ಬ್ರೇಕಿಂಗ್ ನ್ಯೂಸ್
18-02-25 10:45 pm HK News Desk ದೇಶ - ವಿದೇಶ
ಕೊಟ್ಟಾಯಂ, ಫೆ.18: ಉತ್ತರ ಭಾರತದಲ್ಲಿ ಮುಸ್ಲಿಮರ ಮಸೀದಿಯ ಒಳಗಡೆ ಹಿಂದುಗಳ ವಿಗ್ರಹ ಪೂಜೆ, ಆರಾಧನಾ ಪದ್ಧತಿಯ ಕುರುಹು ಕಂಡುಬಂದಿರುವುದು ವಿವಾದಕ್ಕೆ ಕಾರಣವಾಗಿರುವಾಗಲೇ ಕೇರಳದಲ್ಲಿ ಕ್ರಿಸ್ತಿಯನ್ನರ ಬಿಷಪ್ ಹೌಸ್ ಆವರಣದಲ್ಲಿ ಹಿಂದೂ ದೇವರ ವಿಗ್ರಹ ಪತ್ತೆಯಾಗಿದ್ದು ವಿಭಿನ್ನ ರೀತಿಯ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ.
ಕೊಟ್ಟಾಯಂ ಜಿಲ್ಲೆಯ ಪಾಲಾದಲ್ಲಿರುವ ಸೀರೋ ಮಲಬಾರ್ ಚರ್ಚ್ ಆವರಣದಲ್ಲಿ ಕೆಲದಿನಗಳ ಹಿಂದೆ ಭೂಮಿಯನ್ನು ಅಗೆಯುತ್ತಿದ್ದಾಗ ಶಿವಲಿಂಗ ಮತ್ತು ಪಾರ್ವತಿಯ ವಿಗ್ರಹಗಳು ಪತ್ತೆಯಾಗಿವೆ. ಚರ್ಚ್ ಆವರಣದ ಜಾಗದಲ್ಲಿ ಮರಗೆಣಸು ಬೆಳೆಸುವುದಕ್ಕಾಗಿ ಭೂಮಿಯನ್ನು ಅಗೆಯುತ್ತಿದ್ದಾಗ ಅಚಾನಕ್ಕಾಗಿ ಹಿಂದು ದೇವರ ವಿಗ್ರಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಹಿಂದುಗಳು ಸೇರಿದ್ದು, ಭಕ್ತಿಯಿಂದ ವಿಗ್ರಹಗಳಿಗೆ ಪೂಜೆ ನೆರವೇರಿಸಿದ್ದಾರೆ.
ಪಾಲಾ ಗ್ರಾಮದ ವೆಲ್ಲಪಾಡ್ ಭಗವತಿ ದೇವಸ್ಥಾನದಿಂದ 700 ಮೀಟರ್ ದೂರದಲ್ಲಿ ಈ ವಿಗ್ರಹ ಪತ್ತೆಯಾಗಿದೆ. ಅಂದಾಜು ನೂರು ವರ್ಷಗಳ ಹಿಂದೆ ಈ ಜಾಗದಲ್ಲಿ ಬ್ರಾಹ್ಮಣರ ಕುಟುಂಬ ವಾಸವಿತ್ತು. ಆನಂತರದ ವರ್ಷಗಳಲ್ಲಿ ಬ್ರಾಹ್ಮಣರ ಕುಟುಂಬ ನಾಶಗೊಂಡಿದ್ದು ಸದ್ರಿ ಜಾಗವು ಬೇರೆಯವರಿಗೆ ಕೈಬದಲಾಗಿತ್ತು. ಬಿಷಪ್ ಹೌಸ್ ಅಸ್ತಿತ್ವಕ್ಕೆ ಬಂದ ಬಳಿಕ ಅಲ್ಲಿನ ಜಾಗ ಅವರ ಅಧೀನಕ್ಕೆ ಬಂದಿತ್ತು. ಇದೀಗ ಸದ್ರಿ ಜಾಗದಲ್ಲಿ ಹಿಂದು ದೇವರ ವಿಗ್ರಹ ಪತ್ತೆಯಾಗುತ್ತಿದ್ದಂತೆ ಸ್ಥಳೀಯರು ಸೇರಿದ್ದು, ಬಿಷಪ್ ಹೌಸ್ ಪ್ರತಿನಿಧಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಸ್ಥಳೀಯ ಭಗವತಿ ದೇವಸ್ಥಾನದ ಪ್ರತಿನಿಧಿಗಳು, ಅರ್ಚಕರು ಬಿಷಪ್ ಹೌಸ್ ಪ್ರತಿನಿಧಿಗಳ ಜೊತೆಗೆ ಮುಂದೆ ಏನು ಮಾಡುವುದೆಂದು ಮಾತುಕತೆ ನಡೆಸಿದ್ದಾರೆ. ಸದ್ಯಕ್ಕೆ ಮುಂದಿನ ನಿರ್ಧಾರ ತಿಳಿಸುವ ಬಗ್ಗೆ ಸಮಯಾವಕಾಶ ಕೇಳಿದ್ದೇವೆ, ಸೂಕ್ತ ನಿರ್ಧಾರಕ್ಕೆ ಬರುತ್ತೇವೆ ಎಂದು ಬಿಷಪ್ ಹೌಸ್ ಚಾನ್ಸಲರ್ ಫಾದರ್ ಜೋಸೆಫ್ ಕುತ್ತಿಯಾಂಕಲ್ ತಿಳಿಸಿದ್ದಾರೆ. ಇದೇ ವೇಳೆ, ಭಗವತಿ ದೇವಸ್ಥಾನದ ಪ್ರಮುಖರು ಹಿಂದುಗಳ ಆರಾಧನಾ ಪದ್ಧತಿ ಪ್ರಕಾರ ಸ್ಥಳದ ಬಗ್ಗೆ ಪ್ರಶ್ನಾ ಚಿಂತನೆ ನೆರವೇರಿಸಲು ಮುಂದಾಗಿದ್ದಾರೆ. ದೇವರ ಚಿತ್ತ ಏನಿದೆಯೆಂದು ತಿಳಿದು ಬಿಷಪ್ ಹೌಸ್ ಪ್ರತಿನಿಧಿಗಳ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಭಗವತಿ ದೇವಸ್ಥಾನದ ವಿನೋದ್ ಪುನ್ನಮತ್ತಿಲ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಸೌಹಾರ್ದ ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ಹಿಂದುಗಳು ಮತ್ತು ಕ್ರಿಸ್ತಿಯನ್ನರು ಮುಂದಾಗಿದ್ದಾರೆ.
Kerala Discovery of Hindu idols from Bishop House’s land in Pala diocese efforts under way to settle issue amicably. Remains, believed to be of an old temple, including idols of Lord Shiva and Goddess Parvathy, were unearthed recently while preparing land for tapioca farming on Pala Bishop House premises.
01-04-25 10:45 pm
HK News Desk
Karnataka diesel price hike: ಹಾಲು, ಟೋಲ್, ಕರೆಂ...
01-04-25 09:35 pm
ರಾಜ್ಯ ಸರ್ಕಾರದಿಂದ ಯುಗಾದಿಗೆ ಬೆಲೆ ಏರಿಕೆ ಕೊಡುಗೆ ;...
01-04-25 03:49 pm
Karnataka toll hike, Milk: ರಾಜ್ಯದ ಜನತೆಗೆ ಎಪ್ರ...
01-04-25 12:26 pm
ಕಳೆದ 11 ವರ್ಷಗಳಿಂದ ನೀವೇ ಅಧಿಕಾರದಲ್ಲಿ ಮೊಳೆ ಹೊಡೆ...
31-03-25 07:41 pm
31-03-25 09:34 pm
HK News Desk
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
01-04-25 09:38 pm
Mangalore Correspondent
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
Belthangady Accident, Mangalore: ಯಕ್ಷಗಾನ ಮುಗಿ...
31-03-25 12:26 pm
CCB Police, CM Medal, Mangalore: ಮಂಗಳೂರು ಪೊಲೀ...
30-03-25 11:02 pm
01-04-25 11:07 pm
Mangalore Correspondent
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm
Mangalore Muda Commissioner, FIR, Noor Zahara...
31-03-25 09:29 pm
Mangalore Derlakatte Robbery attempt; ದೇರಳಕಟ್...
30-03-25 08:59 am