ಬ್ರೇಕಿಂಗ್ ನ್ಯೂಸ್
26-01-25 01:20 pm HK News Desk ದೇಶ - ವಿದೇಶ
ಮುಂಬೈ, ಜ.26: ಮಕ್ಕಳು ಓದುವ ಇತಿಹಾಸದ ಪುಸ್ತಕಗಳಲ್ಲಿ ಬಹಳಷ್ಟು ವಿಷಯಗಳನ್ನು ಸರಿಪಡಿಸಬೇಕಾಗಿದೆ. ನಾವು ಅಕ್ಬರ್ ಅಥವಾ ಔರಂಗಜೇಬ್ ಬಗ್ಗೆ ಓದುತ್ತೇವೆ. ಆದರೆ ನಮ್ಮದೇ ನಾಡಿನ ವೀರರ ಬಗ್ಗೆ ಓದಿರುವುದಿಲ್ಲ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
ಸಿಎನ್ಎನ್-ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ 1965ರ ಏರ್ ಸ್ಟ್ರೈಕ್ ಕುರಿತ ಸ್ಕೈ ಫೋರ್ಸ್ ಚಿತ್ರದ ಬಗ್ಗೆ ಮಾತನಾಡುತ್ತ, ಶಾಲಾ ಪಠ್ಯ ಪುಸ್ತಕಗಳ ಭಾಗವಾಗಿರಬೇಕಾದ ಕತೆ ಇಲ್ಲಿದೆ. ಪಠ್ಯ ಪುಸ್ತಕಗಳಲ್ಲಿ ನಾವು ಓದಿರದ ಎಷ್ಟೋ ವಿಷಯಗಳು ಈ ಚಿತ್ರದಲ್ಲಿವೆ. ನಮ್ಮ ಪುಸ್ತಕಗಳ ಭಾಗವಲ್ಲದ ರಿಯಲ್ ಸ್ಟೋರಿಗಳ ಪಾತ್ರಗಳನ್ನು ನಿರ್ವಹಿಸಲು ಹೆಚ್ಚು ಬಯಸುತ್ತೇನೆ. ಏಕೆಂದರೆ, ಅವರೆಲ್ಲ ಅಪರಿಚಿತ ವೀರರು. ಯಾರೊಬ್ಬರೂ ಆಳಕ್ಕೆ ಹೋಗಿ ಅಧ್ಯಯನ ಮಾಡದ ಕಾರಣ ಜನರಿಗೆ ಅವರ ಬಗ್ಗೆ ಏನೂ ತಿಳಿದಿಲ್ಲ. ನಾನು ಅಂತಹ ಪಾತ್ರಗಳನ್ನು ಆಯ್ದುಕೊಳ್ಳುತ್ತೇನೆ ಎಂದರು.
ಅಕ್ಬರ್ ಮತ್ತು ಔರಂಗಜೇಬ್ ಬಗ್ಗೆ ಇತಿಹಾಸದ ಪುಸ್ತಕಗಳಿಂದ ತಿಳಿದುಕೊಳ್ಳುತ್ತೇವೆ. ಆದರೆ, ಅವರಲ್ಲದೆ ಬಹಳಷ್ಟು ವೀರರು ನಮ್ಮಲ್ಲಿ ಆಗಿಹೋಗಿದ್ದಾರೆ. ಅವರನ್ನು ಪಠ್ಯಪುಸ್ತಕಗಳಲ್ಲಿ ಉಲ್ಲೇಖ ಮಾಡಬೇಕಾಗಿದೆ. ನಮ್ಮ ಸೇನಾಧಿಕಾರಿಗಳಲ್ಲೂ ಹಲವಾರು ಕಥೆಗಳಿವೆ. ಎಷ್ಟೋ ಮಂದಿ ವೀರರಿಗೆ ಪರಮವೀರ ಚಕ್ರ ನೀಡಿ ಗೌರವಿಸಲಾಗುತ್ತದೆ. ಆದರೆ ಅವರ ರಿಯಲ್ ಸ್ಟೋರಿ ಯಾರಿಗೂ ತಿಳಿಯಲ್ಲ. ಇದಕ್ಕಾಗಿ ಇತಿಹಾಸ ಪುಸ್ತಕವನ್ನು ಸರಿಪಡಿಸಿ ನಮ್ಮ ದೇಶದ ನಾಯಕರನ್ನು ಮುನ್ನೆಲೆಗೆ ಕರೆತರಬೇಕಾಗಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ, ಅಕ್ಷಯ್ ಕುಮಾರ್ ವಿವಿಧ ಜೀವನ ಚರಿತ್ರೆಗಳಲ್ಲಿ ನಟಿಸಿದ್ದಾರೆ. 2018 ರಲ್ಲಿ ಅವರು ಪ್ಯಾಡ್ ಮ್ಯಾನ್ ಚಿತ್ರದಲ್ಲಿ ಲಕ್ಷ್ಮೀಕಾಂತ್ ಚೌಹಾಣ್ ಪಾತ್ರವನ್ನು ನಿರ್ವಹಿಸಿದ್ದರು. ನಂತರ ಅವರು ಗೋಲ್ಡ್ (2018), ಕೇಸರಿ (2019), ಸಾಮ್ರಾಟ್ ಪೃಥ್ವಿರಾಜ್ (2022), ಮಿಷನ್ ರಾಣಿಗಂಜ್ (2023), ಸರ್ಫಿರಾ (2024) ಮತ್ತು ಈಗ ಸ್ಕೈ ಫೋರ್ಸ್ನಂತಹ ಬಯೋಪಿಕ್ಗಳಲ್ಲಿ ನಟಿಸಿದ್ದಾರೆ. ಶಿವಾಜಿ ಸ್ಕೈ ಫೋರ್ಸ್ ಜನವರಿ 24 ರಂದು ಬಿಡುಗಡೆಯಾಗಲಿದೆ.
1965ರಲ್ಲಿ ಭಾರತವು ಪಾಕಿಸ್ಥಾನದ ಮೇಲೆ ಮೊದಲ ಬಾರಿಗೆ ಏರ್ ಸ್ಟ್ರೈಕ್ ಮಾಡಿದ ಸಂದರ್ಭದಲ್ಲಿ ಕೊಡಗಿನ ವೀರ ಯೋಧ ಅಜ್ಜಮಾಡ ಬೋಪಯ್ಯ ದೇವಯ್ಯ ಅವರು ವಿಶೇಷ ಪಾತ್ರ ನಿರ್ವಹಿಸಿದ್ದರು. ಅದೇ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡುತ್ತಿದ್ದಾರೆ.
In the past few years, Akshay Kumar has starred in various biopics. It all began back in 2018 when he played Lakshmi Kant Chauhan in the movie Pad Man. He then starred in biopics like Gold (2018), Kesari (2019), Samrat Prithviraj (2022), Mission Raniganj (2023), Sarfira (2024), and now Sky Force, which is scheduled to release on January 24.
01-04-25 10:45 pm
HK News Desk
Karnataka diesel price hike: ಹಾಲು, ಟೋಲ್, ಕರೆಂ...
01-04-25 09:35 pm
ರಾಜ್ಯ ಸರ್ಕಾರದಿಂದ ಯುಗಾದಿಗೆ ಬೆಲೆ ಏರಿಕೆ ಕೊಡುಗೆ ;...
01-04-25 03:49 pm
Karnataka toll hike, Milk: ರಾಜ್ಯದ ಜನತೆಗೆ ಎಪ್ರ...
01-04-25 12:26 pm
ಕಳೆದ 11 ವರ್ಷಗಳಿಂದ ನೀವೇ ಅಧಿಕಾರದಲ್ಲಿ ಮೊಳೆ ಹೊಡೆ...
31-03-25 07:41 pm
31-03-25 09:34 pm
HK News Desk
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
01-04-25 09:38 pm
Mangalore Correspondent
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
Belthangady Accident, Mangalore: ಯಕ್ಷಗಾನ ಮುಗಿ...
31-03-25 12:26 pm
CCB Police, CM Medal, Mangalore: ಮಂಗಳೂರು ಪೊಲೀ...
30-03-25 11:02 pm
01-04-25 11:07 pm
Mangalore Correspondent
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm
Mangalore Muda Commissioner, FIR, Noor Zahara...
31-03-25 09:29 pm
Mangalore Derlakatte Robbery attempt; ದೇರಳಕಟ್...
30-03-25 08:59 am