ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ ಏಕಾದಶಿಗೆ ಟೋಕನ್ ಪಡೆಯಲು ನೂಕುನುಗ್ಗಲು, ಮೃತ ಐವರು ಮಹಿಳೆಯರಲ್ಲಿ ಬಳ್ಳಾರಿ ಮೂಲದ ಒಬ್ಬರು 

09-01-25 11:22 am       HK News Desk   ದೇಶ - ವಿದೇಶ

ವಿಶ್ವ ಪ್ರಸಿದ್ಧ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಕಾಲ್ತುಳಿತ ಸಂಭವಿಸಿದ್ದು ಏಳು ಮಂದಿ ದುರಂತ ಸಾವಿಗೀಡಾಗಿದ್ದಾರೆ‌. ಸುಮಾರು 48 ಮಂದಿ ಗಾಯಗೊಂಡಿದ್ದು ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರಲ್ಲಿ ಓರ್ವರನ್ನು ಕರ್ನಾಟಕದ ಬಳ್ಳಾರಿ ಮೂಲದ ಮಹಿಳೆ ಎಂದು ಗುರುತಿಸಲಾಗಿದೆ.

ತಿರುಪತಿ, ಜ.9: ವಿಶ್ವ ಪ್ರಸಿದ್ಧ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಕಾಲ್ತುಳಿತ ಸಂಭವಿಸಿದ್ದು ಏಳು ಮಂದಿ ದುರಂತ ಸಾವಿಗೀಡಾಗಿದ್ದಾರೆ‌. ಸುಮಾರು 48 ಮಂದಿ ಗಾಯಗೊಂಡಿದ್ದು ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರಲ್ಲಿ ಓರ್ವರನ್ನು ಕರ್ನಾಟಕದ ಬಳ್ಳಾರಿ ಮೂಲದ ಮಹಿಳೆ ಎಂದು ಗುರುತಿಸಲಾಗಿದೆ.

ಬಳ್ಳಾರಿ ಮೂಲದ ನಿರ್ಮಲಾ (50), ವೈಜಾಗ್‌ ಜಿಲ್ಲೆಯ ನಿವಾಸಿಗಳಾದ ರಜನಿ (47), ಲಾವಣ್ಯ (40), ಶಾಂತಿ (30), ತಮಿಳುನಾಡು ಸೇಲಂ ಜಿಲ್ಲೆಯ ಮಲ್ಲಿಕಾ (49), ರಾಜೇಶ್ವರಿ(47) ಹಾಗೂ ನರಸಿಪಟ್ಟಣದ ಬಾಬು ನಾಯ್ಡು (59) ಮೃತಪಟ್ಟವರು ಎಂದು ಗುರುತಿಸಲಾಗಿದೆ. ವೈಕುಂಠ ಏಕಾದಶಿಯ ಸಂದರ್ಭದಲ್ಲಿ ತಿರುಮಲ ಸ್ವಾಮಿಯನ್ನು ವೈಕುಂಠ ದ್ವಾರದ ಮೂಲಕ ದರ್ಶಿಸಿದರೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯಿಂದ ಈ ದಿನದ ದರ್ಶನಕ್ಕಾಗಿ ಟೋಕನ್ ಪಡೆಯಲು ನೂಕುನುಗ್ಗಲು ಉಂಟಾಗಿದೆ.  

Tirupati stampede: CM Naidu offers condolences, to visit victims’ families

Tirupati stampede: Six devotees dead, 40 injured at Vaikuntha Ekadashi token  counters, PM Modi mourns – India TV

Six dead, over 20 injured in stampede at darshan tickets issuing counters  in Tirupati - The Hindu

Seven devotees killed in stampede during distribution of darshan tokens in  Tirupati temple

Seven killed in Tirupati stampede

6 dead in stampede at Andhra Pradesh's Tirupati Temple; CM Naidu holds  high-level meet | India News - Times of India

tirupati stampede death toll:കൂപ്പണ്‍ വിതരണം ക്യൂവിലേക്ക് ആളുകള്‍  ഇടിച്ചുകയറി; നിയന്ത്രണങ്ങളെല്ലാം പാളി, തിരുപ്പതി ദുരന്തത്തിൽ മരണം ആറായി - tirupati  stampede ...

At least 6 killled, several injured in stampede at Tirupati temple | India  News - Business Standard

ಗುರುವಾರ (ಜ.9) ಬೆಳಗ್ಗೆ 5 ಗಂಟೆಯಿಂದ ಶ್ರೀನಿವಾಸಂ, ಸತ್ಯನಾರಾಯಣಪುರಂ ಮತ್ತು ಬೈರಾಗಿಪಟ್ಟೆ ಸೇರಿದಂತೆ 9 ಕಡೆಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್‌ಗಳಲ್ಲಿ ವೈಕುಂಠ ದ್ವಾರ ದರ್ಶನ ಟಿಕೆಟ್‌ ನೀಡುವುದಾಗಿ ಹೇಳಲಾಗಿತ್ತು. ಆದರೆ, ಟೋಕನ್‌ಗಳಿಗಾಗಿ ಬುಧವಾರ ಸಂಜೆಯೇ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ನಡುವೆ ಟಿಕೆಟ್‌ ಕೌಂಟರ್‌ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಹೊರಗೆ ಕರೆದೊಯ್ಯಲು ಗೇಟ್‌ ತೆರೆದಾಗ ಹೊರಗಿದ್ದವರೆಲ್ಲರೂ ಗುಂಪು ಗುಂಪಾಗಿ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿದುಬಂದಿದೆ. 

ಜೀವನಕೋಣ, ಬೈರಾಗಿಪೆಟ್ಟ, ಶ್ರೀನಿವಾಸ ಟೋಕನ್ ಕೇಂದ್ರಗಳಲ್ಲಿ ನೂಕುನುಗ್ಗಲು ಸಂಭವಿಸಿದೆ. ಸಂಜೆ 7 ಗಂಟೆಗೆ ಗೇಟ್ ತೆರೆಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಸೇರಿದ ಜನರು ನುಗ್ಗಿ ಬಂದಿದ್ದು ಪೊಲೀಸರು ತಡೆಯಲು ಯತ್ನಿಸಿದರೂ ಪ್ರಯೋಜನ ಆಗಲಿಲ್ಲ. ಪರಿಣಾಮ ಮಹಿಳೆಯರು, ಮಕ್ಕಳು ನೆಲಕ್ಕುರುಳಿದ್ದು ಅವರ ಮೇಲಿನಿಂದಲೇ ಜನರ ಗುಂಪು ಹಾದುಹೋಗಿದೆ. ಇದರಿಂದಾಗಿ ಬೈರಾಗಿಬೆಟ್ಟ ಬಳಿ ಮೂವರು, ಶ್ರೀನಿವಾಸ ಅತಿಥಿ ಗೃಹದ ಬಳಿ ಇಬ್ಬರು ಮತ್ತು ಆಸ್ಪತ್ರೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. 

ಕಾಲ್ತುಳಿತ ಘಟನೆ ಬಗ್ಗೆ ಪ್ರಧಾನಿ ಮೋದಿ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಘಾತ ವ್ಯಕ್ತಪಡಿಸಿದ್ದಾರೆ.

The temple town of Tirupati in Andhra Pradesh witnessed massive chaos and commotion as a crowd of more than 4,000 devotees lined up to get tokens for a special darshan at the Lord Venkateswara Swamy temple. At least six people were killed in a stampede that resulted from the overcrowding and "lapse in administration".