ಇಬ್ಬರು ಹೆಂಡಿರ ಮುದ್ದಿನ ಗಂಡ ; ವಾರದ 3 ದಿನ ಅಲ್ಲಿ.. 3 ದಿನ ಇಲ್ಲಿ ! ಹೆಂಡ್ತಿಯರ ಗಲಾಟೆಯಲ್ಲಿ  ಗಂಡನಿಗೆ ಫಜೀತಿ ! 

18-02-25 10:49 pm       HK News Desk   ದೇಶ - ವಿದೇಶ

ಆತ ಇಬ್ಬರು ಹೆಂಡಿರ ಮುದ್ದಿನ ಪತಿರಾಯ. 25 ವರ್ಷಗಳ ಹಿಂದೆ ಮೊದಲ ಮದುವೆಯಾಗಿದ್ದ ಈ ವ್ಯಕ್ತಿ ಕಳೆದ 7 ವರ್ಷದ ಹಿಂದೆ ಮೊದಲ ಪತ್ನಿಗೆ ಗೊತ್ತಾಗದಂತೆ ಗುಟ್ಟಾಗಿ ಎರಡನೇ ಮದುವೆ ಆಗಿದ್ದ. ವಿಷಯ ತಿಳಿದು ಮೊದಲ ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಇಕ್ಕಟ್ಟಿಗೆ ಸಿಲುಕಿದ್ದ. 

ಪಾಟ್ನಾ, ಫೆ.19 : ಆತ ಇಬ್ಬರು ಹೆಂಡಿರ ಮುದ್ದಿನ ಪತಿರಾಯ. 25 ವರ್ಷಗಳ ಹಿಂದೆ ಮೊದಲ ಮದುವೆಯಾಗಿದ್ದ ಈ ವ್ಯಕ್ತಿ ಕಳೆದ 7 ವರ್ಷದ ಹಿಂದೆ ಮೊದಲ ಪತ್ನಿಗೆ ಗೊತ್ತಾಗದಂತೆ ಗುಟ್ಟಾಗಿ ಎರಡನೇ ಮದುವೆ ಆಗಿದ್ದ. ವಿಷಯ ತಿಳಿದು ಮೊದಲ ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಇಕ್ಕಟ್ಟಿಗೆ ಸಿಲುಕಿದ್ದ. 

ಹೌದು, ಬಿಹಾರದಲ್ಲಿ ಬೆಳಕಿಗೆ ಬಂದಿರುವ ಈ ವಿಚಿತ್ರ ಪ್ರಕರಣವೀಗ ದೇಶದ ಗಮನ ಸೆಳೆದಿದೆ. ಇದು ಒಬ್ಬನೇ ಗಂಡನನ್ನು ಇಬ್ಬರು ಪತ್ನಿಯರು ಹಂಚಿಕೊಂಡಿರುವ ಅಪರೂಪದ ಪ್ರಸಂಗ. ಪೊಲೀಸ್ ಕೌಟುಂಬಿಕ ಸಾಂತ್ವನ ಕೇಂದ್ರ ನೀಡಿರುವ ಒಪ್ಪಂದದ ಪ್ರಕಾರ, ಪತಿರಾಯ ಮೊದಲ ಹೆಂಡತಿ ಬಳಿ ವಾರದಲ್ಲಿ ನಾಲ್ಕು ದಿನ ಮತ್ತು ಎರಡನೇ ಹೆಂಡತಿ ಬಳಿ ಮೂರು ದಿನಗಳ ಕಾಲ ಸಂಸಾರ ನಡೆಸಬೇಕಾಗಿದೆ.

ಮೊದಲ ಪತ್ನಿ ಪೂರ್ಣಿಮಾ ಗಂಡನ ನಡೆಯಿಂದ ಬೇಸತ್ತು ಪೂರ್ನಿಯಾ ಪೊಲೀಸ್ ಠಾಣೆ ಕಚೇರಿಗೆ ತೆರಳಿ, ತನ್ನ ಪತಿ ಶಂಕರ್ ವಿರುದ್ಧ ದೂರು ನೀಡಿದ್ದರು. ತಾವಿಬ್ಬರು 2000ನೇ ಇಸ್ವಿಯಲ್ಲಿ ಮದುವೆಯಾಗಿದ್ದು, ಇಬ್ಬರು ಮಕ್ಕಳು ಸಹ ಇದ್ದಾರೆ. ನನಗೆ ಗೊತ್ತಾಗದಂತೆ ನನ್ನ ಗಂಡ ಉಷಾ ದೇವಿ ಎಂಬವಳನ್ನ ಎರಡನೇ ಮದುವೆಯಾಗಿದ್ದಾನೆ ಎಂದು ಎಸ್ಪಿ ಎದುರು ಅಳಲು ತೋಡಿಕೊಂಡಿದ್ದರು.

ಶಂಕರ್ ಅವರ ಮೊದಲ ಪತ್ನಿ ಪೂರ್ಣಿಮಾ, ತನ್ನ ಪತಿ ಕುಟುಂಬದ ನಿರ್ವಹಣೆಗೆ ಹಣ ನೀಡುತ್ತಿಲ್ಲ. ಮಕ್ಕಳ ಶಿಕ್ಷಣವನ್ನು ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಅವರ ದೂರು ಆಲಿಸಿದ್ದು, ಈ ಕುರಿತಂತೆ ಪೊಲೀಸ್ ಕೌಟುಂಬಿಕ ಸಾಂತ್ವನ ಕೇಂದ್ರದಲ್ಲಿ ದೂರು ನೀಡುವಂತೆ ಸೂಚಿಸಿ, ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗಿತ್ತು ಎಂದು ಎಸ್ಪಿ ಕಾರ್ತಿಕೇಯಾ ಶರ್ಮಾ ಮಾಹಿತಿ ನೀಡಿದ್ದಾರೆ.

A beloved husband of two wives, husband now victim of the wives quarrel in patna.