Kerala Suicide, Ragging: ಕೇರಳದಲ್ಲಿ 15ರ ಬಾಲಕ ಮಿಹಿರ್ ಆತ್ಮಹತ್ಯೆ ಸಂಚಲನ ; ಟಾಯ್ಲೆಟ್ ನೆಕ್ಕಿಸಿ ಕಮೋಡ್ ಒಳಗೆ ತಲೆ ತುರುಕಿದ್ದಾರೆ..! ಸಿಎಂ ಪಿಣರಾಯಿಗೆ ತಾಯಿ ದೂರು ಪತ್ರ, ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ

04-02-25 10:49 pm       HK News Desk   ದೇಶ - ವಿದೇಶ

ಕೇರಳದಲ್ಲಿ 15 ವರ್ಷದ ಬಾಲಕನೊಬ್ಬ 26 ಮಹಡಿಯ ಅಪಾರ್ಟ್ಮೆಂಟ್ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಚಲನ ಎಬ್ಬಿಸಿದೆ. ಬಾಲಕ ಇಷ್ಟೊಂದು ದಯನೀಯ ರೀತಿಯಲ್ಲಿ ಸಾಯುವುದಕ್ಕೆ ಸಹ ವಿದ್ಯಾರ್ಥಿಗಳ ಕಿರುಕುಳವೇ ಕಾರಣ.

ಕೊಚ್ಚಿ, ಫೆ.4: ಕೇರಳದಲ್ಲಿ 15 ವರ್ಷದ ಬಾಲಕನೊಬ್ಬ 26 ಮಹಡಿಯ ಅಪಾರ್ಟ್ಮೆಂಟ್ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಚಲನ ಎಬ್ಬಿಸಿದೆ. ಬಾಲಕ ಇಷ್ಟೊಂದು ದಯನೀಯ ರೀತಿಯಲ್ಲಿ ಸಾಯುವುದಕ್ಕೆ ಸಹ ವಿದ್ಯಾರ್ಥಿಗಳ ಕಿರುಕುಳವೇ ಕಾರಣ. ತನ್ನ ಮಗನನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಬಾಲಕನ ತಾಯಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಸಿಎಂ ಪಿಣರಾಯಿ ವಿಜಯನ್ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.

ಮಿಹಿರ್ ಅಹ್ಮದ್ ಎಂಬ 15 ವರ್ಷದ ಬಾಲಕ ಜನವರಿ 15ರಂದು ಕೊಚ್ಚಿ ಬಳಿಯ ತ್ರಿಪುಣಿತ್ತಾರ ಎಂಬಲ್ಲಿ 26 ಮಹಡಿಯ ಅಪಾರ್ಟ್ಮೆಂಟ್ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆರಂಭದಲ್ಲಿ ಬಾಲಕನದ್ದು ಆತ್ಮಹತ್ಯೆ ಎಂದಷ್ಟೇ ಪ್ರಕರಣ ದಾಖಲಾಗಿತ್ತು. ಆದರೆ ಕಾಲೇಜಿನ ಸಹ ವಿದ್ಯಾರ್ಥಿಗಳ ಮಾಹಿತಿ ಅನುಸರಿಸಿ ತಾಯಿ ರಜನಾ ಮುಖ್ಯಮಂತ್ರಿಗೆ ದೂರು ಪತ್ರ ಬರೆದಿದ್ದಾರೆ.

ಶಾಲೆಯಿಂದ ಮರಳಿದ ಹುಡುಗ ನೇರವಾಗಿ ಮಹಡಿಯ ಮೇಲೇರಿ ಹೊರಕ್ಕೆ ಹಾರಿದ್ದಾನೆ. ಮಗನ ಸಾವಿನ ಬಳಿಕ ಇಷ್ಟೊಂದು ಕ್ರೂರವಾಗಿ ಯಾಕೆ ಸಾವಿಗೆ ಶರಣಾಗಿದ್ದಾನೆಂದು ನಾವು ಶೋಧ ನಡೆಸಿದೆವು. ಆತನ ಗೆಳೆಯರು, ಸ್ಕೂಲ್ ಮೇಟ್ಸ್ ಮತ್ತು ಸೋಶಿಯಲ್ ಮೀಡಿಯಾದ ಮೆಸೇಜ್ ಗಳನ್ನು, ಅವರೊಳಗೆ ಆಗಿರುವ ಸಂಭಾಷಣೆಗಳ ಬಗ್ಗೆ ತಿಳಿದುಕೊಂಡೆವು. ಆಗಲೇ ನಮಗೆ ಗೊತ್ತಾಗಿದ್ದು, ಮಗ ಯಾಕೆ ಇಷ್ಟೊಂದು ಭೀಕರವಾಗಿ ಸತ್ತಿದ್ದಾನೆಂದು. ಎಷ್ಟರ ಮಟ್ಟಿಗೆ ದಯನೀಯ ಕಿರುಕುಳ ಅನುಭವಿಸಿದ್ದಾನೆಂದು ತಿಳಿದುಬಂತು. ಸ್ಕೂಲ್ ಬಸ್ ಮತ್ತು ಶಾಲೆಯಲ್ಲಿ ಸಹ ವಿದ್ಯಾರ್ಥಿಗಳು ಆತನಿಗೆ ಕ್ರೂರವಾಗಿ ಹಿಂಸೆ ನೀಡಿದ್ದಾರೆ, ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ರ್ಯಾಗಿಂಗ್ ಮಾಡಿದ್ದಾರೆ...

ನಾವು ಊಹೆ ಮಾಡಲಾಗದಷ್ಟು ಕ್ರೂರವಾಗಿ ನಡೆಸಿಕೊಂಡಿದ್ದಾರೆ. ವಾಶ್ ರೂಮಿಗೆ ಬಲವಂತವಾಗಿ ಕರೆದೊಯ್ದು ಟಾಯ್ಲೆಟ್ ನೆಕ್ಕಿಸಿದ್ದಾರೆ. ಕಮೋಡ್ ಒಳಗಡೆ ತಲೆಯನ್ನು ನುಗ್ಗಿಸಿ ಫ್ಲಶ್ ಮಾಡಿದ್ದಾರೆ. ಇದನ್ನೆಲ್ಲ ಸಹಿಸಿಕೊಳ್ಳಲು ಆಗದೆ ಹುಡುಗ ಈ ರೀತಿ ಸಾವಿಗೆ ಶರಣಾಗಿದ್ದಾನೆ. ಆತನ ಸಾವಿನ ಬಳಿಕವೂ ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ. ಶಾಕಿಂಗ್ ಅನ್ನುವಷ್ಟರ ಮಟ್ಟಿಗೆ ನಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ತಮ್ಮೊಳಗೆ ನಡೆಸಿರುವ ಚಾಟಿಂಗ್ ಸ್ಕ್ರೀನ್ ಶಾಟ್ ನಮಗೆ ಸಿಕ್ಕಿದೆ. ಫ..ಕ್ ನಿ..ಗ ಎಂದು ಕ್ರೂರವಾಗಿ ಬರೆದುಕೊಂಡು ಆತನ ಸಾವಿನಲ್ಲೂ ಸಂಭ್ರಮ ಪಟ್ಟಿದ್ದಾರೆ.. ಎಂದು ತಾಯಿ ಬಹಿರಂಗವಾಗಿ ಮುಖ್ಯಮಂತ್ರಿಗೆ ಪತ್ರವನ್ನು ಬರೆದಿದ್ದಾರೆ.

ಇದಲ್ಲದೆ, ತಾಯಿ ರಜನಾ ಮತ್ತು ಇತರ ಗೆಳೆಯರು ಸೇರಿಕೊಂಡು ಇನ್ ಸ್ಟಾ ಗ್ರಾಮ್ ನಲ್ಲಿ ಜಸ್ಟಿಸ್ ಫಾರ್ ಮಿಹಿರ್ ಎಂಬ ಪೇಜ್ ಆರಂಭಿಸಿದ್ದಾರೆ. ಶಾಲೆಯ ಆಡಳಿತದವರು ತಮ್ಮ ಇಮೇಜ್ ಹೋಗುತ್ತೆ ಎಂದು ವಾಸ್ತವ ಮರೆ ಮಾಚುತ್ತಿದ್ದಾರೆ. ಗೆಳೆಯರನ್ನು ಮಾಹಿತಿ ನೀಡದಂತೆ ನಿರ್ಬಂಧಿಸುತ್ತಿದ್ದಾರೆ. ಒಟ್ಟು ಪ್ರಕರಣವನ್ನು ಮುಚ್ಚಿ ಹಾಕಲು ನೋಡುತ್ತಿದ್ದಾರೆ ಎಂದು ತಾಯಿ ಹೇಳಿಕೆ ನೀಡಿದ್ದಾರೆ. ಕೇರಳ ಶಿಕ್ಷಣ ಸಚಿವ ಶಿವನ್ ಕುಟ್ಟಿ ಒಟ್ಟು ಘಟನೆ ಬಗ್ಗೆ ಸಮಗ್ರ ತನಿಖೆಗೆ ಆದೇಶ ಮಾಡಿದ್ದಾರೆ.

ಕೇರಳದಲ್ಲಿ ಮಲಯಾಳಂ ನಟ- ನಟಿಯರು ಕೂಡ ಮಿಹಿರ್ ಪರವಾಗಿ ಧ್ವನಿ ಎತ್ತಿದ್ದಾರೆ. ನಾವು ಕರಾಳ ಘಟನೆಗೆ ಸಾಕ್ಷಿಯಾಗಿದ್ದೇವೆ. ಏಂಟಿ ರಾಗಿಂಗ್ ಬಗ್ಗೆ ಕಠಿಣ ಕಾನೂನು ತರಬೇಕಾಗಿದೆ. ನಾವು ಭಯ ಬಿಟ್ಟು ಮಾತನಾಡಬೇಕಾದ ಸ್ಥಿತಿ ಎದುರಾಗಿದೆ. ನಾವು ಎಲ್ಲಿ ಎಡವಿದ್ದೇವೆ ಎಂಬ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Weeks after a 15-year-old schoolboy in Kerala's Kochi died by suicide, his mother has alleged that brutal ragging crushed her son and pushed him toward death. In a statement posted on Instagram, Rajna PM alleged that her son, Mihir Ahammed, was beaten up, verbally abused and forced to lick the toilet seat.