ಬ್ರೇಕಿಂಗ್ ನ್ಯೂಸ್
01-02-25 09:35 pm HK News Desk ದೇಶ - ವಿದೇಶ
ಕೊಚ್ಚಿ, ಫೆ.1: ಏಂಟಿ ಟೆರರಿಸ್ಟ್ ಸ್ಕ್ವಾಡ್ ನಡೆಸಿದ ಮಹತ್ವದ ಕಾರ್ಯಾಚರಣೆ ಒಂದರಲ್ಲಿ ಅಕ್ರಮವಾಗಿ ನೆಲೆಸಿದ್ದ 27 ಬಾಂಗ್ಲಾದೇಶಿ ನಿವಾಸಿಗಳನ್ನು ಎರ್ನಾಕುಲಂ ಜಿಲ್ಲೆಯ ಉತ್ತರ ಪರವೂರು ಎಂಬಲ್ಲಿಂದ ವಶಕ್ಕೆ ಪಡೆಯಲಾಗಿದೆ. ಒಂದೇ ಬಾರಿಗೆ ಇಷ್ಟೊಂದು ಅಕ್ರಮ ಬಾಂಗ್ಲಾನ್ನರನ್ನು ಜಿಲ್ಲೆಯೊಂದರಲ್ಲಿ ಪತ್ತೆ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.
ಎರ್ನಾಕುಲಂ ಗ್ರಾಮಾಂತರ ಪೊಲೀಸರು ಮತ್ತು ಏಂಟಿ ಟೆರರಿಸ್ಟ್ ಸ್ಕ್ವಾಡ್ ಜಂಟಿಯಾಗಿ ಆಪರೇಶನ್ ಕ್ಲೀನ್ ಹೆಸರಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನಿವಾಸಿಗಳನ್ನು ಪತ್ತೆ ಮಾಡುವುದಕ್ಕಾಗಿ ರಹಸ್ಯ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎರಡು ದಿನಗಳ ಹಿಂದೆ ಎಟಿಎಸ್ ತಂಡದ ಸದಸ್ಯರು ಉತ್ತರ ಪರವೂರ್ ಗ್ರಾಮದ ಮನ್ನಾಮ್ ಏರಿಯಾದಲ್ಲಿ ಅತಿ ಹೆಚ್ಚು ಬಾಂಗ್ಲಾನ್ನರು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ, ಶುಕ್ರವಾರ ರಾತ್ರಿ 11 ಗಂಟೆ ನಂತರ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಸಯೀದ್ ಮಹಮ್ಮದ್ ಎಂಬಾತನಿಗೆ ಸೇರಿದ ಕಟ್ಟಡ ಒಂದಕ್ಕೆ 70 ಮಂದಿಯಿದ್ದ ಪೊಲೀಸರು ರಾತ್ರಿ ವೇಳೆ ದಾಳಿ ನಡೆಸಿದ್ದರು. ಆ ಕಟ್ಟಡವನ್ನು ಹರ್ಷದ್ ಹುಸೈನ್ ಎಂಬಾತ ಲೀಸಿಗೆ ಪಡೆದು ವಲಸಿಗ ಕಾರ್ಮಿಕರಿಗೆ ಬಾಡಿಗೆ ಕೊಟ್ಟಿದ್ದ. ಎರಡು ಅಂತಸ್ತಿನ ಕಟ್ಟಡದಲ್ಲಿ ನೆಲೆಸಿದ್ದ 50ಕ್ಕೂ ಹೆಚ್ಚು ಕಾರ್ಮಿಕರು ತಾವು ಪಶ್ಚಿಮ ಬಂಗಾಳ, ಅಸ್ಸಾಮ್ ಮೂಲದವರು ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದರು. ಪೊಲೀಸರ ದಾಳಿ ಸಂದರ್ಭದಲ್ಲಿ ಕಾರ್ಮಿಕರ ಐಡಿ, ಮೊಬೈಲ್ ಫೋನ್, ಪಾಸ್ ಪೋರ್ಟ್ ಇನ್ನಿತರ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ 27 ಮಂದಿ ಬಾಂಗ್ಲಾ ದೇಶಿಗರು ಎಂದು ತಿಳಿದುಬಂದಿದೆ.
