋಗ್ಯಾಧಿಕಾರಿ ಹೇಳಿದ್ದಾರೆ.
Pandurang Ulpe's family couldn't believe what they had just seen. They were on their way to cremate the 65-year-old when the ambulance they were in went over a speed bump and his fingers began to move.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm