New Rules 2025; FASTag​ ಹೊಸ ನಿಯಮ ಜಾರಿ ;  ಬ್ಯಾಲೆನ್ಸ್​ ಇಲ್ಲದೇ ಪ್ರಯಾಣಿಸುವ ಟೋಲ್​ ಪ್ರಯಾಣಿಕರು  ದುಪ್ಪಟ್ಟು ಕಟ್ಟಲು ರೆಡಿಯಾಗಿ, ಏನೆಲ್ಲಾ  ರೂಲ್ಸ್ ಇದೆ ಒಮ್ಮೆ ನೋಡಿ ! 

17-02-25 08:23 pm       HK News Desk   ದೇಶ - ವಿದೇಶ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಫಾಸ್ಟ್ಯಾಗ್ ಬಳಕೆದಾರರಿಗಾಗಿ ಇಂದಿನಿಂದ ಹೊಸ ನಿಯಮವನ್ನು ಪರಿಚಯಿಸುತ್ತಿದೆ. ಬ್ಯಾಲೆನ್ಸ್​ ಇಲ್ಲದೇ ಪ್ರಯಾಣಿಸುವ ಟೋಲ್​ ಪ್ರಯಾಣಿಕರಿಗೆ ಇದರಿಂದ ಹೆಚ್ಚು ಪರಿಣಾಮ ಉಂಟಾಗಲಿದೆ.

ನವದೆಹಲಿ, ಫೆ 17: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಫಾಸ್ಟ್ಯಾಗ್ ಬಳಕೆದಾರರಿಗಾಗಿ ಇಂದಿನಿಂದ ಹೊಸ ನಿಯಮವನ್ನು ಪರಿಚಯಿಸುತ್ತಿದೆ. ಬ್ಯಾಲೆನ್ಸ್​ ಇಲ್ಲದೇ ಪ್ರಯಾಣಿಸುವ ಟೋಲ್​ ಪ್ರಯಾಣಿಕರಿಗೆ ಇದರಿಂದ ಹೆಚ್ಚು ಪರಿಣಾಮ ಉಂಟಾಗಲಿದೆ.

ಟೋಲ್ ತೆರಿಗೆ ಸಂಗ್ರಹವನ್ನು ಸುವ್ಯವಸ್ಥಿತಗೊಳಿಸುವ ಮತ್ತು ಪ್ರಯಾಣಿಕರಿಗೆ ತಡೆರಹಿತ ಅನುಭವವನ್ನು ಖಾತರಿಪಡಿಸುವ ಗುರಿಯೊಂದಿಗೆ ಈ ನಿಯಮವನ್ನು ಜಾರಿ ಮಾಡಲಾಗುತ್ತಿದೆ. ಹಾಗೆಯೇ ರಿಚಾರ್ಚ್​ ಇಲ್ಲದೇ ಪ್ರಯಾಣಿಸುವ ಪ್ರಯಾಣಿಕರು ದುಪ್ಪಟ್ಟು ಪಾವತಿಸುವ ಅನಿವಾರ್ಯತೆಯೂ ಎದುರಾಗಲಿದೆ.

  • ಟೋಲ್​ ಮೂಲಕ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಹೊಂದುವುದು ಅವಶ್ಯಕ.
  • ಖಾತೆಯಲ್ಲಿ ಸಾಕಷ್ಟು ಹಣ ಹೊಂದಿಲ್ಲದಿದ್ದರೆ, ಸಿಸ್ಟಮ್ ನಿಮಗೆ ಮುಂದುವರಿಯಲು ಅವಕಾಶ ನೀಡುತ್ತದೆ. ಆದರೆ ನಿಮ್ಮ ಫಾಸ್ಟ್ಯಾಗ್​ನಲ್ಲಿ ಕಡಿಮೆ ಬ್ಯಾಲೆನ್ಸ್ ಹೊಂದಿದೆ ಎಂದು ತೋರಿಸುತ್ತದೆ.
  • ಫಾಸ್ಟ್ಯಾಗ್ ಬ್ಯಾಲೆನ್ಸ್​ ರಿಚಾರ್ಚ್​ ಮಾಡಲು, ಈ ಕುರಿತು ನೆನಪಿಸಲು ಎಸ್​ಎಂಎಸ್​/ಫಾಸ್ಟ್ಯಾಗ್ ​ಅಪ್ಲಿಕೇಶನ್ ಮೂಲಕ ನೋಟಿಫಿಕೇಶನ್​ ಸ್ವೀಕರಿಸುತ್ತೀರಿ.
  • ಸರಿಯಾದ ಸಮಯಕ್ಕೆ ರಿಚಾರ್ಜ್ ಮಾಡಲು ಸಾಧ್ಯವಾಗದಿದ್ದರೆ, ಹೆದ್ದಾರಿಯಿಂದ ನಿರ್ಗಮಿಸುವಾಗ ಟೋಲ್​ಗೆ ದುಪ್ಪಟ್ಟು ಪಾವತಿಸಬೇಕಾಗುತ್ತದೆ.

ಹೊಸ ಫಾಸ್ಟ್ಯಾಗ್ ನಿಯಮವೇಕೆ?:

  • ಅನೇಕ ಚಾಲಕರು ತಮ್ಮ ಫಾಸ್ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸದೆ ಟೋಲ್ ಪ್ಲಾಜಾಗಳನ್ನು ಪ್ರವೇಶಿಸಲು ಮುಂದಾಗುತ್ತಿದ್ದಾರೆ. ಇದರಿಂದ ಇತರೆ ವಾಹನಗಳ ಸಂಚಾರದಲ್ಲಿ ವಿಳಂಬ, ದಟ್ಟಣೆ ಸಮಸ್ಯೆಗಳಾಗುತ್ತಿವೆ. ಇದನ್ನು ಎನ್​ಎಚ್​ಎಐ ಗಂಭೀರವಾಗಿ ಪರಿಗಣಿಸಿದೆ.
  • ಇನ್ಮುಂದೆ ಪ್ರಯಾಣಿಕರು ಸಾಕಷ್ಟು ಬ್ಯಾಲೆನ್ಸ್​ ಹೊಂದಿಲ್ಲದೆ ಪ್ರಯಾಣಿಸಿದಲ್ಲಿ ಅದು ದಂಡಕ್ಕೆ ಕಾರಣವಾಗುತ್ತದೆ. ಹಾಗಾಗಿ, ಪ್ರಯಾಣ ಆರಂಭಿಸುವ ಮೊದಲು ಸಾಕಷ್ಟು ಮೊತ್ತದ ಬ್ಯಾಲೆನ್ಸ್​ ಅನ್ನು ಫಾಸ್ಟ್ಯಾಗ್ ಖಾತೆಯಲ್ಲಿ ಹೊಂದಿದ್ದೀರಾ ಎಂಬುದನ್ನು ಪರಿಶೀಲಿಸುವುದು ಅಗತ್ಯ.
  • ಟೋಲ್​ ಶುಲ್ಕ ರೂ.100 ಆಗಿದ್ದರೆ, ಹೆದ್ದಾರಿ ಪ್ರಯಾಣ ಆರಂಭಿಸುವ ಒಂದು ಗಂಟೆ ಮುಂಚೆ ರೀಚಾರ್ಜ್​ ಮಾಡದಿದ್ದರೆ, ನೀವು 200 ರೂಪಾಯಿ ಪಾವತಿಸಬೇಕಾಗುತ್ತದೆ

Several new rules for FASTag will come into effect from Monday, February 17, 2025. These are for streamlining toll transactions and reducing fraud, according to circulars from the National Payments Corporation of India (NPCI).