ಬಂಧಿತ ಕಾರ್ಮಿಕರು ಭಾರತದ ಗಡಿರೇಖೆಯ ಮೂಲಕ ಅಕ್ರಮವಾಗಿ ನುಸುಳಿ ಬಂದಿದ್ದು, ಜನವರಿ ವೇಳೆಗೆ ಪಶ್ಚಿಮ ಬಂಗಾಳ ತಲುಪಿದ್ದರು. ಅಲ್ಲಿನ ಏಜಂಟ್ ಮೂಲಕ ನಕಲಿ ಐಡಿಗಳನ್ನು ಮಾಡಿಕೊಂಡು ಕೇರಳಕ್ಕೆ ತಲುಪಿದ್ದರು. ಇತ್ತೀಚೆಗೆ ಕೂಲಿ ಕಾರ್ಮಿಕರಾಗಿ ಕೆಲಸಕ್ಕೆ ಬಂದು ಸೇರಿದ್ದರು. ಇವರನ್ನೆಲ್ಲ ಇಲ್ಲಿನ ಗುತ್ತಿಗೆದಾರರು ಬಾಡಿಗೆಗೆ ಇಟ್ಟುಕೊಂಡಿದ್ದರು. ನಾವು ಅವರ ಮೇಲೆ ಅಕ್ರಮ ನೆಲೆಸಿದ ಆರೋಪದಲ್ಲಿ ಕೇಸು ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ ಮೊದಲ ವಾರದಿಂದಲೇ ಎರ್ನಾಕುಲಂ ಪೊಲೀಸರು ಆಪರೇಶನ್ ಕ್ಲೀನ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎರ್ನಾಕುಲಂ ಜಿಲ್ಲೆಯಲ್ಲಿ ಈವರೆಗೆ 35 ಕಾರ್ಮಿಕರನ್ನು ಪತ್ತೆ ಮಾಡಲಾಗಿದೆ. ಕೊಚ್ಚಿಯಲ್ಲಿ ಆರು ಮಂದಿಯನ್ನು ಬಂಧನ ಮಾಡಲಾಗಿದೆ. ಎಟಿಎಸ್ ತಂಡವು ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಕಾರ್ಯಾಚರಣೆ ನಡೆಸುತ್ತಿದೆ.
At least 27 Bangladeshi nationals who were allegedly illegally staying and working in Ernakulam district of Kerala have been arrested, police officials said on Friday, adding that detailed questioning of all those arrested is underway.
13-03-25 02:56 pm
HK News Desk
Karwar, Honnavar, Cow Slaughter, Crime; ಗರ್ಭ...
13-03-25 12:32 pm
Madikeri Earthquake: ಮಡಿಕೇರಿಯಲ್ಲಿ ಲಘು ಭೂಕಂಪನ...
13-03-25 11:57 am
Pramod Muthalik, Love Jihad: ವೇಶ್ಯಾವಾಟಿಕೆ, ಭಯ...
12-03-25 03:51 pm
Mangalore Chakravarti Sulibele, Prakash Raj:...
11-03-25 06:19 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
13-03-25 09:20 pm
Mangalore Correspondent
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
Mangalore News, crime, Suicide: ಉತ್ತರ ಪ್ರದೇಶ...
13-03-25 10:08 am
Mangalore rain, Heat wave: ಮಂಗಳೂರು ನಗರಕ್ಕೆ ಸಿ...
12-03-25 11:10 pm
Diganth Missing case, Reunite with family: 17...
12-03-25 10:16 pm
13-03-25 06:44 pm
Mangalore Correspondent
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm
Bangalore Suicide, Bank Staff, Crime; ಹಿರಿಯ ಅ...
09-03-25 03:06 pm